ಕೊರೊನಾ ವೈರಸ್ ಭೀತಿ: ಮುಖ್ಯಮಂತ್ರಿಗಳ ಗೃಹ ಕಚೇರಿ ಬಂದ್
ಶಿವಮೊಗ್ಗ, ಜುಲೈ 19: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸದ ಬೀದಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಸಿಎಂ ಗೃಹ ಕಚೇರಿಯನ್ನು ಬಂದ್ ಮಾಡಲಾಗಿದೆ.
Recommended Video
ಹೆಂಡತಿಗೆ ಮಕ್ಕಳೊಂದಿಗೆ 4 Km ನಡೆದುಕೊಂಡು ಸಿಎಂ ಮನೆಮುಂದೆ ಬಂದ ಕೊರೊನ ಸೊಂಕಿತ | Oneindia Kannada
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಮಾಳೇರಕೇರಿ ಬೀದಿಯಲ್ಲಿರುವ ಮುಖ್ಯಮಂತ್ರಿಗಳ ಗೃಹ ಸಂಪರ್ಕ ಕಚೇರಿಯ 100 ಮೀಟರ್ ದೂರದಲ್ಲಿರುವ ಮನೆಯೊಂದರಲ್ಲಿ ರಾಜಸ್ಥಾನದಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಶನಿವಾರ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆ ರಸ್ತೆಯನ್ನು ನಿಯಮದ ಪ್ರಕಾರ 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತದೆ.
ಈ ಕಾರಣಕ್ಕಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿರುವ ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಸಂಪೂರ್ಣವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ಮಾಡಲಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ ಅವರು ತಿಳಿಸಿದ್ದಾರೆ.

ತುರ್ತು ಕೆಲಸವಿದ್ದರೆ ದೂರವಾಣಿಯಲ್ಲಿ ಮಾತ್ರ ಸಂಪರ್ಕಿಸಲು ಅವಕಾಶವಿದೆ. ದಯಮಾಡಿ ಸಾರ್ವಜನಿಕರು, ಕಾರ್ಯಕರ್ತರು ಸಹಕರಿಸಲು ತಿಳಿಸಿದ್ದಾರೆ.












Click it and Unblock the Notifications