ಅತ್ಯಾಚಾರ ಆರೋಪ: ಇಂದು ಹರತಾಳು ಹಾಲಪ್ಪ ಭವಿಷ್ಯ ನಿರ್ಧಾರ

ಶಿವಮೊಗ್ಗ, (ಆಗಸ್ಟ್ 17 : ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಭವಿಷ್ಯ ಇಂದು (ಗುರುವಾರ) ನಿರ್ಧಾರವಾಗಲಿದೆ.

ಸತತ 7 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಶಿವಮೊಗ್ಗದ 2ನೇ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ರಮಾ ಅವರು ಅಂತಿಮ ತೀರ್ಪುನ್ನು ನೀಡಲಿದ್ದಾರೆ.

Haratal Halappa case, Shimogga court will announce today its verdict

ಅತ್ಯಾಚಾರ ಘಟನೆ ನಡೆದು 6 ತಿಂಗಳ ಬಳಿಕ ಹಾಲಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತಲ್ಲದೇ ಈ ಪ್ರಕರಣದ ಕೈಗೆತ್ತಿಗೊಂಡಿದ್ದ ಸಿಐಡಿ ಪೋಲಿಸರು 10 ತಿಂಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು.

2009ರ ನವೆಂಬರ್​ 26 ರಂದು ಊಟ ಮಾಡಲು ಆಗಮಿಸಿದ್ದ ಹರತಾಳು ಹಾಲಪ್ಪರವರು ತಮ್ಮ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾಗಿ ವೆಂಕಟೇಶಮೂರ್ತಿ ಆರೋಪಿಸಿದ್ದರು.

ಈ ಸಂಬಂಧ ವೆಂಕಟೇಶಮೂರ್ತಿ ಮತ್ತು ಆತನ ಪತ್ನಿ ಚಂದ್ರಾವತಿ 2010 ಮೇ 3 ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+