• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೀರ್ಥಹಳ್ಳಿ; ಮನೆ ಖಾಲಿ ಮಾಡಲು ಡಾಕ್ಟರ್‌ಗೆ ಒತ್ತಡ; ದೂರು

|

ಶಿವಮೊಗ್ಗ, ಜೂನ್ 22 : ಕ್ವಾರಂಟೈನ್ ಆಗಿದ್ದ ವೈದ್ಯರಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ ಮನೆ ಮಾಲೀಕರ ವಿರುದ್ಧ ತಹಶೀಲ್ದಾರ್‌ಗೆ ದೂರು ನೀಡಲಾಗಿದೆ. ಚಿಕಿತ್ಸೆ ನೀಡಿದ್ದ ರೋಗಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ವೈದ್ಯರು ಕ್ವಾರಂಟೈನ್‌ ಆಗಿದ್ದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಖಾಸಗಿ ವೈದ್ಯರೊಬ್ಬರ ಬಳಿ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು.

ಕನಕಪುರ ಸೋಂಕಿತ ವೈದ್ಯ ದಂಪತಿಯಿಂದ ಚಿಕಿತ್ಸೆ ಪಡೆದಿದ್ದ 25 ಮಂದಿಗೆ ಸೋಂಕು

ಆದ್ದರಿಂದ, ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯರು, ಲ್ಯಾಬ್ ಟೆಕ್ನಿಷಿಯನ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ವೈದ್ಯರ ಮನೆಯಲ್ಲಿ ಚಿಕ್ಕ ಮಗು, ವೃದ್ಧರು ಇರುವ ಕಾರಣ ಲ್ಯಾಬ್ ಟೆಕ್ನಿಷಿಯನ್ ಇರುವ ಬಾಡಿಗೆ ಮನೆಯಲ್ಲಿ ಇಬ್ಬರು ಕ್ವಾರಂಟೈನ್‌ನಲ್ಲಿದ್ದರು.

ಮೆದುಳಿನ ರಕ್ತಸ್ರಾವದಿಂದ ಹಾಸನದ ವೈದ್ಯ ಸಾವು; ಪರಿಹಾರಕ್ಕೆ ಒತ್ತಾಯ

ಇದಕ್ಕೆ ಮನೆಯ ಮಾಲೀಕ ಆಕ್ಷೇಪ ವ್ಯಕ್ತಪಡಿಸಿದ್ದ. ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ನೀವು ಎಲ್ಲಿಯಾದರೂ ಮನೆ ಖಾಲಿ ಮಾಡಿಕೊಂಡು ಹೋಗಿ. ಇಲ್ಲಿ ಇರುವುದು ಬೇಡ ಎಂದು ಹೇಳಿದ್ದ. ಈ ಕುರಿತು ವೈದ್ಯರು ತಹಶೀಲ್ದಾರ್‌ಗೆ ದೂರು ನೀಡಿದ್ದಾರೆ.

ಹೃದಯಾಘಾತ; ಚಿಕ್ಕಬಳ್ಳಾಪುರ ಜನಪ್ರಿಯ ವೈದ್ಯ ಅನಿಲ್ ಕುಮಾರ್ ನಿಧನ

ದೂರು ಸ್ವೀಕರಿಸಿದ ತಹಶೀಲ್ದಾರ್ ಮನೆ ಮಾಲೀಕರು ಮತ್ತು ವೈದ್ಯರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ವೈದ್ಯ ಮತ್ತು ಲ್ಯಾಬ್ ಟೆಕ್ನಿಷಿಯನ್‌ಗೆ ಬೇರೆ ಕಡೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು, ಪೊಲೀಸರು, ಪೌರ ಕಾರ್ಮಿಕರಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹಾಕುವಂತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹೇಳಿವೆ.

English summary
Shivamogga district Thirthahalli based doctor filed the complaint to tahsildar against house owner targeting him to vacate house after he treat COVID-19 patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X