Get Updates
Get notified of breaking news, exclusive insights, and must-see stories!

KS Eshwarappa: ಹಾವೇರಿ ಕಿಚ್ಚು ಶಿವಮೊಗ್ಗಕ್ಕೆ ಶಿಫ್ಟು: ಜಂಪಿಂಗ್ ಆಟ ಶುರು- ಈಶ್ವರಪ್ಪ ಫುಲ್ ಗರಂ!

ಶಿವಮೊಗ್ಗ ಮಾರ್ಚ 14: ಹಾವೇರಿ ಕಿಚ್ಚು ಶಿವಮೊಗ್ಗಕ್ಕೆ ಶಿಫ್ಟಾದಂತೆ ಕಾಣಿಸುತ್ತಿದೆ. ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುತ್ತಿದ್ದಂತೆ ಟಿಕೆಟ್ ಕೈತಪ್ಪಿದ ಆಕಾಂಕ್ಷಿಗಳ ಅಸಮಾಧಾನ ಬಂಡಾಯಕ್ಕೆ ತಿರುಗುವ ಲಕ್ಷಣಗಳು ಕಾಣಿಸುತ್ತಿವೆ.

ಹೌದು... ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸುವ ಕೆಎಸ್‌ ಈಶ್ವರಪ್ಪ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರೆರಚಿದೆ. ಹೀಗಾಗಿ ಪುತ್ರ ಕೆಇ ಕಾಂತೇಶ್‌ಗೆ ಟಿಕೆಟ್ ನಿರಾಕರಣೆಯ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಮಗೆ ಮೋಸ ಮಾಡಿದರು ಎಂದು ಕಿಡಿಕಾರಿದ್ದಾರೆ. ಆದ್ದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

Lok Sabha Election 2024 Haveri fire shift to shivamogga KS Eshwarappa full garam

'ಯಡಿಯೂರಪ್ಪ ಮತ್ತು ನಾನು ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆಪ್ತರಾಗಿದ್ದೆವು. ಅವರು ದಾರಿ ತಪ್ಪಿದ್ದಾರೆ ಎನಿಸಿದಾಗ ತಿಳಿ ಹೇಳಿದೆ. ನನ್ನ ವೈಯುಕ್ತಿಕ ವಿಚಾರಕ್ಕೆ ಬರಬೇಡ ಎಂದಾಗ ಸುಮ್ಮನಾದೆ. ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಾಗ ನನಗೆ ಸಮಾಧಾನ ಆಗುತ್ತಿರಲಿಲ್ಲ. ಇನ್ನೊಬ್ಬ ಯಡಿಯೂರಪ್ಪ ನಮಗೆ ಸಿಗಲಾರ ಅಂತ ಅನಿಸಿತ್ತು. ಆದರೆ ನನ್ನ ಮಾತು ಕೇಳಲಿಲ್ಲ. ಅವರು ಕೆಜೆಪಿ ಕಟ್ಟಿದಾಗ ಜೊತೆಯಾಗದೆ ಪಕ್ಷ ಎಂದು ಉಳಿದೆ. ನಾನು ಯಾವತ್ತೂ ಪಕ್ಷ ನಿಷ್ಠೆ ಹೊಂದಿದ್ದೇನೆಯೇ ಹೊರತು ವ್ಯಕ್ತಿ ನಿಷ್ಠೆ ಪ್ರದರ್ಶಿಸಲಿಲ್ಲ. ಇದೆಲ್ಲ ನನ್ನ ಮೇಲೆ ಅವರಿಗೆ ಅಸಮಾಧಾನ ಹುಟ್ಟಲು ಕಾರಣ ಆಗಿರಬಹುದು' ಎಂದರು.

ನಾನೆಂದೂ ಜಾತಿ ನಾಯಕ ಆಗಲಿಲ್ಲ. ಹಿಂದುತ್ವ ಎಂದು ಪಕ್ಷ ಸಂಘಟನೆ ಮಾಡಿದೆ. ಆದು ನನಗೆ ಹೆಮ್ಮೆ ಇದೆ. ಆದರೆ ಪ್ರತಾಪ್ ಸಿಂಹ, ನಳಿನ್ ಮತ್ತು ನಾನೂ ಸೇರಿ ರಾಜ್ಯದಲ್ಲಿ ಹಿಂದುತ್ವದ ಕುರಿತು ಮಾತನಾಡುವವರನ್ನು ಪಕ್ಷಕ್ಕೆ ಸರಿಸುವ ಕೆಲಸ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದರು.

Lok Sabha Election 2024 Haveri fire shift to shivamogga KS Eshwarappa full garam

ಕಾಂತೇಶ್‌ಗೆ ಎಂಎಲ್ಸಿ ಆಫರ್:

ಬಂಡಾಯದ ಬಾವುಟ ಹಾರಿಸುತ್ತಿದ್ದಂತೆ ಈಶ್ವರಪ್ಪ ಅವರ ಪುತ್ರನ ಮನವೊಲಿಕೆ ಪ್ರಯತ್ನಗಳೂ ಆರಂಭವಾಗಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರ್ ವಾಲ್ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಪುತ್ರ ಕಾಂತೇಶ್‌ಗೆ ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಟಿಕೆಟ್ ಕೊಡುವ ಸಂಬಂಧ ಕೇಂದ್ರ ನಾಯಕರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರವನ್ನು ಸ್ವತ: ಈಶ್ವರಪ್ಪ ಅವರೇ ಸುದ್ದಿಗಾರರಿಗೆ ತಿಳಿಸಿದರು.

ಯಡಿಯೂರಪ್ಪ ಆಪ್ತರಾದ ಲೆಹರ್ ಸಿಂಗ್ ಕೂಡ ಸಂಪರ್ಕಿಸಿದ್ದರು. ಆದರೆ ತಮ್ಮ ನಿರ್ಧಾರ ಶುಕ್ರವಾರ ಕರೆದಿರುವ ಅಭಿಮಾನಿಗಳ, ಹಿತೈಶಿಗಳ ಸಭೆ ಬಳಿಕ ತಿಳಿಸುತ್ತೇನೆ ಎಂದು ಸುದ್ದಿಗಾರರ ಮುಂದೆ ಈಶ್ವರಪ್ಪ ಹೇಳಿದರು.

ಹಾವೇರಿಯಲ್ಲಿ ಬಸವರಾಜ್ ಬೊಮ್ಮಾಯಿಗೆ ಟಿಕೆಟ್

ಕರ್ನಾಟಕ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಹಾವೇರಿಯಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವ ಲಾಬಿ ನಡೆಸಿದ್ದ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಅವರ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಬಿಜೆಪಿ ಆತಂಕರಿಕ ವಲಯದಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ.

ಹಾವೇರಿಯಿಂದ ತಮಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, 'ಹಾವೇರಿ ಕ್ಷೇತ್ರದಲ್ಲಿ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿ ಮಾಡಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬಯಕೆ ಇದೆ. ಹೀಗಾಗಿ ನನ್ನನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಕಳುಹಿಸುತ್ತಾರೆ. ಹಾವೇರಿಯಲ್ಲಿ ಗೆದ್ದು ತೋರಿಸುತ್ತೇನೆ' ಎಂದು ಹೇಳಿದ್ದಾರೆ.

ಬಂಡಾಯದ ಕಿಚ್ಚು

ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಅತೃಪ್ತರ ಸಂಖ್ಯೆ ಹೆಚ್ಚಾಗಿದೆ. ಈ ಸಾಲಿನಲ್ಲಿ ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಪುತ್ರನಿಗೆ ಟಿಕೆಟ್‌ ಕೊಡಿಸುವ ಇರಾದೆಯಲ್ಲಿದ್ದ ಕೆಎಸ್‌ ಈಶ್ವರಪ್ಪ ಸೇರಿದಂತೆ ಸದಾನಂದ ಗೌಡ, ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರು ಮುಂಚುಣಿಯಲ್ಲಿದ್ದಾರೆ. ಪಕ್ಷದ ಬಗ್ಗೆ ತೀವ್ರ ಅಸಮಾಧಾನ ಹೊಂದಿರುವವರು ಪಕ್ಷ ಬದಲಿಸುವ ಸಾಧ್ಯತೆ ಕೂಡ ಇದೆ. ಹೀಗಾಗಿ ಇವರ ಮುಂದಿನ ನಡೆಯನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+