ಶಿವಮೊಗ್ಗದ ಆಯನೂರು ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ, ಆಸ್ತಿಪಾಸ್ತಿಗೆ ಹಾನಿ
ಶಿವಮೊಗ್ಗ, ಮಾರ್ಚ್ 29: ಶಿವಮೊಗ್ಗ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ರೈತರಿಗೂ ಬೆಳೆ ನಷ್ಟದ ಆತಂಕ ಉಂಟಾಗಿದೆ.
ಶಿವಮೊಗ್ಗ ತಾಲೂಕಿನ ಆಯನೂರು ಸುತ್ತಮುತ್ತ ಸಂಜೆ ವೇಳೆಗೆ ಜೋರು ಮಳೆ ಜೊತೆಗೆ ಆಲಿಕಲ್ಲು ಬಿದ್ದಿವೆ. ಆಲಿಕಲ್ಲು ಬಿದ್ದ ರಭಸಕ್ಕೆ ಚನ್ನಹಳ್ಳಿ ಗ್ರಾಮದ ಮನೆಗಳ ಮೇಲಿನ ಹೆಂಚುಗಳು, ಸೋಲರ್ ಪ್ಯಾನಲ್‌ಗಳು ಒಡೆದು ಹೋಗಿವೆ. ಇನ್ನು ಬಾಳೆ, ಅಡಕೆ ತೋಟಗಳಿಗೆ ಆಲಿಕಲ್ಲಿನಿಂದ ಹಾನಿ ಉಂಟಾಗಿದೆ. ಇದು ರೈತರಿಗೆ ಚಿಂತೆ ಉಂಟು ಮಾಡಿದೆ. ಆಯನೂರು ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗ ನಗರದಲ್ಲಿಯೂ ಮಳೆ
ಇತ್ತ ಶಿವಮೊಗ್ಗ ನಗರದಲ್ಲಿಯೂ ಮಳೆ ಸುರಿದಿದೆ. ಬಹಳ ಹೊತ್ತಿನಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಮಳೆ ಶುರುವಾಗಿದೆ. ಬಿಸಿಲ ಧಗೆ, ವಿಪರೀತ ಶಕೆಯಿಂದ ಜನರು ತತ್ತರಿಸಿದ್ದರು. ಮಳೆಯಿಂದ ತಂಪಾಗುವ ನಿರೀಕ್ಷೆ ಇದೆ.












Click it and Unblock the Notifications