ದೇಶಭಕ್ತಿ ಕೇವಲ ಆಗಸ್ಟ್ 15 ಕ್ಕೆ ಸೀಮಿತವಾಗಬಾರದು: ಸುರೇಶ್ ಕುಮಾರ್
ಶಿವಮೊಗ್ಗ, ಜನವರಿ 18: ದೇಶಭಕ್ತಿ ಕೇವಲ ಆಗಸ್ಟ್ ೧೫ ಮತ್ತು ಜನವರಿ ೨೬ ಕ್ಕೆ ಸೀಮಿತವಾಗಬಾರದು, ಈ ಎರಡು ದಿನ ಬಾವುಟ ಹಾರಿಸಿದರೆ ದೇಶಭಕ್ತಿ ಎನಿಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ವಿವೇಕಾಂಜಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೇವಲ ಪಾಕಿಸ್ತಾನದ ವಿರುದ್ಧ ಭಾರತದ ವಿರಾಟ್ ಕೊಹ್ಲಿ ಶತಕ ಭಾರಿಸಿ ವಿಜಯೋತ್ಸವ ಆಚರಣೆ ಮಾಡಿದರೆ ನಿಜವಾದ ದೇಶ ಭಕ್ತಿ ಎನ್ನಿಸಿಕೊಳ್ಳುವುದಿಲ್ಲ, ಬದಲಾಗಿ ನಮ್ಮ ನಿತ್ಯಜೀವನದಲ್ಲಿ ದೇಶದ ಬಗ್ಗೆ ಅಭಿಮಾನ ಹದಿರಬೇಕು ಎಂದು ಸುರೇಶ್ ಕುಮಾರ್ ಶಾಲಾ ಮಕ್ಕಳಿಗೆ ತಿಳಿಸಿದರು.
ಆದೂ ಸಹ ದೇಶಭಕ್ತಿನೆ. ಆದರೆ ನಿಜವಾದ ದೇಶಭಕ್ತಿ ಪ್ರತಿನಿತ್ಯ ನಮ್ಮ ಬದುಕಿನಲ್ಲಿ ದೇಶಾಭಿಮಾನ, ಗುರು ಹಿರಿಯಲ್ಲಿ ಶ್ರದ್ಧೆ, ಸೈನಿಕರ ಬಗ್ಗೆ ಕಾಳಜಿ, ರಾಷ್ಟ್ರದ ಚಿಹ್ನೆಗಳನ್ನು ಗೌರವಿಸಿವುದು, ರಾಷ್ಟ್ರಗೀತೆಗೆ ಗೌರವಿಸುವುದು ಈ ರೀತಿ ನಮ್ಮ ದಿನನಿತ್ಯ ಬದುಕಿನಲ್ಲಿ ಅದನ್ನು ರೂಢಿಸಿಕೊಳ್ಳುವುದೇ ನಿಜವಾದ ದೇಶಭಕ್ತಿ ಎಂದರು.

ಸ್ವಾಮಿ ವಿವೇಕಾನಂದ, ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಭೋಸ್ ಈ ಮೂವರು ಕಾಲಾತೀತ ಪುರುಷರು. ಇವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಇದು ಇಂದಿಗೆ ನಿಲ್ಲದೆ ಮುಂದಿನ ತಲೆಮಾರುಗಳಿಗೂ ಸಹ ಅದ್ಭುತ ಸಂದೇಶವಾಗಿರುವುದರಿಂದ ಇವರುಗಳು ಕಾಲಾತೀತ ಪುರುಷರಾಗಿ ನಿಲ್ಲುತ್ತಾರೆ ಎಂದರು.
ಮಕ್ಕಳು ನೀರು ಮತ್ತು ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕೆಂದ ಸಚಿವ ಸುರೇಶ್ ಕುಮಾರ್ ಅವರು, ದೇಶಾಭಿಮಾನ ಮತ್ತು ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡಾಗ ಮಾತ್ರ ನಾವು ನಮ್ಮ ಯುಗಪುರಷರಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ದಿನ ನಿತ್ಯ ನಾವು ಸಮಾಜಕ್ಕೆ ಏನು ಕೊಡುಗೆ ಕೊಡುತ್ತಿವೋ ಅದು ಈ ಎಲ್ಲಾ ದೇಶ ಭಕ್ತಿಗಿಂತ ಎತ್ತರದಲ್ಲಿ ನಿಲ್ಲಲಿದೆ. ನಾವು ಅಬ್ದುಲ್ ಕಲಾಂರನ್ನ ಪ್ರೇರಣೆಯನ್ನಾಗಿ ಸ್ವೀಕರಿಸಬೇಕೇ ವಿನಃ ದಾವೂದ್ ಇಬ್ರಾಹಿಂ, ಅಫ್ಜಲ್ ಗುರುನಂತವರನಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.












Click it and Unblock the Notifications