ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಅರ್ಧ ಲಾಕ್ ಡೌನ್ ರದ್ದು; ಕೆಲ ವಾರ್ಡ್ ಗಳಲ್ಲಿ ಮಾತ್ರ ಸೀಲ್ ಡೌನ್: ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 22: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಾದ್ಯಂತ ಲಾಕ್ ಡೌನ್ ಇರುವುದಿಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಹಾಫ್ ಡೇ ಲಾಕ್ ಡೌನ್ ರದ್ದುಗೊಳಿಸಲಾಗಿದೆ. ಆದರೆ ನಾಳೆಯಿಂದ ನಗರದ 7 ವಾರ್ಡ್ ಗಳಲ್ಲಿ ಸೀಲ್ ಡೌನ್ ಜಾರಿಗೊಳ್ಳಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ಜು.29 ರವೆಗೆ ವಾರ್ಡ್ ನಂಬರ್ 12, 13, 22,23,29,30, 33 ರಲ್ಲಿ ಸೀಲ್ ಡೌನ್ ಜಾರಿಗೊಳ್ಳಲಿದೆ ಎಂದರು.

ಶಿವಮೊಗ್ಗ ನಗರದ ವಿವಿಧ ವಾರ್ಡ್‌ಗಳು ಸಂಪೂರ್ಣ ಲಾಕ್ ಡೌನ್ಶಿವಮೊಗ್ಗ ನಗರದ ವಿವಿಧ ವಾರ್ಡ್‌ಗಳು ಸಂಪೂರ್ಣ ಲಾಕ್ ಡೌನ್

ಬೆಕ್ಕಿನ ಕಲ್ಮಠ, ಎಎ ವೃತ್ತ, ಬಸ್ ನಿಲ್ದಾಣ, ಹಾಗೂ ಹೊಸ ತುಂಗ ಸೇತುವೆ ಒಳಗೆ ಬರುವ ಈ 7 ವಾರ್ಡ್ ಗಳು ಸೀಲ್ ಡೌನ್ ಇರುತ್ತವೆ. 12, 13, 33 ವಾರ್ಡ್ ಗಳಲ್ಲಿ ಭಾಗಶಃ ಜಾಗ ಸೀಲ್ ಡೌನ್ ಆಗಲಿದ್ದು, 22,23,29,30 ವಾರ್ಡ್ ಗಳು ಫುಲ್ ಸೀಲ್ ಡೌನ್ ಇರುತ್ತದೆ ಎಂದು ತಿಳಿಸಿದರು.

Half Day Lockdown Cancelled And Some Wards Seal Down In Shivamogga

ಬಸ್ ನಿಲ್ದಾಣ ಸೀಲ್ ಡೌನ್ ಇಲ್ಲ: ಶಿವಮೊಗ್ಗ ಬಸ್ ನಿಲ್ದಾಣದ ಈ ವಾರ್ಡ್ ಗಳಲ್ಲಿ ಡಿಎಚ್ ಒ, ಕೃಷಿ ಇಲಾಖೆ, ಪೋಸ್ಟ್ ಆಫೀಸ್ ಮೊದಲಾದ ಸರ್ಕಾರಿ ಕಚೇರಿಯ ನೌಕರರಿಗೆ ಓಡಾಡಲು ಅವಕಾಶವಿರುತ್ತದೆ. ತರಕಾರಿ, ಹಣ್ಣು ಮಾರಾಟ ಬೆಳಿಗ್ಗೆ 5 ರಿಂದ 10 ರವರೆಗೆ ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಲಾಕ್ ಡೌನ್ ಇಂದಿನಿಂದ ಬಿಡುಗಡೆಯಾಗಲಿದ್ದು, ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ಇರುತ್ತದೆ. ಒಂದು ವಾರದಿಂದ ಜಾರಿಯಲ್ಲಿದ್ದ ಅರ್ಧ ಲಾಕ್ ಡೌನ್ ತೆಗೆಯಲಾಗಿದೆ ಎಂದರು.

English summary
Half-day lockdown in Shivamogga district has been canceled following Chief Minister BS Yeddyurappa's announcement that there would be no lockdown across the state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X