• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನೈತಿಕ ಸಂಬಂಧಕ್ಕೆ ಅಡ್ಡಿ: ಮಕ್ಕಳಿಗೆ ವಿಷ ನೀಡಿದ ತಾಯಿ!

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಜನವರಿ 6: ತನ್ನ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಹೆತ್ತ ತಾಯಿನೇ ಮಕ್ಕಳಿಗೆ ವಿಷಯುಕ್ತ ಮಾತ್ರೆ ನೀಡಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಅಲೆಕ್ಸ್ (8) ಮತ್ತು ಹಲಿನಾ (5) ಮೃತರಾದ ಮಕ್ಕಳಾಗಿದ್ದರೆ, ಗೀತಾ ಎಂಬ ತಾಯಿ, ತನ್ನ ಮಕ್ಕಳಿಗೆ ವಿಷಯುಕ್ತ ಮಾತ್ರೆ ತಿನ್ನಿಸಿ ಮಕ್ಕಳ ಸಾವಿಗೆ ಕಾರಣಳಾಗಿದ್ದಾಳೆ.

ಶಿವಮೊಗ್ಗ,ಭದ್ರಾವತಿಯಲ್ಲಿ ಎಸಿಬಿ ದಾಳಿ; ದಾಖಲೆಗಳ ಪರಿಶೀಲನೆ

ಆರೋಪಿ ಗೀತಾ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸುರಗಿ ತೋಪ್ ಬಡಾವಣೆಯ ನಿವಾಸಿಯಾಗಿದ್ದಾಳೆ. ಗೀತಾಳ ಪತಿ ಅಂಥೋನಿ ಮೃತಪಟ್ಟು ಎರಡು ವರ್ಷ ಕಳೆದಿತ್ತು.

ಗಂಡ ಮೃತಪಟ್ಟ ನಂತರ, ಅದೇ ಬಡಾವಣೆಯ ಜಾನಿ ಎಂಬಾತನ ಜೊತೆ ಗೀತಾ ಅನೈತಿಕ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ಶಿವಮೊಗ್ಗದ ಗಾಂಧಿ‌ ಪಾರ್ಕ್ ಗೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಬಂದಿದ್ದಳು.

ಗಾಂಧಿ‌ ಪಾರ್ಕಿನಲ್ಲಿಯೇ ಮಕ್ಕಳಿಗೆ ವಿಷಯುಕ್ತ ಮಾತ್ರೆ ತಿನ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ನಂತರ ಅಸ್ವಸ್ಥಗೊಂಡ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರೂ ಮಕ್ಕಳು ಅಸುನೀಗಿವೆ. ತನ್ನ ಮಕ್ಕಳ ಸಾವಿಗೆ ತಾಯಿಯೇ ಕಾರಣವಾಗಿದ್ದಾಳೆ. ಆರೋಪಿ ಗೀತಾಳ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mother Poisoned Her Children for Disturbing Her Immoral Relationship in Bhadravathi of Shivamogga District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X