ಶಿವಮೊಗ್ಗದಲ್ಲಿ ಮಳೆ ಪ್ರಮಾಣ; ಜಲಾಶಯಗಳ ಇಂದಿನ ಮಟ್ಟ ಎಷ್ಟಿದೆ?

ಶಿವಮೊಗ್ಗ, ಸೆಪ್ಟೆಂಬರ್ 5: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 144.02 ಮಿ.ಮೀ. ಮಳೆಯಾಗಿದ್ದು, ಸರಾಸರಿ 20.57 ಮಿ.ಮೀ. ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 79.96 ಮಿ.ಮೀ ಮಳೆ ದಾಖಲಾಗಿದೆ.

ಶಿವಮೊಗ್ಗ 34.40 ಮಿ.ಮೀ., ಭದ್ರಾವತಿ 21.60, ತೀರ್ಥಹಳ್ಳಿ 12.80, ಸಾಗರ 22.02, ಶಿಕಾರಿಪುರ 7.00, ಸೊರಬ 7.00 ಹಾಗೂ ಹೊಸನಗರ 39.20 ಮಿಮಿ. ಮಳೆಯಾಗಿದೆ.

Shivamogga: Rain And Reservoir Water Level On September 5

ಜಲಾಶಯಗಳ ನೀರಿನ ಮಟ್ಟ: ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ ಗಳಲ್ಲಿ...
ಲಿಂಗನಮಕ್ಕಿ: 1819 (ಗರಿಷ್ಠ), 1806.85 (ಇಂದಿನ ಮಟ್ಟ), 12286.00 (ಒಳಹರಿವು), 3452.00 (ಹೊರಹರಿವು)
ಭದ್ರಾ: 186 (ಗರಿಷ್ಠ), 183.30 (ಇಂದಿನ ಮಟ್ಟ), 8502.00 (ಒಳಹರಿವು), 2588.00 (ಹೊರಹರಿವು). ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 12882.00 (ಒಳಹರಿವು), 12882.00 (ಹೊರಹರಿವು).
ಮಾಣಿ: 595 (ಎಂಎಸ್‌ಎಲ್‌ಗಳಲ್ಲಿ), 586.10 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 659 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಪಿಕ್ ‌ಅಪ್: 563.88 (ಎಂಎಸ್‌ಎಲ್‌ಗಳಲ್ಲಿ), 561.24 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 369 (ಒಳಹರಿವು), 0.00(ಹೊರಹರಿವು ಕ್ಯೂಸೆಕ್ ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್‌ಗಳಲ್ಲಿ), 572.52 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 0.00 (ಒಳಹರಿವು), 744 (ಹೊರಹರಿವು ಕ್ಯೂಸೆಕ್ ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), 576.00 (ಇಂದಿನ ಮಟ್ಟ ಎಂ.ಎಸ್.ಎಲ್‌ನಲ್ಲಿ), 222.00 (ಒಳಹರಿವು), 1080.00 (ಹೊರಹರಿವು ಕ್ಯೂಸೆಕ್ ಗಳಲ್ಲಿ).

ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಈಗಾಗಲೇ ತುಂಗಾ ನದಿ ಪಾತ್ರದ ಜನತೆಗೆ ಅಧಿಕಾರಿಗಳು ನದಿಪಾತ್ರದಲ್ಲಿ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+