ಹಿಲಿಕೆರೆಯಲ್ಲಿ ಮಗಳನ್ನು ಕೆರೆಗೆ ನೂಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಶಿವಮೊಗ್ಗ, ಆಗಸ್ಟ್.30: ಆರೋಗ್ಯ ಸಮಸ್ಯೆಯಿಂದ ಮನನೊಂದ ತಾಯಿ ತನ್ನ 8 ವರ್ಷದ ಮಗಳನ್ನು ಕೆರೆಗೆ ನೂಕಿ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಲಿಕೆರೆಯಲ್ಲಿ ಸಂಭವಿಸಿದೆ.

ಇದೀಗ ತಾಯಿ ಮತ್ತು ಮಗಳ ಮೃತದೇಹವನ್ನು ಅಗ್ನಿ ಶಾಮಕದಳದ ಸಿಬ್ಬಂದಿ ಕೆರೆಯಿಂದ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಅರುಣ್ ಎಂಬುವವರ ಪತ್ನಿ ನಿಧಿ(30) ಹಾಗೂ ಮಗಳು ಸೌಪರ್ಣಿಕಾ ಎಂದು ಗುರುತಿಸಲಾಗಿದೆ.

Mother and daughter committed suicide incident occured in Hilikere

ನಿಧಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕಿರಿಯ ಮಗಳಿಗೆ ಕೂಡ ಆರೋಗ್ಯ ಸಮಸ್ಯೆ ಇತ್ತು. ಹಾಗಾಗಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೊರಟ ನಿಧಿ ಮನೆ ಹಿಂಭಾಗ ಕೆರೆಗೆ ಮಗಳ ಸಮೇತ ಹಾರಿ ಸಾವನ್ನಪ್ಪಿದ್ದಾರೆ.

ತಾಯಿ ಮತ್ತು ಕಿರಿಯ ಮಗಳು ಒಬ್ಬರನ್ನೊಬ್ಬರು ಬಿಟ್ಟಿರದಂತೆ ಹಚ್ಚಿಕೊಂಡಿದ್ದರು. ಹೀಗಾಗಿ ನಾನು ಇಲ್ಲದ ಮೇಲೆ ಮಗಳು ಅನಾಥವಾಗಬಾರದೆಂದು ಮಗಳನ್ನು ಕರೆದುಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಳಿವು ಕೊಟ್ಟ ಮೊಬೈಲ್

ಮಂಗಳವಾರ ಆಸ್ಪತ್ರೆಗೆ ಹೋಗುತ್ತೇನೆ ಎಂದು ಮನೆಯಿಂದ ಕಿರಿಯ ಮಗಳ ಜತೆ ಹೊರಟ ನಿಧಿ ಮಧ್ಯಾಹ್ನದ ವೇಳೆಗೆ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಮನೆಯವರು ಗದ್ದೆಗೆ ಹೋಗಿದ್ದರಿಂದ ಸಂಜೆ ಬಂದು ಆಸ್ಪತ್ರೆ, ದೇವಸ್ಥಾನ, ಕುಟುಂಬದವರು, ನೆಂಟರನ್ನು ವಿಚಾರಿಸಿದ್ದಾರೆ.

Mother and daughter committed suicide incident occured in Hilikere

ಬಳಿಕ ಪೊಲೀಸರಿಗೂ ದೂರು ನೀಡಿದ್ದಾರೆ. ನಂತರ ಮೊಬೈಲ್ ಗೆ ಕರೆ ಮಾಡಿ ಇಡೀ ಜಮೀನು, ಮನೆಯ ಸುತ್ತ ಹುಡುಕಿದಾಗ ಕೆರೆ ದಂಡೆ ಮೇಲೆ ಮೊಬೈಲ್ ರಿಂಗ್ ಆಗಿದ್ದು, ಅಲ್ಲಿಯೇ ಬ್ಯಾಗ್, ಚಪ್ಪಲಿ ಇಡಲಾಗಿತ್ತು. ಅಗ್ನಿ ಶಾಮಕ ದಳ ಮತ್ತು ಪೊಲೀಸರು ಬುಧವಾರ ಬೆಳಗ್ಗೆ 2 ಶವಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ಶವ ಹೊರತೆಗೆಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+