ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು; ಪೋಷಕರ ಆಕ್ರೋಶ
ಶಿವಮೊಗ್ಗ, ಡಿಸೆಂಬರ್ 7: ಶಿವಮೊಗ್ಗದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪರಿಣಿತಾ (20) ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕಾಲೇಜಿನ ವತಿಯಿಂದ ಬೀರನಕೆರೆ ಬಳಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಯಾಂಪ್ ನಡೆಸಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೀರನಕೆರೆಯಲ್ಲಿ 22 ವಿದ್ಯಾರ್ಥಿಗಳ ತಂಡ ವಾಸ್ತವ್ಯ ಹೂಡಿತ್ತು. ಇಂದು ಬೆಳಿಗ್ಗೆ ಪರಿಣಿತಾ ವಾಕಿಂಗ್ ತೆರಳಿದ್ದ ವೇಳೆ ಅಪಘಾತ ನಡೆದಿದೆ.
ಯಮಸ್ವರೂಪಿಯಾಗಿ ಬಂದ ಟಿಪ್ಪರ್: ಮಂಗಳೂರಲ್ಲಿ ಅಪಘಾತಕ್ಕೆ ಮಹಿಳೆ ಬಲಿ
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿರುವುದಾಗಿ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಆದರೆ ಇದನ್ನು ಒಪ್ಪದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ಶವಾಗಾರದ ಬಳಿ ಕಾಲೇಜು ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ವಾಗ್ವಾದ ನಡೆದಿದೆ.