ಶಿವಮೊಗ್ಗ ದಸರಾ: ಬೆಳಗ್ಗೆ ತಾಲೀಮು ನಡೆಸಿ ಸಂಜೆ ಮುದ್ದು ಮರಿಗೆ ಜನ್ಮ ನೀಡಿದ 'ನೇತ್ರಾವತಿ'
ಶಿವಮೊಗ್ಗ, ಅಕ್ಟೋಬರ್ 24: ಶಿವವೊಗ್ಗದಲ್ಲಿ ದಸರಾ ಹಬ್ಬದಾಚರಣೆ ಜೋರಿದೆ. ಉತ್ಸವಕ್ಕೆಂದು ಕರೆಸಲಾಗಿದ್ದ 'ನೇತ್ರಾವತಿ' ಹೆಸರಿನ ಆನೆ ವಿಚಾರವಾಗಿ ಜಿಲ್ಲಾಧಿಕಾರಿಗಳು, ಪಾಲಿಕೆ ಅಧಿಕಾರಿಗಳು ನಡೆ ಚರ್ಚೆ ಹುಟ್ಟು ಹಾಕಿದೆ. ಕಾರಣವೆನೆಂದರೆ ಉತ್ಸವಕ್ಕೆ ಬಂದಿದ್ದ 'ನೇತ್ರಾವತಿ' ಆಯಧ ಪೂಜೆ ದಿನ ಸೋಮವಾರ ಸಂಜೆ ಪುಟ್ಟ ಮರಿಗೆ ಜನ್ಮ ನೀಡಿದ್ದಾಳೆ.
ಪ್ರತಿ ವರ್ಷದಂತೆ ಈ ವರ್ಷವು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ದಸರಾ ಆಚರಣೆ ನೆರವೇರುತ್ತದೆ. ಶಿವಮೊಗ್ಗ ಪಾಲಿಕೆ ಮೇಯರ್ ಮನವಿ ಬೆನ್ನಲ್ಲೆ ಸಕ್ರೈಬೈಲು ಬಿಡಾರದಿಂದ 3 ಪಳಗಿದ ಆನೆಗಳನ್ನು ಇಲ್ಲಿನ ದಸರಾ ಕಳುಹಿಸಲು ಅರಣ್ಯ ಸಚಿವರಿಂದ ಗ್ರೀನ್ ಸಿಗ್ನಲ್ ದೊರೆತಿತ್ತು. ಅದರಂತೆ ಸಾಗರ್ (ಗಂಡಾನೆ), ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಹಬ್ಬಕ್ಕೂ ಮೊದಲೇ ಮಲೆನಾಡಿನ ಜಿಲ್ಲೆಗೆ ಬಂದು ಇಲ್ಲಿನ ವಾಸವಿ ಶಾಲಾ ಆವರಣದಲ್ಲಿ ನೆಲೆಸಿದ್ದವು. ಅಗತ್ಯ ತಾಲೀಮು ಸಹ ನಡೆಸಲಾಗಿತ್ತು.

ವಿಜಯದಶಮಿ ದಿನವೇ ಗರ್ಭಿಣಿ ಆನೆ ನೇತ್ರಾವತಿ ಮುದ್ದು ಮರಿಗೆ ಜನ್ಮ ನೀಡಿದೆ. ಬೆಳಗ್ಗೆ ಮೂರು ಆನೆಗಳು ಶಿವಮೊಗ್ಗ ನಗರದ ಸುತ್ತಾಡಿದ್ದವು. ಸಂಜೆ ಮರಿ ಹಾಕಿದೆ. ಬಿಡಾರದಲ್ಲಿ ನೇತ್ರಾವತಿ ಗರ್ಭಿಣಿ ಆಗಿದ್ದರೂ ಉತ್ಸವಕ್ಕೆ ಕರೆತಂದಿದ್ದರ ಬಗ್ಗೆ ಕೆಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕ್ರೆಬೈಲು ಬಿಡಾರದಲ್ಲಿ ಕುಂತಿ ಎಂಬ ಹೆಣ್ಣಾನೆ ಮರಿ ಹಾಕಿದ್ದರಿಂದ ಬಿಟ್ಟು ಬರಲಾಗಿತ್ತು. ದಸರೆಗೆ ಕರೆತರುವ ವಿಚಾರದಲ್ಲಿ ನೇತ್ರಾವತಿಯನ್ನು ಅಂತಿಮಗೊಸಿ ಕರೆ ತರಲಾಗಿತ್ತು. ಇದೀಗ ವಿಜಯದಶಮಿ ದಿನವೇ ನೇತ್ರಾವತಿ ಮರಿ ಹಾಕಿದ್ದರಿಂದ ಮೆರವಣಿಗೆಗೆ ಕಷ್ಟವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಈ ಹಿಂದೆಯು ಕುಂತಿ ಹೆಣ್ಣಾನೆ ಈ ಹಿಂದೆ ದಸರೆಗೆ ಬಂದಾಗಲೇ ಮರಿ ಹಾಕಿದ್ದಳು ಎಂದು ತಿಳಿದು ಬಂದಿದೆ.
ಸದ್ಯ ನೇತ್ರಾವತಿ ಮರಿ ಹಾಕಿದ್ದಕ್ಕೆ ಬಿಡಾರದ ಸಿಬ್ಬಂದಿಯಲ್ಲಿ ಸಂತಸ ಹೆಚ್ಚಾಗಿದೆ. ನೇತ್ರಾವತಿಗೆ ಎಲ್ಲಿಲ್ಲದ ಆರೈಕೆ ದೊರೆಯುತ್ತಿದೆ. ನೇತ್ರಾವತಿ ಬಿಡಾರದಲ್ಲಿರುವಾಗಿ ಹೇಮಾವತಿಯನ್ನು ಮೆರವಣಿಗೆಗೆ ಬಳಸುವುದು ಕಷ್ಟವಾಗಲಿದೆ. ಅಲ್ಲದೇ ಹೀಗೆ ಗರ್ಭಿಣಿ ಆನೆ ಕುರಿತು ಜಾಗೃತಿ ವಹಿಸದೇ ಮೆರವಣಿಗೆಯಂತ, ಹಬ್ಬದಾಚರಣೆಗಳಿಗೆ ತರಲು ಒಪ್ಪಿಗೆ ನೀಡಬಾರದಿತ್ತು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕೆಲವು ಆಕ್ರೊಶ ಹೊರ ಹಾಕಿದ್ದಾರೆ.












Click it and Unblock the Notifications