ಬಿಜೆಪಿಗೆ ಮೋದಿ ನಾಯಕ, ಸಿದ್ದರಾಮಯ್ಯ ಅಲ್ಲ: ಜಾರಕಿಹೊಳಿಗೆ ಈಶ್ವರಪ್ಪ ಕ್ಲಾಸ್‌

ಶಿವಮೊಗ್ಗ, ಡಿಸೆಂಬರ್ 17: 'ಸಿದ್ದರಾಮಯ್ಯ ನನ್ನ ಗುರುಗಳು' ಎಂದಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ರಮೇಶ್ ಜಾರಕಿಹೊಳಿ ತೆರಳಿದ್ದಾಗ, 'ಸಿದ್ದರಾಮಯ್ಯ ನನ್ನ ಗುರುಗಳು' ಎಂದು ಹೇಳಿದ್ದರು. ಇದರ ವಿರುದ್ಧ ಕೆ.ಎಸ್.ಈಶ್ವರಪ್ಪ ಆಕ್ಷೇಪ ಎತ್ತಿದ್ದಾರೆ.

'ಬಿಜೆಪಿ ಗೆ ನರೇಂದ್ರ ಮೋದಿ ನಾಯಕ, ಸಿದ್ದರಾಮಯ್ಯ ಅಲ್ಲ' ಎಂದು ಖಾರವಾಗಿಯೇ ಈಶ್ವರಪ್ಪ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.

Siddaramaiah Is Not Our Leader, Modi Is Our Leader: KS Eshwarappa

'ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಬಿಜೆಪಿ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸಿದ್ದರಾಮಯ್ಯ ಎಂದಿಗೂ ನಮ್ಮ ನಾಯಕ ಅಲ್ಲ, ಬಿಜೆಪಿ ಸೇರಿದ ಬಳಿಕ ರಮೇಶ್ ಜಾರಕಿಹೊಳಿ ಈ ಸತ್ಯವನ್ನು ತಿಳಿಯಬೇಕಿತ್ತು' ಎಂದು ಅಸಮಾಧಾನದ ಮಾತುಗಳನ್ನು ಆಡಿದ್ದಾರೆ.

ಬಿಜೆಪಿ ಸೇರಿರುವ ಮಾಜಿ ಅನರ್ಹರ ವಿರುದ್ಧ ಒಬ್ಬೊಬ್ಬರಾಗಿ ಮೂಲ ಬಿಜೆಪಿಗರು ಒಬ್ಬೊಬ್ಬರಾಗಿ ಅಸಮಾಧಾನ ಹೊರಹಾಕುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ಕುರಿತ ಹೇಳಿಕೆಯನ್ನು ಮುಂದಿಟ್ಟುಕೊಂಡು ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಆರೋಗ್ಯ ಸರಿಯಿಲ್ಲದಾಗ ಈಶ್ವರಪ್ಪ ಸಹ ಆರೋಗ್ಯ ವಿಚಾರಣೆಗೆ ತೆರಳಿದ್ದರು. ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಿದ್ದರು. ಅಲ್ಲದೇ 'ಸಿದ್ದರಾಮಯ್ಯ-ನಾನು ಸಾಯುವ ವರೆಗೂ ಮಿತ್ರರು' ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+