ನಕಲಿ ಟಿಕ್ ಟಾಕ್ ಅಕೌಂಟ್ ತೆರೆದು ಅಶ್ಲೀಲ ವೀಡಿಯೋ ವೈರಲ್ ಮಾಡಿದ ಆರೋಪಿ ಬಂಧನ
ಶಿವಮೊಗ್ಗ, ಅಕ್ಟೋಬರ್ 11: ನಕಲಿ ಟಿಕ್ ಟಾಕ್ ಅಕೌಂಟ್ ತೆರೆದು ಮಹಿಳೆಯೊಬ್ಬರ ವೀಡಿಯೋಗೆ ಅಶ್ಲೀಲ ಧ್ವನಿ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಶಿವಮೊಗ್ಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಭದ್ರಾವತಿ ತಾಲೂಕು ಶಂಕರಘಟ್ಟದ ಬಳಿ ಇರುವ ಗೋಣಿಬೀಡು ನಿವಾಸಿ ಸಂಜಯ್ ಕುಮಾರ್ (23) ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಓಲಾ ಕಾರ್ ಡ್ರೈವರ್ ಎಂದು ತಿಳಿದುಬಂದಿದೆ. ಕುವೆಂಪು ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಫೋಟೊ ಪಡೆದು ಅವರ ಹೆಸರಿನಲ್ಲಿ ಟಿಕ್ ಟಾಕ್ ನಲ್ಲಿ ಅಕೌಂಟ್ ತೆರೆದಿದ್ದಾನೆ. ಮಹಿಳೆಯ ವೀಡಿಯೋಗೆ ಅಶ್ಲೀಲ ರೀತಿಯಲ್ಲಿ ಧ್ವನಿ ನೀಡಿ ಅದನ್ನು ವೈರಲ್ ಮಾಡಿರುವ ಆರೋಪದ ಮೇರೆಗೆ ಬಂಧಿಸಲಾಗಿದೆ.

ಮಹಿಳೆ ನೀಡಿದ ದೂರಿನ ಆಧಾರದ ಮೇರೆಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಅವರ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ರೀತಿ ಮಹಿಳೆಯರ ಹೆಸರನ್ನು ಬಳಸಿಕೊಂಡು ನಕಲಿ ಖಾತೆ ತೆರೆದು ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಮಹಿಳೆಯರು ಎಚ್ಚರ ವಹಿಸಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.












Click it and Unblock the Notifications