ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಸೋಲಾರ್ ಬೇಲಿಯಿಂದಾಗಿ ಮನೆಯಿಂದ ಹೊರಬಾರದ ಗ್ರಾಮಗಳ ಜನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 19: ಕೊರೊನಾ ವೈರಸ್ ಕಾರಣದಿಂದಾಗಿ ಜನರು ಮನೆಯಿಂದ ಹೊರಬಾರದೆ ಮನೆಯಲ್ಲಿಯೇ ಸೀಲ್ ಡೌನ್ ಆಗಿದ್ದರು. ಈಗೀಗ ಬಹುತೇಕ ಎಲ್ಲರೂ ಹೊರ ಬರುತ್ತಿದ್ದಾರೆ.

Recommended Video

ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

ಆದರೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಲ್ಲಂದೂರು, ಬಾಳೇಹಳ್ಳಿ ಸೇರಿ ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆಯವರು ಸೋಲಾರ್ ಬೇಲಿ ಹಾಕಿದ್ದಾರೆ. ಒಂದು ಕಡೆ ಕಾಡಾನೆ ಕೂಡ ಹಾವಳಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಲಾಕ್ ಡೌನ್ ಮುಗಿದರೂ ಮನೆಯಿಂದ ಹೊರಬಾರದಂತಹ ಸ್ಥಿತಿಯನ್ನು ಇಲ್ಲಿನ ಗ್ರಾಮಸ್ಥರು ಅನುಭವಿಸುತ್ತಿದ್ದಾರೆ.

ತುಂಗಾ ಜಲಾಶಯ ಭರ್ತಿಗೆ 1 ಅಡಿ ಬಾಕಿ; 2000 ಕ್ಯೂಸೆಕ್ ನೀರು ನದಿಗೆತುಂಗಾ ಜಲಾಶಯ ಭರ್ತಿಗೆ 1 ಅಡಿ ಬಾಕಿ; 2000 ಕ್ಯೂಸೆಕ್ ನೀರು ನದಿಗೆ

ಈಗಾಗಲೇ ಸಾಕಷ್ಟು ಬಾರಿ ಅರಣ್ಯ ಇಲಾಖೆಯು ಗ್ರಾಮದಿಂದ ಒಕ್ಕಲೆಬ್ಬಿಸುವುದಕ್ಕೆ ಜನರಿಗೆ ಕಿರುಕುಳ ನೀಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಮನೆಗಳ ಮುಂಭಾಗದಲ್ಲಿ ಸೋಲಾರ್ ಬೇಲಿ ನಿರ್ಮಿಸಿ ಅರಣ್ಯ ಇಲಾಖೆ ನಿರ್ಬಂಧವನ್ನು ಹೇರಿದೆ. 6 ಅಡಿ ಎತ್ತರದ ಸೋಲಾರ್ ಬೇಲಿ ನಿರ್ಮಿಸಿ ಜನರ ದಶಕಗಳ ಸ್ವತಂತ್ರ ಬದುಕಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಿದೆ. ಮನೆ ಮುಂಭಾಗ ಸೋಲಾರ್ ಬೇಲಿ ನಿರ್ಮಾಣ ಮಾಡಿರುವ ಅರಣ್ಯ ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಸ್ತೆ ನಿರ್ಮಾಣ ನಿರ್ಮಾಣದಂತಹ ಅನೇಕ ಕೆಲಸಗಳಿವೆ

ರಸ್ತೆ ನಿರ್ಮಾಣ ನಿರ್ಮಾಣದಂತಹ ಅನೇಕ ಕೆಲಸಗಳಿವೆ

ಮಲ್ಲಂದೂರು, ಬಾಳೇಹಳ್ಳಿ, ಆಗುಂಬೆ ಕಾಡಂಚಿನ ಪ್ರದೇಶಗಳಾಗಿದ್ದು, ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿವೆ. ಈ ಭಾಗದಲ್ಲಿ ರಸ್ತೆ ಉನ್ನತೀಕರಣ, ಹೊಸ ರಸ್ತೆ ನಿರ್ಮಾಣ, ಗಸ್ತು ತಿರುಗುವಿಕೆ, ಹಾದಿ ಸುಗಮ ಸಂಚಾರ, ಸೇತುವೆ ನಿರ್ಮಾಣ, ವನ್ಯಜೀವಿ ಪರಿವೀಕ್ಷಣೆಗೆ ತಂಡ ರಚನೆ, ವೀಕ್ಷಣಾ ಗೋಪುರ ನಿರ್ಮಾಣ, ಕೇಂದ್ರ ಸ್ಥಾನದಲ್ಲಿ ಅಪರಾಧ ಕೋಶ ರಚನೆ, ವಿವಿಧ ಜಾತಿಯ ಮಣ್ಣು, ತೇವಾಂಶ ಸಂರಕ್ಷಣೆ, ನೀರು ಕೊಯ್ಲು, ನಾಲೆ ಬಂದ್ ಸಂರಕ್ಷಣೆ, ಕೆರೆ, ಚೆಕ್ ಡ್ಯಾಂ, ಬಾವಿ, ಕೊಳ, ಜರಿ ಅಭಿವೃದ್ಧಿ, ಬೆಂಕಿ ತಡೆ, ಸಲಕರಣೆ ಖರೀದಿ ಇನ್ನಿತರೆ ಚಟುವಟಿಕೆಗೆ ಅವಕಾಶ ಇದೆ.

ಅರಣ್ಯ ರಕ್ಷಣಾ ಸಮಿತಿ ಒಗ್ಗೂಡಿಸಿಕೊಂಡು ಕಳ್ಳಬೇಟೆ ತಡೆಯಬೇಕು

ಅರಣ್ಯ ರಕ್ಷಣಾ ಸಮಿತಿ ಒಗ್ಗೂಡಿಸಿಕೊಂಡು ಕಳ್ಳಬೇಟೆ ತಡೆಯಬೇಕು

ಅಭಯಾರಣ್ಯ ವ್ಯಾಪ್ತಿಯಲ್ಲಿ ಪ್ರಾಣಿ ಬೇಟೆ ತಡೆಗೆ ಜಾಗೃತಿ ಶಿಬಿರ ಕಾರ್ಯಕ್ರಮ ನಡೆಸಬೇಕು. ರಕ್ಷಿತ ಪ್ರದೇಶದ ಅಂಚಿನ ಗಿರಿಜನರ ಸಹಕಾರ ಮತ್ತು ಅರಣ್ಯ ರಕ್ಷಣಾ ಸಮಿತಿ ಸದಸ್ಯರನ್ನು ಒಗ್ಗೂಡಿಸಿಕೊಂಡು ಕಳ್ಳಬೇಟೆ ತಡೆಯಬೇಕು. ರಕ್ಷಿತ ಅರಣ್ಯ ಪ್ರದೇಶದಲ್ಲಿನ ನೀರಿನ ಹೊಂಡದಲ್ಲಿ ನೀರು ನಿಲ್ಲುವ ಕಾಮಗಾರಿ, ಸೋಲಾರ್ ತಂತಿ ಬೇಲಿ, ಕಂದಕ ನಿರ್ಮಾಣ, ರಕ್ಷಣಾ ಕಾರ್ಯಕ್ಕೆ ದಿನಗೂಲಿ ನೇಮಕ, ವನ್ಯಜೀವಿ ಅಪರಾಧ ಪ್ರಕರಣ ತಡೆ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮಕ್ಕೆ ನಡೆಸಬಹುದಾಗಿದೆ.

ಸೋಲಾರ್ ಬೇಲಿ ಹಾಕಿ, ಸ್ವತಂತ್ರ ಕಸಿದುಕೊಂಡಿದೆ

ಸೋಲಾರ್ ಬೇಲಿ ಹಾಕಿ, ಸ್ವತಂತ್ರ ಕಸಿದುಕೊಂಡಿದೆ

ಇಷ್ಟೆಲ್ಲಾ ಅಭಿವೃದ್ಧಿ, ಅರಿವು ಚಟುವಟಿಕೆಗೆ ಅವಕಾಶ ಇದ್ದರೂ ಅರಣ್ಯ ಇಲಾಖೆ ಮಾತ್ರ ಗ್ರಾಮದ ಜನರನ್ನು ಮನೆಯಿಂದ ಹೊರಬರದಂತೆ ಸೋಲಾರ್ ಬೇಲಿ ಹಾಕುವ ಮೂಲಕ ತಡೆ ಒಡ್ಡಿದೆ. ಜನರ ವಿಶ್ವಾಸ ಪಡೆಯದೆ ಅರಣ್ಯ ಇಲಾಖೆಯು ಕಿರುಕುಳ ತಂತ್ರಕ್ಕೆ ಮುಂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸ್ಥಳೀಯ ಶಾಸಕರು

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸ್ಥಳೀಯ ಶಾಸಕರು

ಈ ಬಗ್ಗೆ ತೀರ್ಥಹಳ್ಳಿಯ ಶಾಸಕ ಅರಗ ಜ್ಞಾನೇಂದ್ರ ಅವರು "ಒನ್ ಇಂಡಿಯಾ ಕನ್ನಡ' ಜೊತೆಗೆ ಮಾತನಾಡಿದ್ದು, ""ಈ ವಿಷಯದ ಕುರಿತು ನಾನು ವನ್ಯಜೀವಿ ಸಂರಕ್ಷಣೆ ಹಿರಿಯ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದೇನೆ, ಅವರು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಕ್ಕೆ ನಾನು ಕ್ರಮ ಕೈಗೊಂಡಿದ್ದೇನೆ. ಗ್ರಾಮಗಳ ಜನರು ಯಾವುವೇ ಆತಂಕ ಪಡುವ ಅಗತ್ಯ ಇಲ್ಲ ಭರವಸೆ ನೀಡಿದ್ದಾರೆ.

English summary
The Forest Department has erected a solar fence in the villages of Mallandur and Balehalli in Tirthahalli taluk of Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X