ಲಾಕ್ ಡೌನ್ ನಡುವೆಯೇ ನಡುರಾತ್ರಿ ಹಾರನಹಳ್ಳಿಯಲ್ಲಿ ಗಲಭೆ
ಶಿವಮೊಗ್ಗ, ಏಪ್ರಿಲ್ 29: ಶಿವಮೊಗ್ಗದ ಹಾರನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ.
Recommended Video
ತಮ್ಮ ಕ್ಷೇತ್ರದ ಜನರ ಕಷ್ಟಕ್ಕೆ ದಾವಿಸಿ ಬಂದ ಕುಮಾರ್ ಬಂಗಾರಪ್ಪ | Kumar Bangarappa | oneindia Kannada
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾರನಹಳ್ಳಿ ಭಾಗದಲ್ಲಿ ಗೋವುಗಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚಿದ್ದು, ಇದೇ ಘರ್ಷಣೆಗೆ ಕಾರಣ ಎನ್ನಲಾಗಿದೆ. ಪೊಲೀಸರು ಲಾಕ್ ಡೌನ್ ಭದ್ರತೆಯಲ್ಲಿರುವುದರಿಂದ ಗೋವುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.

ಎರಡು ದಿನಗಳ ಹಿಂದೆ ಕರು ಕಳ್ಳಸಾಗಣೆ ಮಾಡುತ್ತಿರುವಾಗ ಕರುವನ್ನು ರಕ್ಷಿಸಿ ರಾಮಚಂದ್ರಾಪುರ ಮಠಕ್ಕೆ ಭಜರಂಗದಳದ ಕಾರ್ಯಕರ್ತರು ಬಿಟ್ಟಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ಕಲ್ಲು ತೂರಾಟವೂ ನಡೆದಿದೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.












Click it and Unblock the Notifications