Tirupati Laddu: ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಬಳಕೆ ವಿಚಾರ ಕೇಳಿ ಕೆಎಸ್ ಈಶ್ವರಪ್ಪ ಶಾಕ್!

ಶಿವಮೊಗ್ಗ ಸೆಪ್ಟೆಂಬರ್ 20: ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬನ್ನು ಬಳಸಲಾಗಿದೆ ಎಂಬ ವಿಚಾರ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬನ್ನು ಬಳಕೆ ಮಾಡಿರುವ ವಿಚಾರ ಕೇಳಿ ಆಶ್ಚರ್ಯ ಆಯ್ತು ಎಂದಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, 'ತಿರುಪತಿ ಲಡ್ಡುವಿನಲ್ಲಿ ಕೊಬ್ಬು ವಿಚಾರ ಕೇಳಿ ಆಶ್ಚರ್ಯ ಆಯ್ತು. ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಭಕ್ತಿ ತುಂಬಿರುತ್ತದೆ. ಆದರೆ ಅದನ್ನು ಗೋ ಮಾತೆಯ ಕೊಬ್ಬು ಸೇರಿಸಿ ತಯಾರು ಮಾಡ್ತಾ ಇರೋದು ತುಂಬಾ ನೋವು ಆಯ್ತು. ಈಗಾಗಲೇ ತನಿಖೆ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ವರದಿ ಕೊಟ್ಟಿದ್ದಾರೆ. ದ್ವೇಷ ಸಾಧನೆ ಮಾಡುವುದಕ್ಕೆ ಈ ವಿಚಾರದಲ್ಲಿ ಹೋಗಬಾರದು' ಎಂದಿದ್ದಾರೆ.

Former dcm ks eshwarappa s reaction on the use of animal fat in the preparation of tirupati laddu

ಜಗನ್ ಮೋಹನ್ ರೆಡ್ಡಿ ಸರ್ಕಾರ ಇದ್ದಾಗ ಈ ರೀತಿ ಮಾಡಿದ್ದಾರೆ. ಇಡೀ ಪ್ರಪಂಚದಲ್ಲಿರುವ ಹಿಂದೂಗಳಿಗೆ ಇದರಿಂದ ನೋವು ಉಂಟಾಗಿದೆ. ಲಡ್ಡು ತಯಾರಿಕೆಯಲ್ಲಿ ಮೀನಿನ ಎಣ್ಣೆ, ಗೋವಿನ ಕೊಬ್ಬು, ಹಂದಿ ಕೊಬ್ಬು ಬಳಸಿದ್ದಾರೆ. ಮತಾಂತರಗೊಂಡಿರುವ ಜಗನ್ ಮೋಹನ್ ರೆಡ್ಡಿ ಈ ರೀತಿ ಮಾಡಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಅವರು ಆರೋಪಿಸಿದರು.

ತಿರುಪತಿಗೆ ಹೋದ ಪ್ರತಿಯೊಬ್ಬ ಭಕ್ತರು ಲಡ್ಡು ತರಲೇಬೇಕು ಎಂದು ಲಡ್ಡು ತರ್ತಾರೆ. ಮನೆ ಮಂದಿ, ಕುಟುಂಬಸ್ಥರು ಎಲ್ಲರೂ ಅದನ್ನು ಪ್ರಸಾದವಾಗಿ ಸೇವಿಸುತ್ತಾರೆ. ಮಾಂಸ ತಿನ್ನದೇ ಇರುವ ಅನೇಕ ಭಕ್ತರಿಗೆ ಇದರಿಂದ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಜಗನ್ ಮೋಹನ್ ರೆಡ್ಡಿ, ಅಧ್ಯಕ್ಷ ಸುಬ್ಬಾರೆಡ್ಡಿ ಅವರನ್ನು ಈ ಪ್ರಕರಣದಲ್ಲಿ ಬಂಧಿಸಬೇಕು. ಈ ಪ್ರಕರಣ ಸಿಬಿಐ ತನಿಖೆಯಾಗಬೇಕು. ಯಾರು ಯಾರು ಬೆಂಬಲ ಕೊಟ್ಟಿದ್ದಾರೆ, ಅವರ ಮೇಲೆ ಕ್ರಮ ಆಗಬೇಕು. ಇದನ್ನ ಹಿಂದೂ ಸಮಾಜ ಒಪ್ಪಲ್ಲ. ಇದು ಪರೋಕ್ಷವಾಗಿ ವಿಷ ಕೊಟ್ಟಿರುವ ಕೆಲಸ. ವೈಎಸ್ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿ ವಿರುದ್ಧ ಎಫ್ಐಆರ್ ಹಾಕಬೇಕು ಎಂದು ಒತ್ತಾಯಿಸಿದರು.

Former dcm ks eshwarappa s reaction on the use of animal fat in the preparation of tirupati laddu

ಪುಣ್ಯ ಸರ್ಕಾರ ಬದಲಾಯಿತು. ಇಲ್ಲದಿದ್ದರೆ ಈ ವಿಚಾರ ಹೊರಗೆ ಬರ್ತಾ ಇರಲಿಲ್ಲ. ತಿರುಪತಿ ತಿಮ್ಮಪ್ಪ ಭಕ್ತರಿಗೆ ಬಹಳ ನೋವು ಆಗಿದೆ. ಕೇಂದ್ರ ಸರ್ಕಾರ ಸಿಬಿಐ ತನಿಖೆ ಮೂಲಕ ಸತ್ಯವನ್ನ ಬಯಲು ಮಾಡಬೇಕು. ರಾಷ್ಟ್ರದ್ರೋಹಿ ಚಟುವಟಿಕೆ ರಾಜ್ಯದಲ್ಲಿ ಹೆಚ್ಚಾಗಿವೆ. ಟಿಪ್ಪು ಸುಲ್ತಾನ್, ಔರಂಗ್ ಜೇಬ್ ಇವರ ಫ್ಲೇಕ್ಸ್ ಹಾಕ್ತಾ ಇದ್ದಾರೆ. ಪ್ಯಾಲೆಸ್ಟೈನ್ ಬಗ್ಗೆ ಅಭಿಮಾನ ತೋರಿಸುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಈ ಬಗ್ಗೆ ಯಾಕೆ ಕಾಂಗ್ರೆಸ್ ಒಂದು ಉತ್ತರವು ಕೊಡ್ತಿಲ್ಲ. ಮನೆಗಳಿಗೆ, ಅಂಗಡಿಗಳಿಗೆ ಕಲ್ಲು ತೂರಾಟ ಆಗಿದೆ. ಇದನ್ನ ಹಿಂದೂ ಸಮಾಜ ಎಷ್ಟು ದಿನ ತಡೆದುಕೊಳ್ಳಬೇಕು. ನಾಗಮಂಗಲದಲ್ಲಿ ಗಲಾಟೆ ಮಾಡಿದ್ದಾರೆ. ಕಲ್ಲು ತೂರಾಟ ಮಾಡಿದ್ದಾರೆ, ತಲ್ವಾರ್ ಹಿಡಿದುಕೊಂಡು ಓಡಾಡಿದ್ದಾರೆ. ರಾಜ್ಯ ಸರ್ಕಾರದಿಂದ ದುಷ್ಕರ್ಮಿಗಳ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಇದರ ಹಿಂದೆ ಯಾವ ಶಕ್ತಿ ಇದೆ ಎಂಬುದನ್ನ ತನಿಖೆಯಾಗಬೇಕು. ರಾಜ್ಯದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ಮೇಲೆ ಹಲ್ಲೆಯಾಗಿದೆ. ಆಡಳಿತ ವ್ಯವಸ್ಥೆ ಸರಿ ಇಲ್ಲ. ಇದೇ ರೀತಿ ನೀವು ಆಡಳಿತ ನಡೆಸಿದ್ರೆ ಜನ ನಿಮ್ಮ ಕುರ್ಚಿ ಖಾಲಿ ಮಾಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಿರುಪತಿ ಹೋಗಬಾರದ ಅಂದುಕೊಂಡ್ರೆ ಹಿಂದೂ ಸಮಾಜ ಸತ್ತುಹೋಗಿದೆ ಅಂತಾ ಅರ್ಥ. ಈ ವಿಚಾರ ಕೇಳಿ‌ ನಮ್ಗು ತುಂಬಾ ನೋವು ತಂದಿದೆ. ತಪಿಸ್ಥರಿಗೆ ಶಿಕ್ಷೆ ಆಗಬೇಕು. ಯಾವ್ಯಾವ ಸಂಸ್ಥೆ ಇವೆ ಎಂಬುದು ತನಿಖೆಯಿಂದ ಹೊರಬರಬೇಕು. ತಿರುಪತಿ ಲಡ್ಡಿನ ಬಗ್ಗೆ ಪ್ರಪಂಚದಲ್ಲಿ ಗೌರವ ಇದೆ. ಈ ವಿಚಾರ ಬಯಲಿಗೆಳೆದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+