BY Vijayendra: ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಆರೋಪ- ಬಿವೈ ವಿಜಯೇಂದ್ರ ಮನೆಗೆ ಮುತ್ತಿಗೆ

ಶಿವಮೊಗ್ಗ ಆಗಸ್ಟ್ 8: ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಗರದ ಬೈಪಾಸ್ ರಸ್ತೆಯಲ್ಲಿರುವ ವಿಜಯೇಂದ್ರ ನಿವಾಸದ ಮೇಲೆ ಕಾಂಗ್ರೆಸ್ ಬೆಂಬಲಿಗರು ಮುತ್ತಿಗೆ ಹಾಕಲು ಮುಂದಾಗಿರುವುದು ಕಂಡು ಬಂದಿದೆ. ಸಿದ್ಧರಾಮಯ್ಯ ಅವರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಿತೂರಿ ನಡೆಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ. ಇದರಿಂದಾಗಿ ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ಬಿ.ವೈ. ವಿಜಯೇಂದ್ರ ಮನೆ ಮೇಲೆ ಮುತ್ತಿಗೆ ಹಾಕಲು ಯತ್ನಿಸಿರುವುದು ಕಂಡು ಬಂದಿದೆ.

Condemnation for the conspiracy against CM Siddaramaiah Siege of Vijayendra s house

ಕರ್ನಾಟಕ ಶೋಷಿತ ವರ್ಗಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಪ್ರತಿಭಟನಾಕಾರರು ವಿಜಯೇಂದ್ರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯವನ್ನು ಲೂಟಿ ಮಾಡಿದ ವಿಜಯೇಂದ್ರನಿಗೆ ಧಿಕ್ಕಾರ, ನ್ಯಾಯ ಬೇಕು ಎಂದು ಕೂಗುತ್ತಾ ಅವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಪ್ರತಿಭಟನಾಕಾರರನ್ನು ಮನೆ ಬಳಿ ಬಿಡದ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದವನ್ನು ಮಾಡಿದರು. ಅಲ್ಲದೆ ದಾರಿ ಮಧ್ಯೆದಲ್ಲೇ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನ ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿರುವುದು ಕಂಡು ಬಂದಿದೆ.

ಪ್ರೀತಂಗೌಡ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಫೈಟ್

ಮುಡಾ, ವಾಲ್ಮೀಕಿ ಹಗರಣದ ವಿರುದ್ಧ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಇದರ ನಡುವೆಯೇ ಪ್ರೀತಂಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿ ಬೆಂಬಲಿಗರ ಮಧ್ಯೆ ಫೈಟ್ ತಾರಕಕ್ಕೇರಿದೆ.

ಮಂಡ್ಯದಲ್ಲಿ ಪಾದಯಾತ್ರೆ ವೇಳೆ ಹಾಕಲಾಗಿದ್ದ ಫ್ಲೆಕ್ಸ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಕಂಡು ಬಂದಿದೆ. ಮುಡಾ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್‌ ಪಕ್ಷಗಳು ಮಾಡುತ್ತಿರುವ ಐದು ದಿನದ ಪಾದಯಾತ್ರೆ ಮಂಡ್ಯ ದಾಟಿ ತೂಬಿನಕೆರೆ ಬಳಿ ಅಂತ್ಯವಾಗಿತ್ತು. ನಿನ್ನೆಯ ಪಾದಯಾತ್ರೆಯಲ್ಲಿ ಇಡೀ ಮಂಡ್ಯ ಕೇಸರಿ ಬಾವುಟ ಹಾಗೂ ಜೆಡಿಎಸ್ ಬಾವುಟಗಳಿಂದ ಕಂಗೊಳಿಸುತ್ತಿತ್ತು.

ಹಾಸನ ಪೆನ್‌ಡ್ರೈವ್ ಹಂಚಿದ್ದು ಪ್ರೀತಂಗೌಡ ಎಂದು ಹೆಚ್‌ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಹೀಗಾಗಿ ಅವರು ಪ್ರೀತಂಗೌಡ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಲು ಅಪಸ್ವರ ಎತ್ತಿದ್ದರು. ಆದರೆ ಜೆಪಿ ನಡ್ಡಾ, ಪ್ರಲ್ಹಾದ್ ಜೋಶಿ ಸಂಧಾನ ಮಾಡಿದ ನಂತರ ಪಾದಯಾತ್ರೆಯಲ್ಲಿ ಭಾಗವಿಸಲು ಗ್ರೀನ್ ಸಿಗ್ನಲ್ ಹೆಚ್‌ಡಿ ಕುಮಾರಸ್ವಾಮಿ ಕೊಟ್ಟಿದ್ದರು.

ಆದರೂ ಕೂಡ ಕುಮಾರಸ್ವಾಮಿ ಬಂದಾಗ ಪ್ರೀತಂಗೌಡ ಪಾದಯಾತ್ರೆಯಲ್ಲಿ ಗೈರಾಗಿದ್ದು ಕಂಡು ಬಂದಿದೆ. ಇನ್ನೂ ಪ್ರೀತಂ ಗೌಡ ಬಂದ ಕೂಡಲೇ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿತ್ತು. ಇದು ತಾರಕ್ಕಕ್ಕೇರಿ ನಿನ್ನೆ ದಿನ ಪ್ರೀತಂಗೌಡ ಅವರ ಫ್ಲೆಕ್ಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಹೀಗಾಗಿ ಇದು ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಪಾದಯಾತ್ರೆಯಾಗುವ ಬದಲಿಗೆ ಪ್ರೀತಂಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ನಡುವಿನ ಜಗಳಕ್ಕೆ ವೇದಿಕೆಯಾಗಿಹೋಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+