ಶಿವಮೊಗ್ಗದಲ್ಲಿ ಜು.16ರಂದು ಉದ್ಯೋಗ ಮೇಳ
ಶಿವಮೊಗ್ಗ, ಜುಲೈ 14 : ಶಿವಮೊಗ್ಗದಲ್ಲಿ ಜು.16ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. 25ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಉದ್ಯೋಗ ಮೇಳಕ್ಕೆ ಪ್ರವೇಶ ಉಚಿತ.
ಜುಲೈ 16ರ ಸೋಮವಾರ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳ ನಡೆಯಲಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಮೇಳ ಆಯೋಜಿಸಲಾಗಿದೆ.
25ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಪ್ರವೇಶ ಉಚಿತವಾಗಿದ್ದು, ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮನವಿ ಮಾಡಿದೆ.

ಬೆಂಗಳೂರಿನ ರಾಯಲ್ ಗ್ರೂಪ್, ಟಿವಿಎಸ್ ಗ್ರೂಪ್ ಆಫ್ ಕಂಪನಿ, ಕಾರ್ತಿಕ್ ಆಟೋಮೊಬೈಲ್ಸ್, ನಾವೆಲ್ ಗ್ರೂಪ್, ಅರವಿಂದ ಮೋಟಾರ್ಸ್, ಬೆಲ್ ಸ್ಟಾರ್ ಇನ್‌ವೆಸ್ಟ್‌ಮೆಂಟ್, ಕಣ್ವಾ ಗ್ರೂಪ್ಸ್, ಶ್ರೀ ಸಾಯಿ ಎಂಟರ್ ಪ್ರೈಸಸ್, ಬಿಎಸ್‌ಎನ್‌ಎಲ್ ಇಂಡಿಯಾ, ಎಲ್‌ಐಸಿ ಇಂಡಿಯಾ ಸೇರಿದಂತೆ 25ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ/ಸ್ನಾತಕೋತ್ತರ ಪದವಿ ಮುಂತಾದ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದ ಯುವಕ/ಯುವತಿಯರು ಮೇಳಕ್ಕೆ ಆಗಮಿಸಿ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗಳು ಅಗತ್ಯವಿದ್ದರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications