Get Updates
Get notified of breaking news, exclusive insights, and must-see stories!

ಹತ್ತು ದಿನಗಳ ಶಿವಮೊಗ್ಗ ದಸರಾಕ್ಕೆ ಬನ್ನಿ

ಶಿವಮೊಗ್ಗ, ಸೆ.24 : ಮಲೆನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಹತ್ತು ದಿನಗಳ ದಸರಾ ಮಹೋತ್ಸವಕ್ಕೆ ಸೆ.25ರ ಗುರುವಾರ ಚಾಲನೆ ದೊರೆಯಲಿದೆ. ಶಿವಮೊಗ್ಗ ದಸರಾ ಆಚರಣೆಗಾಗಿ ಸರ್ಕಾರ 1 ಕೋಟಿ ರೂ.ಗಳನ್ನು ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಿದೆ.

ಪ್ರತಿವರ್ಷ ಶಿವಮೊಗ್ಗ ದಸರಾದಲ್ಲಿ ನಾಟಕ, ಸಿನಿಮಾ ಪ್ರದರ್ಶನ, ವಿವಿಧ ಕ್ರೀಡೆಗಳು ಆಕರ್ಷಣೆಗಳಾಗಿದ್ದವು. ಈ ಬಾರಿ ಯೋಗಾಭ್ಯಾಸ, ಆಹಾರ ಮೇಳ ಮುಂತಾದವುಗಳನ್ನು ಹತ್ತು ದಿನದ ದಸರಾ ಉತ್ಸವದಲ್ಲಿ ಸೇರಿಸಲಾಗಿದೆ. ಶಿವಮೊಗ್ಗ ದಸರಾವನ್ನು ಆಚರಿಸುವ ಮಹಾನಗರ ಪಾಲಿಕೆಗೆ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದೆ. [ಮೈಸೂರು ದಸರಾ ಚಿತ್ರಗಳನ್ನು ನೋಡಿ]

Shimoga

ಖ್ಯಾತ ಸಾಹಿತಿ ನಾ.ಡಿಸೋಜಾ ಅವರು ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಸೆ.29ರಂದು ದಸರಾವನ್ನು ಉದ್ಘಾಟಿಸಲಿದ್ದಾರೆ. ಸೆ.25 ಮತ್ತು 26ರಂದು ಮಹಿಳಾ ದಸರಾದ ಕಾರ್ಯಕ್ರಮಗಳು ಕುವೆಂಪು ರಂಗಮಂದಿರದಲ್ಲಿ ನಡೆಯಲಿವೆ. ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. [ಶಿವಮೊಗ್ಗ ದಸರಾ ವಿವರ ಇಲ್ಲಿದೆ ನೋಡಿ]

ಸಹ್ಯಾದ್ರಿ ಕಾಲೇಜಿನಲ್ಲಿ ಸೆ.27 ಮತ್ತು 28ರಂದು ಯುವ ದಸರಾದ ಕಾರ್ಯಕ್ರಮಗಳು ನಡೆಯಲಿವೆ. ಕುವೆಂಪು ರಂಗಮಂದಿರದಲ್ಲಿ ಸೆ.27ರಂದು ಯೋಗ ದಸರಾ ಕಾರ್ಯಕ್ರಮಗಳು ನಡೆಯಲಿದ್ದು, ಯೋಗಗುರು ಎನ್‌.ಎಲ್.ನಾಯಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅ.1 ಮತ್ತು 2ರಂದು ಕುವೆಂಪು ರಂಗಮಂದಿರದಲ್ಲಿ ಮಕ್ಕಳ ದಸರಾ ನಡೆಯಲಿದೆ. ಸುವರ್ಣ ಸಂಸ್ಕೃತಿ ಭವನದಲ್ಲಿ ಸೆ. 25ರಿಂದ 29ರ ವರೆಗೆ ವಿವಿಧ ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸೆ.29 ಮತ್ತು 30ರಂದು ಶಿವಪ್ಪನಾಯಕ ಅರಮನೆಯಲ್ಲಿ ಛಾಯಾಚಿತ್ರ ಪ್ರದರ್ಶನವಿದೆ.

ಅ.4ರಂದು ಶಿವಪ್ಪ ನಾಯಕ ಅರಮನೆಯಿಂದ ಆರಂಭವಾಗುವ ಅಂತಿಮ ದಿನದ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಸ್ಥಬ್ದ ಚಿತ್ರಗಳು, ಕಲಾಮೇಳಗಳು, ಸಕ್ರೆಬೈಲು ಆನೆಗಳು ಪಾಲ್ಗೊಳ್ಳಲಿವೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಈ ಮೆರವಣಿಗೆ ಅಂತ್ಯಗೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+