ಶಿವಮೊಗ್ಗ-ಹುಬ್ಬಳ್ಳಿ ಪ್ರಯಾಣದ ಅವಧಿ 1 ಗಂಟೆ ಕಡಿತ

ಶಿವಮೊಗ್ಗ, ನವೆಂಬರ್ 21 : ಶಿವಮೊಗ್ಗ-ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ಜನರಿಗೆ ಸಿಹಿ ಸುದ್ದಿ. ಹೊಸ ರಾಜ್ಯ ಹೆದ್ದಾರಿ ನಿರ್ಮಾಣದಿಂದಾಗಿ ಎರಡು ನಗರಗಳ ನಡುವಿನ ಸಂಚಾರದ ಅವಧಿ 1 ಗಂಟೆ ಕಡಿಮೆ ಆಗಲಿದೆ.

ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣೆಯ ಯೋಜನೆ (ಕೆ.ಎಸ್.ಎಚ್.ಐ.ಪಿ) ಅನ್ವಯ ಶಿಕಾರಿಪುರ-ಆನವಟ್ಟಿ- ಹಾನಗಲ್-ತಡಸ ಕ್ರಾಸ್ ಮೂಲಕ ಹುಬ್ಬಳ್ಳಿಗೆ ನೂತನ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 195 ಕಿ.ಮೀ. ಮಾರ್ಗವಿದಾಗಿದೆ.

ಈ ಹಿಂದೆ ಶಿವಮೊಗ್ಗದಿಂದ ಹೊನ್ನಾಳಿ-ಹರಿಹರ-ರಾಣೆಬೆನ್ನೂರು-ಹಾವೇರಿ ಮೂಲಕ ಹುಬ್ಬಳ್ಳಿ ತಲುಪಬೇಕಿತ್ತು. ಪ್ರಯಾಣದ ಅವಧಿ ಐದೂವರೆ ಗಂಟೆ ಆಗುತ್ತಿತ್ತು. ಈ ಮಾರ್ಗ 221 ಕಿ.ಮೀ.ಯದ್ದಾಗಿತ್ತು.

Now travel Shivamogga to Hubballi in 4 and half hours

ಈ 195 ಕಿ.ಮೀ. ಮಾರ್ಗದ ಮೂಲಕ ಶಿವಮೊಗ್ಗ-ಶಿಕಾರಿಪುರ-ಆನವಟ್ಟಿ-ತಡಸ ಕ್ರಾಸ್ ಮೂಲಕ ಹುಬ್ಬಳ್ಳಿ ತಲುಪಬಹುದಾಗಿದೆ. ನಾಲ್ಕೂವರೆ ಗಂಟೆಗೆ ಪ್ರಯಾಣದ ಅವಧಿ ಕಡಿತಗೊಂಡಿದೆ. ಇದರಿಂದಾಗಿ ವಾಹನ ಸವಾರರು ಸಂತಸಗೊಂಡಿದ್ದಾರೆ.

ಕಳೆದ 5 ತಿಂಗಳ ಹಿಂದೆ ಶಿವಮೊಗ್ಗ-ಹುಬ್ಬಳ್ಳಿ ನಡುವೆ 6 ಹೊಸ ಬಸ್‌ಗಳನ್ನು ಕೆಎಸ್ಆರ್‌ಟಿಸಿ ಪರಿಚಯಿಸಿದೆ. ಈ ಬಸ್ಸುಗಳು ನೂತನವಾಗಿ ನಿರ್ಮಾಣವಾಗಿರುವ ಶಿಕಾರಪುರ ಮಾರ್ಗವಾಗಿ ಹುಬ್ಬಳ್ಳಿಗೆ ತಲುಪಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+