• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ವಾರಂಟೈನ್ 14 ರಿಂದ 28 ದಿನಕ್ಕೆ ವಿಸ್ತರಣೆ, ಮುಂದುವರೆಯುತ್ತಾ ಲಾಕ್‌ಡೌನ್?

By ಶಿವಮೊಗ್ಗ ಪ್ರತಿನಿಧಿ
|

ತೀರ್ಥಹಳ್ಳಿ(ಶಿವಮೊಗ್ಗ), ಏಪ್ರಿಲ್ 5: ಕಿಲ್ಲರ್ ಕೊರೊನಾ ವೈರಸ್ ಎಲ್ಲೆಡೆ ಹಬ್ಬುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ವಿದೇಶದಿಂದ, ಬೇರೆ ಬೇರೆ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ತಮ್ಮ ತಮ್ಮ ಊರಿಗೆ ಪ್ರಯಾಣಿಸಿದವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗೆ ಸ್ಟಿಕ್ಕರ್ ಅಂಟಿಸಲಾಗಿದೆ.

ತೀರ್ಥಹಳ್ಳಿಯ ಮನೆಯೊಂದರ ಗೋಡೆಗೆ ಅಂಟಿಸಿರುವ ಸ್ಟಿಕ್ಕರ್ ನಲ್ಲಿ 14 ದಿನಗಳು ಮನೆಯಲ್ಲಿ ಇರಬೇಕೆಂದು ಸೂಚಿಸಲಾಗಿದೆ. ಆದರೀಗ ಹೋಮ್ ಕ್ವಾರಂಟೈನ್ ಅನ್ನು 14 ರಿಂದ 28 ದಿನಗಳವರೆಗೂ ಮುಂದುವರೆಲಾಗಿದೆ. ಆರೋಗ್ಯ ಇಲಾಖೆ ಸೂಚನೆ ಮೇರೆಗೆ 14 ರಿಂದ 28 ದಿನಗಳ ವರೆಗೂ ವಿಸ್ತರಿಸಲಾಗಿದೆ.

ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು?

"ಕೋವಿಡ್-19 ಯಾರು ಪ್ರವೇಶಿಸಬಾರದು. ಈ ಮನೆ ನಿಗಾವಣೆಯಲ್ಲಿದೆ". ಎನ್ನುವ ಸ್ಟಿಕ್ಕರ್ ನಲ್ಲಿ ಎಷ್ಟು ದಿನಗಳವರೆಗೂ ಕ್ವಾರಂಟೈನ್ ನಲ್ಲಿ ಇರಬೇಕೆಂದು ನಮೂದಿಸಲಾಗಿದೆ.

ಅಂದ್ಹಾಗೆ ಕ್ವಾರಂಟೈನ್ ದಿನ ಹೆಚ್ಚಿಸುತ್ತಿದ್ದಂತೆ ಲಾಕ್ ಡೌನ್ ಕೂಡ ಮುಂದುವರೆಯುತ್ತ ಎನ್ನುವ ಪ್ರಶ್ನೆ ದೇಶದ ಜನರನ್ನು ಕಾಡುತ್ತಿದೆ. ಕ್ವಾರಂಟೈನ್ ವಿಸ್ತರಣೆ ಈಗ ಏಪ್ರಿಲ್ 14ರ ವರೆಗೂ ಇದ್ದ ಲಾಕ್ ಲೌಡ್ ಅವಧಿ ಇನ್ನೂ ಮುಂದುವರೆಯು ಸೂಚನೆ ನೀಡಿದಂತೆ ಆಗಿದೆ. ಜನರೀಗ 14ಕ್ಕೆ ಲಾಕ್ ಡೌನ್ ಕೊನೆಯಾಗುತ್ತಾ ಎನ್ನುವ ಗೊಂದಲ್ಲಿದ್ದಾರೆ.

ಕ್ವಾರಂಟೈನ್ ದಿನ ವಿಸ್ತರಣೆ ಆಗಿರುವುದನ್ನು ನೋಡಿ, 14ಕ್ಕೆ ಲಾಕ್ ಡೌನ್ ಮುಗಿಯುತ್ತೆ ಅಂತ ಅಂದುಕೊಂಡವರು ಮತ್ತೆ ನಿರಾಸೆ ಪಟ್ಟುಕೊಳ್ಳುವಂತಾಗಿದೆ. ಇನ್ನೂ ಕೊರೊನಾ ಪೀಡಿತರು ಹೆಚ್ಚಾಗಿರುವ ಪ್ರದೇಶಗಳನ್ನು ಬಿಟ್ಟು ಉಳಿದ ಪ್ರದೇಶಗಳಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಬಂದರ ನಂತರಷ್ಟೇ ತಿಳಿಯಲಿದೆ. ಒಟ್ಟಾರೆ, ಈ ಎಲ್ಲಾ ಗೊಂದಲಕ್ಕೆ ಏಪ್ರಿಲ್ 14ರಂದು ಉತ್ತರ ಸಿಗುವ ಸಾಧ್ಯತೆಯಿದೆ.

English summary
Dis: The quarantine period for Covid-19 extended from 14 days to 28 days. Will the Lock Down period also be extended?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X