ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

ಕರ್ನಾಟಕ ವಿಧಾನಸಭೆ ಚುನಾವಣೆ 2018 ಸೋಲಿಗೆ ಕಾರಣ ತಿಳಿಸಿದ ಸಿದ್ದರಾಮಯ್ಯ | Oneindia Kannada

ಶಿವಮೊಗ್ಗ, ಅಕ್ಟೋಬರ್.26: ಬಿಜೆಪಿಯ ಅಪಪ್ರಚಾರ ಮತ್ತು ಸುಳ್ಳು ಭರವಸೆಯಿಂದಾಗಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಂಡಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಈ ಸುಳ್ಳು ಭರವಸೆ ಮತ್ತು ಅಪಪ್ರಚಾರವನ್ನು ತಡೆಯಲು ಕ್ರಮಕೈಗೊಂಡಿದ್ದೇವೆ.

ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ!ಮಂಡ್ಯ ಚುನಾವಣೆ : ಸಿದ್ದರಾಮಯ್ಯ ಸಭೆ ವಿಫಲ, ಕಾಂಗ್ರೆಸ್ ಪ್ರಚಾರವಿಲ್ಲ!

2013ರ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ 19ರಲ್ಲಿ 13 ಸ್ಥಾನ ಕಾಂಗ್ರೆಸ್ ಗಳಿಸಿತ್ತು. ಬಿಜೆಪಿ 3 ಸ್ಥಾನ ಗಳಿಸಿತ್ತು. ಆದರೆ ಈ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 19 ರಲ್ಲಿ 16 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಈ ಭಾಗದಲ್ಲಿ ಕೆಲವು ಸಾವು ನೋವುಗಳು ಸಂಭವಿಸಿತ್ತು. ಈ ಸಾವು ನೋವಿನಲ್ಲಿ ಬಿಜೆಪಿ ರಾಜಕೀಯ ನಡೆಸಿತು.

ಅದರಲ್ಲೂ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೂತ್‌ ಪ್ರಮುಖ್ ಅವರನ್ನ ನೇಮಿಸಿ ಮತದಾರರ ಚಲನವಲನವನ್ನೆಲ್ಲಾ ನಿಯಂತ್ರಿಸುವಲ್ಲಿ ಸಫಲವಾಯಿತು. ಒಮ್ಮೆ ಹೀಗೆ ಮಾಡಲು ಸಾಧ್ಯವೇ ವಿನಃ ಪದೇ ಪದೆ ಈ ರೀತಿಯ ಪ್ರಯೋಗ ಮಾಡುವಲ್ಲಿ ಬಿಜೆಪಿ ವಿಫಲವಾಗಲಿದೆ ಎಂದು ಸಿದ್ದರಾಮಯ್ಯ ದೂರಿದರು. ಮುಂದೆ ಓದಿ...

 ಕಾಂಗ್ರೆಸ್ ಯಶಸ್ವಿ

ಕಾಂಗ್ರೆಸ್ ಯಶಸ್ವಿ

"ಕರಾವಳಿ ಪ್ರದೇಶವನ್ನ ಬಿಜೆಪಿ ಹಿಂದುತ್ವದ ಪ್ರಯೋಗಾಲಯವನ್ನಾಗಿ ಪರಿವರ್ತಿಸಲು ಯತ್ನಿಸಿ ಬಿಜೆಪಿ ಯಶಸ್ವಿಯಾಗಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ ಶೇಕಡವಾರು ಮತ ಕ್ರೂಢೀಕರಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಬಿಜೆಪಿ ಶೇ. 34.42 ರಷ್ಟು ಮತ ಪಡೆದುಕೊಂಡು 104 ಸ್ಥಾನ ಪಡೆದರೆ, ಜೆಡಿಎಸ್ ಶೇ.19 ರಷ್ಟು ಗಳಿಸಿ 37 ಸ್ಥಾನ ಪಡೆದುಕೊಂಡಿತ್ತು" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

 ಚುನಾವಣೆ ಕೇವಲ ಗಣಿತವಲ್ಲ

ಚುನಾವಣೆ ಕೇವಲ ಗಣಿತವಲ್ಲ

"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.38 ರಷ್ಟು ಮತ ಪಡೆದು 80 ಸೀಟು ಗಳಿಸಿತು. ಹಾಗಾಗಿ ಚುನಾವಣೆ ಕೇವಲ ಗಣಿತವಲ್ಲ. ಮುಂದಿನ ಬಾರಿ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೆ ನೋಡೋಣ" ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ

 ಬಿಎಸ್ ವೈ ತರಹ ದುರಾಸೆ ಇಲ್ಲ

ಬಿಎಸ್ ವೈ ತರಹ ದುರಾಸೆ ಇಲ್ಲ

"ಬಿಎಸ್ ವೈ ತರಹ ನನಗೆ ಮುಖ್ಯಮಂತ್ರಿ ಆಗಬೇಕೆಂಬ ದುರಾಸೆ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದೆ. ಆದರೆ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತಮ ಆಡಳಿತ ನಡೆಸಿ ಚುನಾವಣೆಯಿಂದ ಹಿಂದೆ ಸರಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಕಾರಣದಿಂದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಕತ್ತಿದ್ದರೆ ಎಂಪಿ ಸ್ಥಾನ ಗೆದ್ದು ತೋರಿಸಿ: ದೇವೇಗೌಡರಿಗೆ ಯಡಿಯೂರಪ್ಪ ಸವಾಲುತಾಕತ್ತಿದ್ದರೆ ಎಂಪಿ ಸ್ಥಾನ ಗೆದ್ದು ತೋರಿಸಿ: ದೇವೇಗೌಡರಿಗೆ ಯಡಿಯೂರಪ್ಪ ಸವಾಲು

 ಮಧು ಬಂಗಾರಪ್ಪ ಪರ ಪ್ರಚಾರ

ಮಧು ಬಂಗಾರಪ್ಪ ಪರ ಪ್ರಚಾರ

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಶಿವಮೊಗ್ಗದಲ್ಲಿ ನಿನ್ನೆ ಗುರುವಾರ (ಅ.26) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಪ್ರಚಾರದ ಸಮಯದಲ್ಲಿ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳುಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳು

English summary
Former Chief Minister Siddaramaiah told reason for the defeat of the Congress in the 2018 elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X