ಕಾಂಗ್ರೆಸ್ 40% ಮೀರಿದೆ, ಬಡವರ ಹೆಸರಿನಲ್ಲಿ ಲೂಟಿ ಮಾಡಿದೆ- ಹೆಚ್‌ಡಿ ಕುಮಾರಸ್ವಾಮಿ

ಶಿವಮೊಗ್ಗ ಸೆಪ್ಟೆಂಬರ್ 5: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಗೆಲ್ಲಬೇಕು. ಜೆಡಿಎಸ್ ಶಿವಮೊಗ್ಗದಲ್ಲಿ ನಾಲ್ಕು ಸ್ಥಾನ ಗೆಲ್ಲಬೇಕು. ಸ್ವತಂತ್ರವಾಗಿ ಅಧಿಕಾರಕ್ಕೆ ನಾವು ಬರಬೇಕು ಎಂಬುವುದು ನನ್ನ ಕನಸು ಎಂದು ಇಂದು ಶಿವಮೊಗ್ಗದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಶಿವಮೊಗ್ಗದಲ್ಲಿ ಜೆಡಿಎಸ್ ಸಾಧನೆ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಗಳು ಹೀಗಿದೆ....

Congress exceeded 40 plundered in the name of poor- HD Kumaraswamy s statement in Shivamogga

ಶಿವಮೊಗ್ಗದಲ್ಲಿ ಜನತಾದಳದ ಬೇರು ಗಟ್ಟಿ ಇದೆ...

ಶಿವಮೊಗ್ಗದಲ್ಲಿ ಮುಖಂಡರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಜನತಾದಳದ ಬೇರು ಗಟ್ಟಿಯಾಗಿದೆ. ಕೆಲವು ಕ್ಷೇತ್ರಗಳಲ್ಲಿ ಚುನಾವಣೆ ಸಮಯದಲ್ಲಿ ಟಿಕೆಟ್ ತಗೊಳೊದು ನಂತರ ಬಿಟ್ಟು ಹೋಗುತ್ತಾರೆ. ಶಾರದಾ ಅಪ್ಪಾಜಿ ಗೌಡರು ಭದ್ರಾವತಿಯಲ್ಲಿ ಶಕ್ತಿ ಹಾಗೇ ಉಳಿಸಿದ್ದಾರೆ. ನಮ್ಮ ತಪ್ಪಿನಿಂದಾಗಿ ಭದ್ರಾವತಿ ಕಳೆದುಕೊಳ್ಳಬೇಕಾಯಿತು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ದರಾಗಬೇಕು. ಜಿಲ್ಲೆಯಲ್ಲಿ ಜನರ ಮನಗೆದ್ದು ಸದಸ್ಯತ್ವ ಮಾಡಿಸಬೇಕಿದೆ ಎಮದು ಹೇಳಿದರು.

ರಾಜ್ಯ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ. ಒಳ್ಳೆಯ ಆಡಳಿತ ಕೊಡುತ್ತೇವೆ ಎಂದು ಜನರ ದಾರಿ ತಪ್ಪಿಸಿದ್ದಾರೆ. ರಾಜ್ಯದ ಅಭಿವೃದ್ದಿ ಮಾಡದೆ ಲೂಟಿ ಹೊಡೆಯುವ ಪರಿಸ್ಥಿತಿ ಬಂದಿದೆ. ಪಕ್ಷ ಸಂಘಟಿಸಿ ಚುರುಕುಗೊಳಿಸಿದರೆ ಶಿವಮೊಗ್ಗದಲ್ಲಿ ನಾಲ್ಕೈದು ಕ್ಷೇತ್ರ ಗೆಲ್ಲಬಹುದು. ಮೈತ್ರಿ ಒಂದು ಭಾಗ ಆದರೆ ಪಕ್ಷ ಸಂಘಟಿಸುವುದು ಇನ್ನೊಂದು ಭಾಗ. ಮೈತ್ರಿಗೆ ಧಕ್ಕೆ ಆಗದ ರೀತಿಯಲ್ಲಿ ಪಕ್ಷ ಸಂಘಟಿಸಬೇಕು. ನಿಖಿಲ್ ಅವರು ಈಗ ರಾಜ್ಯದ್ಯಾಂತ ಪ್ರವಾಸ ಮಾಡುತ್ತಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಸ್ವಲ್ಪ ಕಡಿಮೆ ಆಗಿದೆ ಎಂದರು.

Congress exceeded 40 plundered in the name of poor- HD Kumaraswamy s statement in Shivamogga

ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಮ್ಮದಾಗಬೇಕು- ಹೆಚ್‌ಡಿಕೆ

ಶಿವಮೊಗ್ಗ ಮತ್ತು ನನಗೆ ಸಾಕಷ್ಟು ಅವಿನಾಭಾವ ಸಂಬಂಧ ಇದೆ. ನಮ್ಮ ಶಾಸಕಿ ಶಾರದಾ ಪೂರ್ಯಾನಾಯ್ಕ ನನ್ನ ತಂಗಿ ಇದ್ದ ಹಾಗೇ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಹ ಭದ್ರಾವತಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಗೆಲ್ಲಬೇಕು. ಜೆಡಿಎಸ್ ಶಿವಮೊಗ್ಗದಲ್ಲಿ ನಾಲ್ಕು ಸ್ಥಾನ ಗೆಲ್ಲಬೇಕು. ಸ್ವತಂತ್ರವಾಗಿ ಅಧಿಕಾರಕ್ಕೆ ನಾವು ಬರಬೇಕು ಎಂಬುವುದು ನನ್ನ ಕನಸು. ಚುನಾವಣೆ ಯಾವಾಗ ಬಂದರೂ ನಾವು ಮಾನಸಿಕವಾಗಿ ಸಿದ್ದರಿರಬೇಕು ಎಂದರು.

ಚುನಾವಣೆ ಯಾವುದೇ ಕ್ಷಣದಲ್ಲೇ ಬರಬಹುದು. 2025 ಕ್ಕೆ ಬರುತ್ತೋ 2026 ಕ್ಕೆ ಬರುತ್ತೇ ಗೊತ್ತಿಲ್ಲ ನಾವು ಮಾನಸಿಕವಾಗಿ ಸಿದ್ದರಿರಬೇಕು. ವಿಐಎಸ್ಎಲ್ ಉಳಿಸುವ ಕೆಲಸ ನಾನು ಮಾಡುತ್ತೇನೆ. ವಿಐಎಸ್ಎಲ್ ಕಾರ್ಮಿಕರಿಗೆ ನಿರಂತರ ಕೆಲಸ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಟಿ

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಜನತೆಗೆ ಗೌರಿ ಗಣೇಶದ ಹಬ್ಬದ ಶುಭಾಶಯ ಕೋರಿದರು. ಹಲವಾರು ರೀತಿಯ ಕೊಡುಗೆ ಕೊಟ್ಟ ಜಿಲ್ಲೆ ಇದು. ಬೇರೆ ನಗರಗಳಿಗೆ ಹೊಲಿಸಿದ್ರೆ ಸ್ವಲ್ಪ ಅಭಿವೃದ್ಧಿಯಾಗಿದೆ. ವಿಶೇಷ ಸ್ಥಾನಮಾನ ಕೊಟ್ಟಿರುವ ಜಿಲ್ಲೆ ಇದು. ಸರ್ಕಾರ ಯೋಜನೆಗೆಳು ಜಾರಿಗೆ ತರುವ ವಿಚಾರದಲ್ಲಿ ಲೋಪದೋಷಗಳು ಆಗ್ತಿವೆ ಎಂದರು.

ಕಾಂಗ್ರೆಸ್ 40% ಮೀರಿದೆ...

ಈ ಹಿಂದೆ ಯಾವತ್ತು ಕಂಡಿಲ್ಲ. ರಾಜ್ಯ ಏಳುಬೀಳು ನೋಡಿದೆ. ಆಡಳಿತ ಪಕ್ಷದ ಅವಧಿ ಕೊನೆ ದಿನಗಳಿಗೆ ಬಂದ ರೀತಿಯಲ್ಲಿ ಟೀಕೆ ಟಿಪ್ಪಣಿ ನಡೆಯುತ್ತವೆ. ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಸರ್ಕಾರದ ಬಗ್ಗೆ ಟೀಕೆ ಶುರುವಾಗಿವೆ. ಕಳೆದ ಸರ್ಕಾರ ಬಗ್ಗೆ ದೊಡ್ಡ ಮಟ್ಟ ದಲ್ಲಿ ಟೀಕೆ ಮಾಡಿ ಅಧಿಕಾರ ಹಿಡಿದ್ರು. ಕಾಂಗ್ರೆಸ್ ನವರು ಸ್ವಲ್ಪ ಬದಲಾವಣೆ ತರಬಹುದು ಅಂತಾ ಜನ ನಿರೀಕ್ಷೆ ಮಾಡಿದ್ರು. ಕಾಂಗ್ರೆಸ್ ಸ್ನೇಹಿತರಿಗೆ ಸರ್ಕಾರ ಬಗ್ಗೆ 40 % ಮೀರಿದೆ ಅಂತಾ ಹೇಳ್ತಾ ಇದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬಡವರ ಹೆಸರಿನಲ್ಲಿ ಲೂಟಿ...

ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಹಣ ಬಳಕೆ ಆಗ್ತಿದ್ದೀಯಾ ಅನ್ನೋದು ಪ್ರಶ್ನೆಯಾಗಿದೆ. ಅಭಿವೃದ್ಧಿ ಪೂರಕ ಯೋಜನೆ ತರಬೇಕು. ನೀರಾವರಿ, ರಸ್ತೆ, ಕೃಷಿ ವಲಯದ ಪರಿಸ್ಥಿತಿ ಏನಾಗಿದೆ ಅನ್ನೋದು ನೋಡಬೇಕು. ಪ್ರಕೃತಿ ವಿಕೋಪದ ಬಗ್ಗೆ ಇವರ ಕೊಡುಗೆ ಏನು ಅಂತಾ ನೋಡಬೇಕು. ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಬಗ್ಗೆ, ಅಧಿಕಾರಿಗಳ ವರ್ಗಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಗಮಗಳಲ್ಲಿ ನೂರಾರು ಕೋಟಿ ಹಗರಣ ವಿಚಾರ ಮುನ್ನಲೆಗೆ ಬಂದಿದೆ. ಬಡವರ ಹೆಸರಿನಲ್ಲಿ ಲೂಟಿ ಆಗಿದೆ.

ನಾವು ಹಿಂದುಳಿದ ವರ್ಗದವರು ಅಂತಾ ಸಿಎಂ ಹೇಳ್ತಾರೆ. ಸಂಗೊಳ್ಳಿ ರಾಯಣ್ಣ ಆಗಿರುವ ಘಟನೆಗಳನ್ನ ಸಿಎಂ ಹೋಲಿಕೆ ಮಾಡಿಕೊಂಡಿದ್ದಾರೆ. ಸ್ವಪಕ್ಷದವರೇ ಹುಡುಕಿಕೊಟ್ಟಿದ್ದಾರೆಂದು ಸಿಎಂ ಹೋಲಿಕೆ ಮಾಡಿದ್ದಾರೆ. ನಮ್ಮ ಪಕ್ಷದವರೇ ನನ್ನನ್ನ ಮುಳುಗಿಸೋಕೆ ಪ್ರಯತ್ನ ಮಾಡ್ತಾ ಇದ್ದಾರೆ ಅಂತಾ ಅವರೇ ಹೇಳ್ತಾ ಇದ್ದಾರೆ. ವಿರೋಧ ಪಕ್ಷದ ಬಗ್ಗೆ ಸ್ವಲ್ಪ ಮಾತಾನಾಡೋದು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಕಾಂಗ್ರೆಸ್‌ಗೆ ಗುಂಡಿ ಮುಚ್ಚೋಕು ಆಗ್ತಿಲ್ಲ....

ಕಳೆದ ಬಾರಿ ಜಾಹೀರಾತು ನೀಡಿದ್ದ ವರದಿಗಳ ಬಗ್ಗೆ ತನಿಖೆ ಮಾಡಿದ್ರಾ ಇವರು? ಸಿಎಂ ಕುಟುಂಬದ ಬಗ್ಗೆ ಕೇಳಿಬಂದಿರುವ ಆರೋಪದ ಬಗ್ಗೆ ಇದೀಗ ಕೋರ್ಟ್ ನಲ್ಲಿ ವಾದ ನಡೆಯುತ್ತಿವೆ. ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನಾವಶ್ಯಕ. ದಾಖಲೆಗಳನ್ನ ಇದ್ದೇ ಕೋರ್ಟ್ ನಲ್ಲಿ ಪ್ರಸ್ತಾಪ ಆಗಿದೆ. ಅಂತಿಮವಾಗಿ ಇದನ್ನ ಕೋರ್ಟ್ ಗೆ ಬಿಡಬೇಕು. ಈ ಬಗ್ಗೆ ಚರ್ಚೆ ಮಾಡೋದು ಸೂಕ್ತ ಅಲ್ಲ ಎಮದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತ ಆಗಿದೆ. ಗುಂಡಿ ಮುಚ್ಚೋಕು ಆಗ್ತಿಲ್ಲ. ಕಂದಾಯ ಸಚಿವ ರ ಕ್ಷೇತ್ರದಲ್ಲೂ ಗುಂಡಿ ಮುಚ್ಚೋಕೆ ಆಗ್ತಿಲ್ಲ. ದಯಾನೀಯ ಪರಿಸ್ಥಿತಿ ಗೆ ರಾಜ್ಯ ತಲುಪಿದೆ. ಕೈ‌ಮುಗಿದು ಸಚಿವರೇ ಗುಂಡಿ ಮುಚ್ಚಿ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಹಿಮಾಲಯ ಪ್ರದೇಶದಲ್ಲಿ ಸಂಬಳ ಕೋಡುವುದಕ್ಕೂ ಹಣ ಇಲ್ಲ. ಅಲ್ಲೂ ಕೂಡ ಕಾಂಗ್ರೆಸ್ ಸರ್ಕಾರ ಇದೆ. ಸಮಾನತೆ ಅನ್ನೋದು ಎಲ್ಲರಿಗೂ ಅನ್ವಯವಾಗಬೇಕು. ನಾನು ರೈತರ ಸಾಲಮನ್ನ ಮಾಡ್ತೀನಿ ಅಂದೆ. ಆಗ ಅಭಿವೃದ್ಧಿ ನಿಲ್ಲಿಸಿದ್ನಾ? ಎಂದು ಪ್ರರ್ಶನೆ ಮಾಡಿದರು.

27 ಕೋಟಿ ಲಾಸ್...

ಸರ್ಕಾರದಲ್ಲಿ ಅನುಭವಸ್ಥರು ಇದ್ದೀರಿ. ಏನಾಗಿದೆ ನಿಮ್ಮಗೆ, ರಾಜ್ಯವನ್ನ ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂದುಕೊಂಡಿದ್ದೀರಾ? ಕುದುರೆಮುಖ ಮೈನಿಂಗ್ ಕಂಪನಿಗೆ 1700 ಕೋಟಿ ಬಿಡುಗಡೆಗೆ ನಾನು ಸಹಿ ಹಾಕಿದ್ದೇನೆ. ಅರಣ್ಯ ಸಚಿವರಿಗೆ ತಲೆಬುಡ ಗೊತ್ತಿಲ್ಲ. ಸಣ್ಣಪುಟ್ಟ ದೋಷ ಇದ್ರು ಸರಿ ಮಾಡಿಕೊಡ್ತೀವಿ ಅಂತಾ ಕುದುರೆಮುಖದವರು ಹೇಳಿದ್ದಾರೆ. ಕುದುರೆಮುಖದ ಕಂಪನಿಗೆ ದಿನಕ್ಕೆ 27 ಕೋಟಿ ಲಾಸ್ ಆಗ್ತಿದೆ ಎಂದು ಕಾಂಗ್ರೆಸ್‌ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಮೇಲೆ ದ್ವೇಷ ಇದ್ರೆ ಬೇರೆ ತರಾ ತೀರಿಸಿಕೊಳ್ಳಿ. ನಮ್ಮ ಮೇಲಿನ ದ್ವೇಷ ಕ್ಕೆ ಕಾರ್ಮಿಕರನ್ನ ಯಾಕೆ ಬೀದಿಗೆ ತರ್ತೀರಾ. ಹೆಚ್ ಎಂ ಟಿ ಕಂಪನಿನಿಂದ ಬಂದ ಲಾಭದಿಂದ ಆರು ಕಡೆ ಓಪನ್ ಆಗಿತ್ತು. ಅದು ಈಗ ನಿಂತು ಹೋಗಿವೆ. ಅದನ್ನ ಜೀವ ಕೊಡುವ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ವಿಐಎಸ್ ಎಲ್ ಮಾರಾಟ ಮಾಡಲು‌ ಮುಂದಾಗಿದ್ದಾರೆ. ಸಾವಿರಾರು ಜನರಿಗೆ ಅನ್ನ ಕೊಟ್ಟಿರುವ ಕಂಪನಿ ಅದು. ಅದಕ್ಕೆ ಜೀವ ಕೊಡುವ ಕೆಲಸ ಮಾಡ್ತಾ ಇದ್ದೀನಿ. ಅದರ ಶ್ರಮ ನನಗೆ ಮಾತ್ರ ಗೊತ್ತು. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳು ಖಾಸಗಿತನಕ್ಕೆ ಒಪ್ಪಿಸಬೇಕು ಅಂತಾ ತೀರ್ಮಾನ ಆಗಿದೆ ಎಂದರು.

ಕೇಂದ್ರದಲ್ಲಿ ಆಡಳಿತ ಮಾಡೋದು ಅಷ್ಟು ಸುಲಭ ಅಲ್ಲ- ಹೆಚ್‌ಡಿಕೆ

ಆದ್ರು ವಿಐಎಸ್ ಎಲ್ ಉಳಿಸೋಕೆ ನಾನು ಪ್ರಯತ್ನ ಮಾಡ್ತಾ ಇದ್ದೀನಿ. ರಾಜ್ಯದಲ್ಲಿ ಆಡಳಿತ ಮಾಡಲು ಸುಲಭ. ಕೇಂದ್ರದಲ್ಲಿ ಆಡಳಿತ ಮಾಡೋದು ಅಷ್ಟು ಸುಲಭ ಅಲ್ಲ. ಪ್ರಧಾನ ಮಂತ್ರಿ ಗೌರವ ಉಳಿಸಿ ಕೆಲಸ ಮಾಡಬೇಕಿದೆ. ದೊಡ್ಡ ಮಟ್ಟದ ಸವಾಲು ಇದೆ. ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದ್ದೀನಿ. ಕೆಲವರು ಲಘವಾಗಿ ಮಾತಾನಾಡುತ್ತಿದ್ದಾರೆ. ವ್ಯವಸ್ಥೆ ಸರಿಪಡಿಸುತ್ತಿದ್ದೇನೆ. ನಾನು ಹಾಗಾಗಿ ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದ್ದೀನಿ ಎಂದರು.

ಸರ್ಕಾರ ಇದೆ ಅನ್ನೋ‌ ಭಾವನೆ ಇಲ್ಲ. ಸಮಯ ವ್ಯರ್ಥ ಆಗಿದೆ ಕಾಲ ಮತ್ತೆ ಸಿಗೋಲ್ಲ. ಅದನ್ನ ಸರಿಯಾಗಿ ಬಳಕೆ ಮಾಡಬೇಕು. ನಾನು ಎಂದು ಸಹ ಕೇಂದ್ರ ಸರ್ಕಾರ ಜೊತೆ ಸಂಘರ್ಷಕ್ಕೆ ಹೋಗಲಿಲ್ಲ. ಕೇಂದ್ರದ ಸಚಿವರ ಜೊತೆ ವಿಶ್ವಾಸ ಗಳಿಸಿ ಅಭಿವೃದ್ಧಿ ಕೆಲಸ ಮಾಡಿದ್ದೆ. ವಿಐಎಸ್ ಎಲ್‌ ಉಳಿಸೋಕೆ ಶತ ಪ್ರಯತ್ನ ಮಾಡ್ತೇನೆ. ಅದಕ್ಕೆ ಸಮಯ ಬೇಕು. ಕಾರ್ಮಿಕ ರಿಗೆ ಭರವಸೆ ನೀಡ್ತೇನೆ. ವಿಐಎಸ್ ಎಲ್ ಉಳಿಸೋಕೆ ಎಲ್ಲಾ ಪ್ರಯತ್ನ ಮಾಡ್ತೇನೆ. ಎಂದು ಹೇಳಿದರು.

ಸುನಾಮಿ ವಿರುದ್ಧ ಈಜುವ ಪರಿಸ್ಥಿತಿ ಇದೆ- ಹೆಚ್‌ಡಿಕೆ

ಸಿಕ್ಕ ಅವಕಾಶ ಹಲವಾರು ಯೋಜನೆ ಜಾರಿ ತರಬೇಕು ಅಂದುಕೊಂಡಿದ್ದೇನೆ. ಸುನಾಮಿ ವಿರುದ್ಧ ಈಜುವ ಪರಿಸ್ಥಿತಿ ಇದೆ. ವಿಐಎಸ್ ಎಲ್ ಉಳಿಸೋಕೆ ಎಲ್ಲಾ ಪ್ರಯತ್ನ ಮಾಡ್ತಾ ಇದ್ದೀನಿ. ಅವರ ಪಕ್ಷದ ನಡುವಳಿಕೆ ನಮ್ಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಬಗ್ಗೆ ಅವರೇ ಮಾತಾನಾಡಿಕೊಳ್ತಾ ಇದ್ದಾರೆ. ಆಡಳಿತ ನಿಯಂತ್ರಣ ಮೇಲೆ ಇದು ಎಫೆಕ್ಟ್ ಆಗುತ್ತದೆ. ಜನರಲ್ಲಿ ವಿಶ್ವಾಸ ಮೂಡಲ್ಲ. ಪ್ರತಿನಿತ್ಯ ಇದೇ ರೀತಿ ಮುಂದುವರೆದ್ರೆ ಅಧಿಕಾರಿಗಳು ಮಾತು ಕೇಳೊಲ್ಲ ಎಂದು ಕಿಡಿ ಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+