ಶಿವಮೊಗ್ಗದಲ್ಲಿ ಮಗು ಕದಿಯಲು ಬಂದವನಿಗೆ ತಕ್ಕ ಶಿಕ್ಷೆ ಕೊಟ್ಟ ತಾಯಿ
ಶಿವಮೊಗ್ಗ, ಜನವರಿ 10: ತೀರ್ಥಹಳ್ಳಿ ಪಟ್ಟಣ ಹೊರವಲಯದ ಮೇಲಿನಕುರುವಳ್ಳಿಯಲ್ಲಿ, ಮಗುವನ್ನು ಅಪಹರಣ ಮಾಡಲು ಬಂದವನಿಗೆ ಆ ಮಗುವಿನ ತಾಯಿ ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಮಗುವನ್ನು ಅಪಹರಿಸಲು ಮುಂದಾಗಿದ್ದ ಆ ಕೈಗಳಿಗೆ ಈಳಿಗೆ ಮಣೆಯಿಂದ ಹೊಡೆದು ಮಗುವನ್ನು ರಕ್ಷಿಸಿಕೊಂಡಿದ್ದಾರೆ.
ಶಿವಕುಮಾರ್ ಹಾಗೂ ಕೃಷ್ಣವೇಣಿ ಅವರ ನಾಲ್ಕು ವರ್ಷದ ಹೆಣ್ಣು ಮಗುವನ್ನು ಮನೆಯಲ್ಲಿ ಅಪಹರಿಸಲು ಅಪರಿಚಿತನೊಬ್ಬ ನುಗ್ಗಿದ್ದಾನೆ. ಕೃಷ್ಣವೇಣಿ ಅವರು ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಮನೆಯ ಹಾಲ್ ನಲ್ಲಿ ಆಡವಾಡುತ್ತಿದ್ದ ಮಗು ಅಪಹರಿಸಲು ಮುಂದಾಗಿದ್ದಾನೆ. ಮಗು ಕೂಗಿಕೊಳ್ಳುವಾಗ ಓಡಿಬಂದು ಮಗುವನ್ನು ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.

ಆದರೆ ಕೃಷ್ಣವೇಣಿ ಅವರ ಕುತ್ತಿಗೆ ಹಿಸುಕಿ ಮಗುವನ್ನು ಎತ್ತಿಕೊಂಡು ಓಡಲು ಯತ್ನಿಸಿದ್ದಾನೆ ಆ ವ್ಯಕ್ತಿ. ಈ ವೇಳೆ ಅವರು ಅಡುಗೆ ಮನೆಯಲ್ಲಿದ್ದ ಈಳಿಗೆ ಮಣೆ ತಂದು ಅಪಹರಣಕಾರನ ಕೈಗೆ ಹೊಡೆದಿದ್ದಾರೆ. ಕೈಗೆ ಗಂಭೀರ ಗಾಯವಾಗಿದ್ದರಿಂದ ಮಗುವನ್ನು ಬಿಟ್ಟು ಆತ ಓಡಿಹೋಗಿದ್ದಾನೆ. ಓಡಿಹೋಗುತ್ತಿದ್ದಂತೆ ಕೃಷ್ಣವೇಣಿ ಕೂಗಿಕೊಂಡಿದ್ದು, ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಅಷ್ಟರಲ್ಲಾಗಲೇ ಆತ ತಪ್ಪಿಸಿಕೊಂಡಿದ್ದ.
ಸ್ಥಳಕ್ಕೆ ತೀರ್ಥಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಗುರುತು ಪತ್ತೆಗೆ ಮುಂದಾಗಿದ್ದಾರೆ.












Click it and Unblock the Notifications