ಶಿವಮೊಗ್ಗ ನಗರ ಚುನಾವಣಾ ಫಲಿತಾಂಶ; ಬಿಜೆಪಿಯ ಚನ್ನಬಸಪ್ಪ ಗೆಲುವು

ಶಿವಮೊಗ್ಗ, ಮೇ 13; ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಗೆಲವು ಸಾಧಿಸಿದ್ದಾರೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಯ ಚನ್ನಬಸಪ್ಪ 41989 ಮತಗಳನ್ನು ಪಡೆದು ಮುನ್ನಡೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಹೆಚ್‌. ಸಿ. ಯೋಗೇಶ್ 22591 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ 4002 ಮತಗಳನ್ನು ಪಡೆದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ದಿನಾಂಕ ಘೋಷಣೆಯಾದ ಮೇಲೆ ಸುದ್ದಿಯಾಗಿರುವುದು ಶಿವಮೊಗ್ಗ ನಗರ ಕ್ಷೇತ್ರ. ಹಾಲಿ ಶಾಸಕ ಕೆ. ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಕಾರಣಕ್ಕೆ ಬಿಜೆಪಿ ಟಿಕೆಟ್ ಯಾರಿಗೆ? ಎಂಬ ಪ್ರಶ್ನೆ ಎದ್ದಿತ್ತು. ಈಶ್ವರಪ್ಪ ಮಾತ್ರವಲ್ಲ ಅವರ ಪುತ್ರ ಕೆ. ಈ. ಕಾಂತೇಶ್‌ಗೆ ಸಹ ಟಿಕೆಟ್ ಸಿಗಲಿಲ್ಲ.

ಈ ಬಾರಿಯ ಚುನಾವಣೆಗೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹೆಚ್. ಸಿ. ಯೋಗೇಶ್, ಬಿಜೆಪಿಯಿಂದ ಎಸ್. ಎನ್. ಚೆನ್ನಬಸವಪ್ಪ, ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಅಭ್ಯರ್ಥಿಗಳು. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ಜೆಡಿಎಸ್ ಸೇರಿದ ಮೇಲೆ ಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

karnataka-elections-2023-channabasappa

ಕೆ. ಎಸ್. ಈಶ್ವರಪ್ಪ 5 ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ ಈ ಬಾರಿ ಅವರ ರಾಜಕೀಯ ನಿವೃತ್ತಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಹಿನ್ನಡೆ ಆಗಲಿದೆಯೇ? ಕಾದು ನೋಡಬೇಕಿದೆ. ಈಶ್ವರಪ್ಪ ಆಪ್ತರೇ ಆದ ಎಸ್. ಎನ್. ಚೆನ್ನಬಸವಪ್ಪ ಯಾರಿಗೆ ಪೈಪೋಟಿ ನೀಡಲಿದ್ದಾರೆ?. ಬಿಜೆಪಿ ಜೊತೆ ಕಾಂಗ್ರೆಸ್‌ನಲ್ಲಿಯೂ ಟಿಕೆಟ್ ಸಿಗದ ಅಸಮಾಧಾನವಿದೆ.

1989, 1994, 2004, 2008, 2018ರಲ್ಲಿ ಈಶ್ವರಪ್ಪ ಗೆದ್ದು ಶಿವಮೊಗ್ಗ ನಗರವನ್ನು ಬಿಜೆಪಿ ಭದ್ರಕೋಟೆ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್‌ನ ಕೆ. ಬಿ. ಪ್ರಸನ್ನ ಕುಮಾರ್ ಈಶ್ವರಪ್ಪ ಸೋಲಿಸಿದ್ದರು. ಆದರೆ ಬಿಜೆಪಿ ಮತ್ತು ಕೆಜೆಪಿ ಗೊಂದಲದ ಕಾರಣ ಈಶ್ವರಪ್ಪ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಕಾಂಗ್ರೆಸ್‌ ನಾಯಕ, ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಟಿಕೆಟ್ ಕೈ ತಪ್ಪಿದ ಮೇಲೆ ಜೆಡಿಎಸ್ ಸೇರಿದರು. ಇದರಿಂದಾಗಿ ಆಯನೂರು ಮಂಜುನಾಥ್ ಬಲ ಹೆಚ್ಚಾಗಿದೆ. ಕಾಂಗ್ರೆಸ್ ಟಿಕೆಟ್ ಪಡೆದ ಹೆಚ್. ಸಿ. ಯೋಗೇಶ್‌ಗೆ ಈ ಅಂಶವೇ ಹಿನ್ನಡೆ ಉಂಟು ಮಾಡುವ ನಿರೀಕ್ಷೆ ಇದೆ.

1999ರ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಗೆದ್ದಿದ್ದ ಎಚ್. ಎಂ. ಚಂದ್ರಶೇಖರಪ್ಪ 2004ರಲ್ಲಿ ಸೋತಿದ್ದರು. ಅವರ ಪುತ್ರ ಯೋಗೇಶ್‌ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್‌ನ ಅಭ್ಯರ್ಥಿ. ಕ್ಷೇತ್ರದಲ್ಲಿ ಬ್ರಾಹ್ಮಣರು ನಿರ್ಣಾಯಕರಾಗಿದ್ದರೂ ಸಹ ಕಾಂಗ್ರೆಸ್ ಲಿಂಗಾಯತ ಸಮುದಾಯದ ಯುವ ನಾಯಕನಿಗೆ ಟಿಕೆಟ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+