ಮೃತದೇಹ ಹುಡುಕಲು ಜೋಗ ಜಲಪಾತಕ್ಕಿಳಿದ 'ಕೋತಿರಾಮ' ನಾಪತ್ತೆ

Recommended Video

      ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಮ ಜೋಗದಲ್ಲಿ ನಾಪತ್ತೆ | Oneindia Kannada

      ಶಿವಮೊಗ್ಗ, ಫೆಬ್ರವರಿ 28 : ಬೆಂಗಳೂರಿನ ಯುವಕ ಜೋಗದ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂಬ ಶಂಕೆಯಲ್ಲಿ ಅವ ಶೋಧಕ್ಕಿಳಿದಿದ್ದ ಜ್ಯೋತಿರಾಜ್ ಅಲಿಯಾಸ್ ಕೋತಿರಾಮ ನಾಪತ್ತೆಯಾಗಿದ್ದಾರೆ.ಮರುದಿನವಾದರೂ ವಾಪಾಸ್ ಬಾರದಿರುವುದು ಆತಂಕ ಸೃಷ್ಟಿ ಮಾಡಿದೆ.

      ಮೃತದೇಹ ಹುಡುಕಲೆಂದು ಮಂಗಳವಾರ ಮಧ್ಯಾಹ್ನ 2.30 ರ ಹೊತ್ತಿಗೆ ಜಲಪಾತಕ್ಕೆ ಇಳಿದ ಚಿತ್ರದುರ್ಗದ ಜ್ಯೋತಿರಾಜ್ ರಾತ್ರಿ 9 ಗಂಟೆಯಾದರೂ ವಾಪಾಸ್ ಬಂದಿರಲಿಲ್ಲ. ಸ್ಥಳದಲ್ಲಿ ಸಿದ್ದಾಪುರ ಮತ್ತು ಜೋಗ ಠಾಣೆ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬದವರು ಮತ್ತು ಜ್ಯೋತಿರಾಜ್ ಶಿಷ್ಯ ಮೂರ್ತಿ ಇದುವರೆಗೂ ಕಾಯುತ್ತಿದ್ದಾರೆ.

      ಬೆಂಗಳೂರಿನ ಮಂಜುನಾಥ್ ಮೂರು ದಿನಗಳ ಹಿಂದೆ ಬೈಕ್ ನಲ್ಲಿ ಜೋಗಕ್ಕೆ ಬಂದು ಡೆತ್ ನೋಟ್ ಬರೆದಿಟ್ಟು ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಎನ್ನಲಾಗಿದೆ. ಜಲಪಾತದ ಬಳಿ ಬೈಕ್ ಮತ್ತು ಡೆತ್ ನೋಟ್ ಪತ್ತೆಯಾಗಿದೆ.

      Jyotiraj missing in Jog falls

      ಜ್ಯೋತಿರಾಜ್ ಅವರು ಈ ಹಿಂದೆ ಜೋಗ ಜಲಪಾತದಲ್ಲಿ ಹಲವು ಮೃತ ದೇಹಗಳನ್ನು ಹುಡುಕಿ ತೆಗೆದಿದ್ದರು. ಭೋರ್ಗರೆವ ಜಲಪಾತದಲ್ಲಿ ಸ್ವಲ್ಪವೂ ಹೆದರದೆ ಕೆಲವೊಮ್ಮೆ ಜ್ಯೋತಿರಾಜ್ ಅವರು ಈ ಹಿಂದೆ ಜೋಗ

      ಜಲಪಾತದಲ್ಲಿ ಹಲವು ಮೃತದೇಹಗಳನ್ನು ಹುಡುಕಿ ತೆಗೆದಿದ್ದರು. ಭೋರ್ಗರೆವ ಜಲಪಾತದಲ್ಲಿ ಸ್ವಲ್ಪವೂ ಹೆದರದೆ ಕೆಲವೊಮ್ಮೆ ಮೇಲಿಂದ ಕೆಳಕ್ಕೆ ಇಳಿದು, ಮತ್ತೆ ಕೆಲವು ಬಾರಿ ಕೆಳಗಿನಿಂದ ಮೇಲೆ ಏರಿ ಮೃತದೇಹಗಳನ್ನು ಪತ್ತೆ ಮಾಡಿದ್ದರು.

      ಅವರ ಬಗ್ಗೆ ತಿಳಿದ ಮಂಜುನಾಥನ ಕುಟುಂಬದವರು ಜ್ಯೋತಿರಾಜ್‌ರನ್ನು ಮೃತದೇಹ ಹುಡುಕಿಕೊಂಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ ಜೋಗಕ್ಕೆ ಬಂದಿದ್ದರು.

      ಕತ್ತಲಾಗಿರುವ ಹಿನ್ನೆಲೆಯಲ್ಲಿ ಬಂಡೆಗಳ ಮೇಲೆ ಹತ್ತಿ ಬೆಳಕಾಗುವವರೆಗೆ ಅಲ್ಲೇ ಇದ್ದು ಬೆಳಗ್ಗೆ ಬರುತ್ತಾರೆ ಎಂದು ಧೈರ್ಯ ತುಂಬುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+