ಶಿವಮೊಗ್ಗ; ಅನೈತಿಕ ಸಂಬಂಧ ಗೊತ್ತಾಗಿದ್ದಕ್ಕೆ ಮಗಳನ್ನೇ ಕೊಂದ ತಾಯಿ

ಶಿವಮೊಗ್ಗ, ಮಾರ್ಚ್ 11: ತನ್ನ ಅನೈತಿಕ ಸಂಬಂಧದ ವಿಷಯ ಮಗಳಿಗೆ ಗೊತ್ತಾಯಿತೆಂದು ತಾಯಿಯೇ ಮಗಳನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಶಿವಮೊಗ್ಗದ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮತ್ತೊಡ್ ರಸ್ತೆಯ ರತ್ನಾಕರ ಲೇಔಟ್ ನಲ್ಲಿ ಲತಾ ಎಂಬ ಮಹಿಳೆ ತನ್ನ ಮಗಳಾದ ಅಮೃತಾ (16) ಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿ ಅಮೃತಾ ಕತ್ತನ್ನು ಹಿಸುಕಿ ನಂತರ ಸೀರೆಯಿಂದ ಬಿಗಿಯಲಾಗಿದೆ. ಆರೋಪಿ ಲತಾಳನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Mother Killed Daughter Due To Her Illicit Relationship In Mattod Road

ಲತಾ ಅವರ ಪತಿ ಪ್ರಭಾಕರ್ ತೀರಿಕೊಂಡಿದ್ದಾರೆ. ಲತಾ ಕಳೆದ 6 ತಿಂಗಳಿನಿಂದ ರತ್ನಾಕರ ಲೇಔಟ್ ನಲ್ಲಿ ವಾಸವಾಗಿದ್ದರು. ಅಬ್ಬಳಗೆರೆ ಹಾಳೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ಸಂಬಂಧಿ, ಕಾರು ಚಾಲಕ ಸುನಿಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮಗಳು ರಜೆಯಿದ್ದರಿಂದ ಶಿಕಾರಿಪುರದ ಅಜ್ಜಿ ಮನೆಗೆ ಹೋಗಿದ್ದಳು. ಅಲ್ಲಿಂದ ಬಂದ ಮೂರು ದಿನಗಳ ನಂತರ ಇವರ ಅನೈತಿಕ ಸಂಬಂಧದ ಬಗ್ಗೆ ಮಗಳಿಗೆ ವಿಚಾರ ತಿಳಿದಿದೆ. ಈ ವಿಚಾರವಾಗಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಎಸ್ ಪಿ ಶಾಂತರಾಜು, ಎಎಸ್ ಪಿ ಶೇಖರ್‌ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+