ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸಿದ್ದರಾಮಯ್ಯ ವಡ್ಡ ದಡ್ಡ" ಎಂದು, ತಕ್ಷಣ ವರಸೆ ಬದಲಿಸಿದ ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯನಿಗೆ ತಲೆ ಸರಿಯಿಲ್ಲ:ಈಶ್ವರಪ್ಪ

ಶಿವಮೊಗ್ಗ, ಸೆಪ್ಟೆಂಬರ್ 17: ಕೇಂದ್ರ ಗೃಹ ಸಚಿವ ಅಮಿತ್ ಶಾ ದಡ್ಡ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡುವ ಭರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯನವರನ್ನು ವಡ್ಡ, ದಡ್ಡ ಎಂದು ಕರೆದಿದ್ದಾರೆ.

ನನ್ನ ಬಾಯಲ್ಲೂ ಕೆಟ್ಟ ಪದಗಳು ಬರ್ತವೆ ಸಿದ್ದರಾಮಯ್ಯನವರೆ: ಈಶ್ವರಪ್ಪನನ್ನ ಬಾಯಲ್ಲೂ ಕೆಟ್ಟ ಪದಗಳು ಬರ್ತವೆ ಸಿದ್ದರಾಮಯ್ಯನವರೆ: ಈಶ್ವರಪ್ಪ

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದರು.

ಒಂದು ದೇಶ ಒಂದು ಭಾಷೆಯ ಪರಿಕಲ್ಪನೆಯಲ್ಲಿ ದೇಶದ ರಾಷ್ಟ್ರಭಾಷೆಯಾದ ಹಿಂದಿಯನ್ನು ಪರಿಗಣಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆಕೊಟ್ಟಿದ್ದಕ್ಕೆ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಅಮಿತ್ ಶಾ ರನ್ನ ದಡ್ಡ ಎಂದು ಕರೆದಿದ್ದರು. ಈ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಮಾಜಿ ಸಿದ್ದರಾಮಯ್ಯ ವಡ್ಡ, ದಡ್ಡ" ಎಂದು ಕರೆದರು. ತಕ್ಷಣವೇ ವಡ್ಡ ಎಂದು ಕರೆದಿರುವ ಬಗ್ಗೆ ಎಚ್ಚೆತ್ತುಕೊಂಡ ಈಶ್ವರಪ್ಪ, "ಸಿದ್ದರಾಮಯ್ಯರವನ್ನು ವಡ್ಡ ಎಂದು ಕರೆದಿರುವ ಬಗ್ಗೆ ವಿವಾದ ಸೃಷ್ಟಿಸಬೇಡಿ, ವಡ್ಡರ ಬಗ್ಗೆ ಕಾಳಜಿ ಇದೆ. ವಡ್ಡ ಎಂದಿರುವುದು ಸಿದ್ದರಾಮಯ್ಯನವರ ವರ್ತನೆಗೆ. ವಡ್ಡರು ಶ್ರಮ ಜೀವಿಗಳು. ಅವರ ಬಗ್ಗೆ ಅಪಾರ ಗೌರವವಿದೆ" ಎಂದು ಸಮಜಾಯಿಷಿಗೆ ಮುಂದಾದರು.

KS Eshwarappa Reacts To Siddaramaiah Statement On Amit Shah

"ಅಮಿತ್ ಶಾರವರು ಹಿಂದಿ ಹೇರಿಕೆ ಮಾಡುತ್ತಿಲ್ಲ, ಹಿಂದಿ ಭಾಷೆ ದೇಶವನ್ನು ಒಂದು ಮಾಡುವ ಭಾಷೆ. ಆದರೆ ಮೊದಲ ಆದ್ಯತೆ ಕನ್ನಡಕ್ಕೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಜನಪ್ರಿಯತೆಯನ್ನು ಕಡಿಮೆ ಮಾಡುವ ಪ್ರಯತ್ನ ಈ ರೀತಿ ವಿವಾದ ಸೃಷ್ಟಿಸುವ ಹಿಂದಿದೆ. ಇದರಿಂದ ಅವರ ವಿರುದ್ಧ ಹೇಳಿಕೆಗೆ ಹಿಂದಿ ಭಾಷೆಯನ್ನು ಬಳಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದರು.

ಬಿಜೆಪಿಗೆ ಮತ ಹಾಕದ ಮುಸ್ಲಿಮರು ದೇಶದ್ರೋಹಿಗಳು ಎಂದ ಈಶ್ವರಪ್ಪಬಿಜೆಪಿಗೆ ಮತ ಹಾಕದ ಮುಸ್ಲಿಮರು ದೇಶದ್ರೋಹಿಗಳು ಎಂದ ಈಶ್ವರಪ್ಪ

ಕಟ್ಟರ್ ಸಂಘಟನೆಯ ನಾಯಕ ನಳೀನ್ ಕುಮಾರ್ ಕಟೀಲ್ ಆಗಿದ್ದಾರೆ. ಅವರ ನೇತೃತ್ವದಲ್ಲಿ ಉಪಚುನಾವಣೆ ನಡೆಯಲಿದೆ. ಅವರ ನೇತೃತ್ವದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದೂ ತಿಳಿಸಿದರು.

English summary
Minister KS Eshwarappa reacts to the statement of former cm Siddaramaiah on Amit Shah in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X