ಬಿಜೆಪಿಯ ಹಿಂದುತ್ವ Vs ಜೆಡಿಎಸ್ ಹಿಂದುತ್ವ: ಓವರ್ ಟು ಕುಮಾರಣ್ಣ
Recommended Video

ಭಾರತೀಯ ಜನತಾ ಪಕ್ಷದ ಹಿಂದುತ್ವ ಮತ್ತು ಜಾತ್ಯಾತೀತ ಜನತಾದಳದ ಹಿಂದುತ್ವದ ನಡುವಿನ ವ್ಯತ್ಯಾಸವೇನು ಎನ್ನುವುದನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿವರಿಸಿದ್ದಾರೆ. ಅವರದ್ದು ಢೋಂಗಿ ನಮ್ಮದೇ ಸರಿಯಾದ ಹಿಂದುತ್ವ ಎನ್ನುವುದಕ್ಕೆ ತಮ್ಮದೇ ರೀತಿಯಲ್ಲಿ ಎಚ್ಡಿಕೆ ವ್ಯಾಖ್ಯಾನ ನೀಡಿದ್ದಾರೆ.
ಶಿವಮೊಗ್ಗದ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾಗಿದೆ, ಇನ್ನೇನಿದ್ದರೂ ಮತದಾರರನ್ನು ಓಲೈಸಿಕೊಳ್ಳುವ ಕೆಲಸ. ಇವರು ಅವರನ್ನು ಟೀಕಿಸುವುದು, ಅವರು ಇವರನ್ನು ಜರಿಯುವುದು, ಅದೇ ದಾರಿಯಲ್ಲಿ ಚುನಾವಣಾ ಪ್ರಚಾರ ಸಾಗುತ್ತಿದೆ.
ಅಯೋಧ್ಯ, ರಾಮಮಂದಿರ ಎಂದು ಹೇಳಿಕೊಂಡು ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು. ಅಧಿಕಾರಕ್ಕಾಗಿ ದೇವರನ್ನು ಎಳೆದು ತಂದವರು ಬಿಜೆಪಿಯವರು, ಅದು ಅವರ ಹಿಂದುತ್ವ, ನಮ್ಮ ಹಿಂದುತ್ವ ಅದಲ್ಲ ಎಂದು ಕುಮಾರಸ್ವಾಮಿ, ಬಿಜೆಪಿಯನ್ನು ಜಾಲಾಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹಿರಿಯ ಮತ್ತು ಅನುಭವಿ ಕಾಂಗ್ರೆಸ್ ಮುಖಂಡರ ಸೂಚನೆಯಂತೆ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು, ಇದೊಂದು ಕಾಟಾಚಾರದ ಚುನಾವಣೆ ಎಂದು ಯಾರೂ ಅಂದುಕೊಳ್ಳಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಚುನಾವಣೆ ಎದುರಿಸಲಿದೆ, ಅಧಿಕಾರಕ್ಕೆ ಬಂದ ಅಲ್ಪ ಅವಧಿಯಲ್ಲಿ ಸಮ್ಮಿಶ್ರ ಸರಕಾರದ ಸಾಧನೆಯೇ ನಮಗೆ ಶ್ರೀರಕ್ಷೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಣ್ಣನ ಪ್ರಕಾರ, ಬಿಜೆಪಿಯ ಹಿಂದುತ್ವ ಮತ್ತು ಜೆಡಿಎಸ್ ಹಿಂದುತ್ವಕ್ಕೆ ಇರುವ ವ್ಯತ್ಯಾಸವೇನು?

ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಾರೆ
ಶಿವಮೊಗ್ಗ ಉಪಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರಬಹುದು, ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ, ಎರಡೂ ಪಕ್ಷದ ಕಾರ್ಯಕರ್ತರ ಬಲದಿಂದ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ - ಕುಮಾರಸ್ವಾಮಿ.

ಬಿಜೆಪಿಗಿಂತ ದೊಡ್ಡ ಹಿಂದುತ್ವ ನಮ್ಮಲ್ಲೂ ಇದೆ
ಬಿಜೆಪಿಗಿಂತ ದೊಡ್ಡ ಹಿಂದುತ್ವ ನಮ್ಮಲ್ಲೂ ಇದೆ, ಬಿಜೆಪಿ ಇಷ್ಟುದಿನ ಉಳಿದುಕೊಂಡಿರುವುದೇ ಹಿಂದುತ್ವದ ಹೆಸರು ಹೇಳಿಕೊಂಡು. ಬರೀ, ಹಿಂದೂ, ರಾಮಮಂದಿರದ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಶಿವಮೊಗ್ಗದ ಉಪಚುನಾವಣಾ ಫಲಿತಾಂಶ ತೋರಿಸಿಕೊಡುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಹೇಗೆ ಬಿಜೆಪಿಗಿಂತ ಭಿನ್ನ
ನಮ್ಮ ಹಿಂದುತ್ವ ಬಿಜೆಪಿಗಿಂತ ಭಿನ್ನವಾಗಿದೆ. ನಾವು ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಸಮಾಜದಲ್ಲಿ ಬದುಕುತ್ತೇವೆ, ಒಡೆದು ಆಳುವ ಸಂಪ್ರದಾಯ ನಮ್ಮಲ್ಲಿಲ್ಲ. ವಿಷಬೀಜ ಬಿತ್ತುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಕುಮಾರಸ್ವಾಮಿ, ಹಿಂದುತ್ವದ ಬಗ್ಗೆ ಜೆಡಿಎಸ್ ಪಕ್ಷದ ನಿಲುವನ್ನು ವಿವರಿಸಿದ್ದಾರೆ.

ಕಾಟಾಚಾರಕ್ಕೆ ಈ ಚುನಾವಣೆಯನ್ನು ಎದುರಿಸುತ್ತಿಲ್ಲ
ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಸ್ವಲ್ಪ ಗೊಂದಲವಿದ್ದದ್ದು ನಿಜ, ಕಾಗೋಡು ತಿಮ್ಮಪ್ಪ ಮುಂತಾದ ಹಿರಿಯ ಮುಖಂಡರ ಸೂಚನೆಯಂತೆ, ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದೇವೆ. ಸುಮ್ಮನೆ ನಾವೇನೂ ಕಾಟಾಚಾರಕ್ಕೆ ಈ ಚುನಾವಣೆಯನ್ನು ಎದುರಿಸುತ್ತಿಲ್ಲ ಎಂದು ಕುಮಾರಸ್ವಾಮಿ, ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ರೈತರ ಸಾಲಮನ್ನಾ ಮಾಡಿದ್ದೇವೆ. ಹಿಂದುತ್ವ ನಮ್ಮಲ್ಲೂ ಇದೆ
ನಾಲ್ಕು ತಿಂಗಳ ಅವಧಿಯಲ್ಲಿ ಸಾಕಷ್ಟು ಕೆಲಸವನ್ನು ಮಾಡಿದ್ದೇವೆ, ರೈತರ ಸಾಲಮನ್ನಾ ಮಾಡಿದ್ದೇವೆ. ಹಿಂದುತ್ವ ನಮ್ಮಲ್ಲೂ ಇದೆ, ಆದರೆ ನಾವು ಅಭಿವೃದ್ದಿಯ ವಿಚಾರವನ್ನು ಮುಂದಿಟ್ಟುಕೊಂಡು ಉಪಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಹಿಂದುತ್ವಕ್ಕೂ, ಬಿಜೆಪಿಯ ಹಿಂದುತ್ವಕ್ಕೂ ಬಹಳ ವ್ಯತ್ಯಾಸವಿದೆ - ಕುಮಾರಸ್ವಾಮಿ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications