ಕೋವಿಡ್ ಸೋಂಕಿತನ ಮನೆಯಲ್ಲಿ ಎಣ್ಣೆ ಪಾರ್ಟಿ; ಪ್ರಕರಣ ದಾಖಲು

ಶಿವಮೊಗ್ಗ, ಜೂನ್ 22; ಕೋವಿಡ್ ಸೋಂಕಿತನ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಲಾಗಿದೆ. ಅಲ್ಲದೇ ಟಾಸ್ಕ್ ಫೋರ್ಸ್ ಸದಸ್ಯನಿಗೆ ನಿಂದಿಸಿದ ಮೂವರ ವಿರುದ್ಧ ಪ್ರಕರಣ ದಾಖಲಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಬಸವಾಪುರ ಗ್ರಾಮದ ಯುವಕ ಮತ್ತು ಆತನ ಕುಟುಂಬದವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತನ್ನ ಮನೆಯಲ್ಲಿ ಪಾರ್ಟಿ ಮಾಡಿದ್ದಾನೆ.

ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮತ್ತು ಕೋವಿಡ್ 19 ಟಾಸ್ಕ್ ಫೋರ್ಸ್ ಸದಸ್ಯರಾಗಿರುವ ಸಚಿನ್‌ಗೆ ಯುವಕನ ಮನೆಯವರೇ ಪಾರ್ಟಿ ವಿಚಾರ ತಿಳಿಸಿದ್ದಾರೆ. ಹಾಗಾಗಿ ಯುವಕನ ಸ್ನೇಹಿತರಿಗೆ ಸಚಿನ್ ತಿಳಿವಳಿಕೆ ಹೇಳಿ, ಎಚ್ಚರಿಕೆ ನೀಡಿದ್ದರು.

Liquor Party In Covid 19 Patient House Complaint Field

ಇದರಿಂದ ಆಕ್ರೋಶಗೊಂಡ ಯುವಕ ಮತ್ತು ಆತನ ಸ್ನೇಹಿತರು ಸಚಿನ್ ಮನೆ ಕಾಂಪೌಂಡ್‌ಗೆ ನುಗ್ಗಿದ್ದಾರೆ. ಅವರನ್ನು ನಿಂದಿಸಿದ್ದಾರೆ. ಹಾಗಾಗಿ ಮೂವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಯುವಕ ಮತ್ತು ಆತನ ಇಬ್ಬರು ಸ್ನೇಹಿತರ ವಿರುದ್ಧ ಸಾಂಕ್ರಾಮಿಕ ಕಾಯಿಲೆ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಜನರು ಹೋಂ ಐಸೋಲೇಷನ್ ನಿಯಮಗಳನ್ನು ಪಾಲನೆ ಮಾಡುವುದಿಲ್ಲ ಎಂದು ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಆಗುವುದು ಕಡ್ಡಾಯಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+