Breaking; ಶಿವಮೊಗ್ಗದ ಮೊದಲ ಎಫ್. ಎಂಗೆ ಶುಕ್ರವಾರ ಚಾಲನೆ
ಶಿವಮೊಗ್ಗ, ಏಪ್ರಿಲ್ 21; ಶಿವಮೊಗ್ಗ ನಗರದ ಮೊದಲ ಎಫ್. ಎಂ. ರೇಡಿಯೋಗೆ ಶುಕ್ರವಾರ ಚಾಲನೆ ದೊರೆಯಲಿದೆ. ಎಫ್. ಎಂ 90.8 ತನ್ನ ಪ್ರಸಾರ ಕಾರ್ಯವನ್ನು ಆರಂಭಿಸಲಿದೆ.
ಎಫ್. ಎಂ ರೇಡಿಯೋ ನಿಲಯ ನಿರ್ದೇಶಕ ಜಿ. ಎಲ್. ಜನಾರ್ದನ ಈ ಕುರಿತು ಮಾಹಿತಿ ನೀಡಿದ್ದಾರೆ. ರೇಡಿಯೋ ಶಿವಮೊಗ್ಗ, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ ಪ್ರಾಯೋಗಿಕ ಪ್ರಸಾರ ಆರಂಭಿಸಲಾಗಿದೆ.
ಮಾರ್ಚ್‌ನಲ್ಲಿ ಪ್ರಾಯೋಗಿಕ ಪ್ರಸಾರ ಆರಂಭವಾಗಿದೆ. ಏಪ್ರಿಲ್ 22ರ ಶುಕ್ರವಾರ ಎಫ್. ಎಂ ರೇಡಿಯೋ ಅಧಿಕೃತ ಪ್ರಸಾರ ಆರಂಭವಾಗಲಿದೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯ ತನಕ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ರೇಡಿಯೋ ವಿಶೇಷ ತರಂಗಾಂತರಗಳು ಮತ್ತು ಆನ್‌ಲೈನ್ ಮೂಲಕ ಎಫ್. ಎಂ. ರೇಡಿಯೋ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ಸುಮಾರು 30 ಕಿ. ಮೀ. ದೂರದ ತನಕ ಇದರ ಪ್ರಸಾರವನ್ನು ಕೇಳಬಹುದಾಗಿದೆ.
ಶಿವಮೊಗ್ಗ ಎಫ್. ಎಂ ರೇಡಿಯೋ ಡೌನ್‌ಲೋಡ್ ಮಾಡಿಕೊಂಡು ಸಹ ಜನರು ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ನಗರದ ಉದ್ಯಮಿಗಳು ರೇಡಿಯೋ ಮೂಲಕ ಜಾಹೀರಾತುಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ, ಸಂಗೀತ, ಕ್ರೀಡೆ, ಕೃಷಿ, ವಾಣಿಜ್ಯ, ಉದ್ಯೋಗ, ಕೈಗಾರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಕಾರ್ಯಕ್ರಮಗಳು ಪ್ರಸಾರವಾಗಲಿವೆ.












Click it and Unblock the Notifications