ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಂತಾಮಣಿ ದೇವಾಲಯ ವಿಷಪ್ರಸಾದ ಪ್ರಕರಣ:ಭದ್ರಾವತಿಯಲ್ಲಿ ಓರ್ವನ ಬಂಧನ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 29:ಚಿಂತಾಮಣಿ ದೇವಾಲಯ ವಿಷಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೇಶ್ ಎಂಬಾತನನ್ನು ಭದ್ರಾವತಿಯಲ್ಲಿ ಬಂಧಿಸಲಾಗಿದೆ.

ಭದ್ರಾವತಿಯ ಬೈಪಾಸ್ ನಲ್ಲಿ ಸ್ಪೂರ್ತಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಲೋಕೇಶ್ ನನ್ನು ಇದೀಗ ಭದ್ರಾವತಿ ನ್ಯೂಟೌನ್ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.

ಗಂಗಮ್ಮ ದೇವಾಲಯದ ವಿಷ ಪ್ರಸಾದ ದುರಂತ: ದ್ವೇಷ, ಅನೈತಿಕ ಸಂಬಂಧವೇ ಕಾರಣ?ಗಂಗಮ್ಮ ದೇವಾಲಯದ ವಿಷ ಪ್ರಸಾದ ದುರಂತ: ದ್ವೇಷ, ಅನೈತಿಕ ಸಂಬಂಧವೇ ಕಾರಣ?

20 ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಲೋಕೇಶ್ ಇದೀಗ ಬಂಧನಕ್ಕೊಳಗಾಗಿದ್ದಾನೆ.

Chintamani temple food poisoning:Lokesh was arrested

ಶನಿವಾರ (ಜನವರಿ 26) ಗಂಗಮ್ಮ ದೇವಿ ದೇವಾಲಯದಲ್ಲಿ ಪೂಜೆಯ ನಂತರ ಪ್ರಸಾದ ಸೇವಿಸಿದ್ದ ಇಬ್ಬರು ಮೃತರಾಗಿದ್ದರು. ಈ ಪ್ರಕರಣದಲ್ಲೂ ಅಕ್ರಮ ಸಂಬಂಧದ ವಾಸನೆ ಕೇಳಿಬರುತ್ತಿದ್ದು, ದೇವಾಲಯದ ಎದುರು‌ ಮನೆಯ ಲಕ್ಷ್ಮೀ ಹಾಗೂ ದೇವಾಲಯದ ಪಕ್ಕದ ಮನೆಯ ಲೋಕೇಶ್​ರ ಅಕ್ರಮ ಸಂಬಂಧವೇ ಈ ದುರಂತಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.

 ಗಂಗಮ್ಮ ದೇವಿ ಪ್ರಸಾದ ದುರಂತ, ಮೃತರ ಸಂಖ್ಯೆ 2ಕ್ಕೆ ಏರಿಕೆ ಗಂಗಮ್ಮ ದೇವಿ ಪ್ರಸಾದ ದುರಂತ, ಮೃತರ ಸಂಖ್ಯೆ 2ಕ್ಕೆ ಏರಿಕೆ

ಕಳೆದ 3 ತಿಂಗಳಿಂದ ಲೋಕೇಶ್​ ಮನೆ ಬಿಟ್ಟು ನಾಪತ್ತೆಯಾಗಿದ್ದ. ತನ್ನ ಪ್ರಿಯಕರ ದೂರವಾಗಿದ್ದನ್ನು ಸಹಿಸದ ಲಕ್ಷ್ಮಿ, ಲೋಕೇಶ್ ಪತ್ನಿ ಗೌರಿಯನ್ನು ಕೊಂದರೆ, ಅನೈತಿಕ ಸಂಬಂಧದ ಹಾದಿ ಸುಗಮವಾಗುತ್ತದೆ ಎಂದು ಹೀಗೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.

 ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ ಚಿಂತಾಮಣಿಯಲ್ಲಿ ಪ್ರಸಾದ ಸೇವಿಸಿ ಯುವತಿ ಸಾವು, 6 ಮಂದಿ ಅಸ್ವಸ್ಥ

ಇದೀಗ ಪೊಲೀಸರು ಗೌರಿ ಹೇಳಿಕೆ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಎಫ್.ಎಸ್.ಎಲ್.ರಿಪೋರ್ಟ್ ಸಹ ಪೊಲೀಸರ ಕೈ ಸೇರಿದ್ದು, ಲಕ್ಷ್ಮೀ ತಪ್ಪು ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

English summary
Chintamani temple food poisoning: Lokesh was arrested in Bhadravathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X