ಪರಿಷತ್; ದಕ್ಷಿಣ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

ಶಿವಮೊಗ್ಗ, ಜನವರಿ 01: ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ಅಂತಿಗೊಳಿಸಲಾಗಿದ್ದು, ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಡಿಸೆಂಬರ್ 30ರಂದು ಅಂತಿಮಗೊಳಿಸಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ, ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಸಾಗರ ತಾಲೂಕು ಕಚೇರಿಗಳಲ್ಲಿ ಮತ್ತು ಶಿವಮೊಗ್ಗ, ಸಾಗರ ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಅಂತಿಮ ಪಟ್ಟಿ ಲಭ್ಯವಿದೆ.

South West Teachers Constituency Draft Voters List

ಜಿಲ್ಲಾಧಿಕಾರಿಗಳ ವೆಬ್‍ಸೈಟ್ ಮತ್ತು ceo.karnataka.gov.inರಲ್ಲಿ ಸಹ ಮತದಾರರ ಪಟ್ಟಿ ಪರಿಶೀಲನೆಗಾಗಿ ಲಭ್ಯವಿರುತ್ತದೆ. ಈಗಾಗಲೇ ಹೆಸರು ನೋಂದಣಿ ಮಾಡಿಸಿರುವವರು ಅಂತಿಮ ಪಟ್ಟಿಯನ್ನು ಪರಿಶೀಲಿಸಿ ತಮ್ಮ ಹೆಸರು ಇರುವ ಕುರಿತು ಖಚಿತಪಡಿಸಿಕೊಳ್ಳಬಹುದು.

ಎಷ್ಟು ಮತದಾರರು?; ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-18 ರಲ್ಲಿ , ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ನಮೂನೆ-19 ರಲ್ಲಿ ನಾಮಪತ್ರಗಳ ಸ್ವೀಕೃತಿಯ ಕೊನೆಯ ದಿನಾಂಕದವರೆಗೆ ಹೆಸರು ಸೇರ್ಪಡೆಗೆ ಅವಕಾಶಗಳಿದ್ದು, ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ/ ನಿಯೋಜಿತ ಅಧಿಕಾರಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದ ಮತದಾರರ ಅಂಕಿ ಅಂಶಗಳನ್ನು ಅಂತಿಮಗೊಳಿಸಲಾಗಿದೆ. ಭದ್ರಾವತಿ ಗಂಡಸರು-1672, ಹೆಂಗಸರು -1492 ಒಟ್ಟು 3164, ಹೊಸನಗರ ಗಂಡಸರು-739, ಹೆಂಗಸರು-553 ಒಟ್ಟು 1292, ಸಾಗರದಲ್ಲಿ ಗಂಡಸರು-971, ಹೆಂಗಸರು-831 ಒಟ್ಟು 1802 ಮತದಾರರು ಇದ್ದಾರೆ.

ಶಿಕಾರಿಪುರದಲ್ಲಿ ಗಂಡಸರು-1891, ಹೆಂಗಸರು-1007 ಒಟ್ಟು 2898, ಶಿವಮೊಗ್ಗ ಗ್ರಾಮಾಂತರದಲ್ಲಿ ಗಂಡಸರು-1227, ಹೆಂಗಸರು-878 ಒಟ್ಟು 2105, ಶಿವಮೊಗ್ಗ ನಗರದಲ್ಲಿ ಗಂಡಸರು-4774, ಹೆಂಗಸರು-4121 ಒಟ್ಟು 8895, ಸೊರಬದಲ್ಲಿ ಗಂಡಸರು-1156, ಹೆಂಗಸರು-606 ಒಟ್ಟು 1762, ತೀರ್ಥಹಳ್ಳಿಯಲ್ಲಿ ಗಂಡಸರು- 1097, ಹೆಂಗಸರು.-887 ಒಟ್ಟು-1984. ಒಟ್ಟು ಗಂಡಸರು -13,527, ಹೆಂಗಸರು -10,375 ಒಟ್ಟು 23902 ಮತದಾರರು.

ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಭದ್ರಾವತಿ ಗಂಡಸರು-244, ಹೆಂಗಸರು -198 ಒಟ್ಟು 442, ಹೊಸನಗರ - ಗಂಡಸರು-124, ಹೆಂಗಸರು-78 ಒಟ್ಟು 202, ಸಾಗರ ಗಂಡಸರು 292, ಹೆಂಗಸರು-174 ಒಟ್ಟು 466, ಶಿಕಾರಿಪುರ ಗಂಡಸರು-395, ಹೆಂಗಸರು-115 ಒಟ್ಟು 510 ಮತದಾರರು ಇದ್ದಾರೆ.

ಶಿವಮೊಗ್ಗ ಗ್ರಾಮಾಂತರ ಗಂಡಸರು-122, ಹೆಂಗಸರು-45 ಒಟ್ಟು 167, ಶಿವಮೊಗ್ಗ ನಗರ ಗಂಡಸರು 723, ಹೆಂಗಸರು-755 ಒಟ್ಟು 1478, ಸೊರಬ ಗಂಡಸರು-189, ಹೆಂಗಸರು-59 ಒಟ್ಟು 248, ತೀರ್ಥಹಳ್ಳಿ ಗಂಡಸರು- 235, ಹೆಂಗಸರು-159 ಒಟ್ಟು-394. ಒಟ್ಟು ಮತದಾರರು ಗಂಡಸರು 2,324, ಹೆಂಗಸರು 1,583 ಸೇರಿ ಒಟ್ಟು 3907 ಮತದಾರರು.

ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಅಂತಿಮಗೊಳಿಸಲಾಗಿದೆ. ಮತದಾರರ ನೋಂದಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿ, ಕೊಡಗು, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಪಟ್ಟಿ ಲಭ್ಯವಿದೆ.

ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ, ತಹಶೀಲ್ದಾರ್ ಕಚೇರಿಗಳಲ್ಲಿ, ಮಂಗಳೂರು ಮತ್ತು ಶಿವಮೊಗ್ಗ ಮಹಾನಗರಪಾಲಿಕೆ ಕಚೇರಿಗಳಲ್ಲಿ ಪರಿಶೀಲನೆಗಾಗಿ ಪಟ್ಟಿ ಲಭ್ಯವಿರುತ್ತದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಕ.ನೈ.ಶಿ ಮತ್ತು ಕ.ನೈ.ಪ.ಕ್ಷೇ ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+