ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ 6 ಪೊಲೀಸ್ ಠಾಣೆಯ 82 ರೌಡಿಗಳ ಪರೇಡ್, ಖಡಕ್ ವಾರ್ನಿಂಗ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್‌ 16: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದ ಆರು ಪೊಲೀಸ್ ಠಾಣೆ ವ್ಯಾಪ್ತಿಯ 82 ರೌಡಿಗಳ ಪರೇಡ್ ನಡೆಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಪ್ರತಿ ರೌಡಿಯ ಹಿನ್ನೆಲೆ ಪರಿಶೀಲಿಸಿ ಖಡಕ್‌ ವಾರ್ನಿಂಗ್ ನೀಡಿದರು.

ಡಿಎಆರ್ ಮೈದಾನದಲ್ಲಿ ರೌಡಿ ಪರೇಡ್ ನಡೆಸಲಾಗಿದ್ದು, ದೊಡ್ಡಪೇಟೆ, ಕೋಟೆ, ತುಂಗಾ ನಗರ, ಶಿವಮೊಗ್ಗ ಗ್ರಾಮಾಂತರ, ಜಯನಗರ ಮತ್ತು ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳ ಪರೇಡ್ ನಡೆಸಲಾಯಿತು. 82 ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು. ಎಲ್ಲಾ ರೌಡಿಗಳ ಹಿನ್ನೆಲೆ ಕುರಿತು ಮಾಹಿತಿ ಪಡೆದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಮತ್ತೆ ಕಾನುನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಸೂಚನೆ ನೀಡಿದರು. ಅಲ್ಲದೇ ಪರೇಡ್‌ನಲ್ಲಿ ಪಾಲ್ಗೊಂಡಿದ್ದವರ ಆದಾಯದ ಮೂಲ, ಜೀವನೋಪಾಯಕ್ಕೆ ಮಾಡುತ್ತಿರುವ ಕೆಲಸದ ಕುರಿತು ಇಂಚಿಚು ಮಾಹಿತಿಯನ್ನು ಕಲೆಹಾಕಿದರು.

ಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶಶಿವಮೊಗ್ಗ ಡಿಸಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿ ಯುವಕನ ಆಕ್ರೋಶ

ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಪೊಲೀಸ್ ಠಾಣೆಗೆ ಹಾಜರಾಗಿ, ಹಾಜರಾತಿಗೆ ಸಹಿ ಹಾಕಬೇಕು. ಯಾವುದಾದರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Shivamogga police strict warn to 82 rowdy sheeters

ಮೂವರ ವಿರುದ್ಧ ಪ್ರಕರಣ ದಾಖಲು

ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಪ್ರೇಮ್‌ಸಿಂಗ್‌ ಚಾಕು ಇರಿತ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ 1967 ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿತ್ತು. ತನ್ವೀರ್‌ ಅಹಮ್ಮದ್‌ (22), ನದೀಮ್‌ ಫೈಜಲ್‌(25) ಹಾಗೂ ಅಬ್ದುಲ್‌ ರೆಹಮಾನ್‌(25) ಹಾಗೂ ಮೊಹಮ್ಮದ್‌ ಜಬೀ ಅಲಿಯಾಸ್‌ ಚರ್ಬಿ(30) ಎಂಬುವವರ ಮೇಲೆ ಯುಎಪಿಎ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಆಗ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಹಿಂದೂಗಳ ಮೇಲೆ ಹಲ್ಲೆ ನಡೆಸಿದವರನ್ನು ಶೂಟೌಟ್ ಮಾಡಿರುವುದು ಒಂದು ಪಾಠ ಆದಂತಾಗದೆ. ಅಗತ್ಯವಿದ್ದರೆ ಉತ್ತರ ಪ್ರದೇಶದ ಯೋಗಿ ಮಾದರಿ ಜಾರಿಗೆ ತರುತ್ತೇವೆ. ಗೂಂಡಾಗಳಿಗೆ ತಕ್ಕಪಾಠ ಕಲಿಸುತ್ತೇವೆ' ಎಂದು ಗುಡುಗಿದ್ದರು.

ರೌಡಿಗಳ ಬಂಧನ ಅವಧಿ ವಿಸ್ತರಿಸಿದ್ದ ಸರ್ಕಾರ

ಇನ್ನು ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೂವರು ರೌಡಿಗಳ ಬಂಧನ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶಿಸಿತ್ತು. ಟಿಪ್ಪುನಗರದ ಜಮೀರ್‌ ಅಲಿಯಾಸ್‌ ಬಚ್ಚಾ ಅಲಿಯಾಸ್‌ ಬಚ್ಚನ್‌(31), ಸೂಳೆಬೈಲಿನ ಸಲೀಂ (36), ಕಡೇಕಲ್‌ ನಿವಾಸಿ ಅಬೀದ್‌ ಖಾನ್‌ ಅಲಿಯಾಸ್‌ ಕಡೇಕಲ್‌ ಅಬೀದ್‌ (34) ಎಂಬುವವರ ಬಂಧನದ ಅವಧಿಯನ್ನು 1 ವರ್ಷದವರೆಗೆ ಮುಂದುವರಿಸಲಾಗಿತ್ತು. ಬಚ್ಚನ್‌ 17ನೇ ವರ್ಷದ ವಯಸ್ಸಿನಿಂದಲೇ ರೌಡಿ ಮತ್ತು ಸಮಾಜಘಾತಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿತ್ತು. ತನ್ನ ಸಹಚರರೊಂದಿಗೆ ಗುಂಪೊಂದನ್ನು ಕಟ್ಟಿಕೊಂಡು, ಮಾರಕಾಸ್ತ್ರ ಹಿಡಿದು, ಕೊಲೆ ಪ್ರಯತ್ನ, ದರೋಡೆ, ಸರಕಾರಿ ನೌಕರರ ಕೆಲಸಕ್ಕೆ ಅಡ್ಡಿ ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನುವ ಆರೋಪಗಳಿದ್ದವು.

ಬಚ್ಚನ್‌ ಎಂಬಾತನ ವಿರುದ್ಧ ಶಿವಮೊಗ್ಗ, ಬೆಂಗಳೂರು ನಗರ, ಮಂಡ್ಯ ಹಾಗೂ ಹಾಸನದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 22 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧ ರೌಡಿಶೀಟ್‌ ಮತ್ತು ಎಂಒಬಿ ಕಾರ್ಡ್‌ಗಳನ್ನು ತೆರೆಯಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ಬಾಂಡ್‌ ಓವರ್‌ ಮಾಡಿದ್ದರೂ ಬಾಂಡ್‌ನ ಷರತ್ತುಗಳನ್ನು ಉಲ್ಲಂಘಿಸಿ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿತ್ತು. ಜಿಲ್ಲಾಧಿಕಾರಿ ಕೋರಿಕೆ ಮೇರೆಗೆ ಬಚ್ಚನ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿಇರಿಸಲಾಗಿತ್ತು.

English summary
82 rowdy Sheeters Parade of 6 police stations in Shivamogga, Notice not to participate in criminal activities know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X