Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಾಗರ ತಾಲೂಕು ಕಚೇರಿ ಅಟೆಂಡರ್

ಶಿವಮೊಗ್ಗ, ಜೂನ್‌ 07: ಲಂಚ ಸ್ವೀಕರಿಸುವ ವೇಳೆ ಅಟೆಂಡರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರ ತಾಲೂಕು ಕಚೇರಿಯ ದಾಖಲಾತಿ ವಿಭಾಗದ ಆರ್‌.ಆರ್‌.ಟಿ ಶಾಖೆಯ ಅಟೆಂಡರ್ ಬಸವರಾಜ್‌ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಎಂದು ಗುರುತಿಸಲಾಗಿದೆ.

ಸಾಗರದ ಬಳಸಗೋಡು ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ಆರ್‌.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್‌ ಎನ್ನುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್‌ ಬಸವರಾಜ್‌ ಅವರ ಬಳಿ ಆರ್‌ಟಿಸಿಗೆ ಬೇಡಿಕೆ ಇಟ್ಟಿದ್ದರು.

Lokayukta Raid On Shivamogga District Sagar Taluk Office

ಮೊದಲು ಬಸವರಾಜ್ ದಾಖಲಾತಿ ಜೆರಾಕ್ಸ್ ಹಾಗೂ ಚಲನ್‌ಗೆ 1500 ರೂ ಲಂಚ ಸ್ವೀಕರಿಸಿದ್ದಾರೆ. ಈ ವೇಳೆ ಶಿರಸ್ತೆದಾರರಿಗೆ ನೀಡಲು ಮತ್ತೆ 2,000 ಡಿಮ್ಯಾಂಡ್ ಮಾಡಿದ್ದಾರೆ. ಮೊದಲು ಲಂಚ ನೀಡುವಾಗ ವಿಡಿಯೋ ಮಾಡಿ ಇಟ್ಟುಕೊಂಡಿದ್ದ ದೂರುದಾರ ಬಳಿಕ ಮತ್ತೆ ಲಂಚ ನೀಡುವ ಮೊದಲು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅಟೆಂಡರ್ ಬಸವರಾಜ್ 2000 ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಆಗುಂಬೆ: ಸಿಡಿಲು ಬಡಿದು ವ್ಯಕ್ತಿ ಸಾವು

ಶಿವಮೊಗ್ಗ: ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ನಡೆದಿದೆ. ನಾಗೇಂದ್ರ (40) ಸಿಡಿಲು ಬಡಿದು ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಆಗುಂಬೆ ಸಮೀಪದ ಬೀದರಗೋಡು ಗ್ರಾಮದ ನಿವಾಸಿಯಾದ ನಾಗೇಂದ್ರ ನಿನ್ನೆ ತೋಟದಲ್ಲಿ ಕಳೆ ತೆಗೆಯುತ್ತಿದ್ದರು. ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಎನ್ನುವವರ ಅಡಿಕೆ ತೋಟದಲ್ಲಿ ಕೆಲಸ ಮಾಡುವ ವೇಳೆ ಏಕಾಏಕಿ ಸಿಡಿಲು ಬಡಿದು ನಾಗೇಂದ್ರ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+