Breaking:ಜೋಗ ನೋಡಿ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತ
ಶಿವಮೊಗ್ಗ, ಆಗಸ್ಟ್ 1: ಜೋಗ ಜಲಪಾತ ವೀಕ್ಷಣೆ ಮಾಡಿ ಹಿಂತಿರುಗುತ್ತಿದ್ದಾಗ ಒಂದೇ ಕುಟುಂಬದವರಿದ್ದ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಚಾಲಕ ಶಾಬಾಜ್ (23) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಿಹಾನ್(14), ತಬಸ್ಸುಮ್(23), ಶಿಫಾ(27), ಖಮರುನ್ನಿಸಾ (45), ಜಬ್ರುನ್(55), ಮಹಮ್ಮದ್ ಉಸ್ಮಾನ್(25) ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೇಗಾಯ್ತು ಅಪಘಾತ?
ಚನ್ನಗಿರಿಯಿಂದ ಒಂದೇ ಕುಟುಂಬದ ಏಳು ಮಂದಿ ಜೋಗ ಜಲಪಾತ ವೀಕ್ಷಣೆಗೆ ಬಂದಿದ್ದರು. ಜಲಪಾತ ನೋಡಿಕೊಂಡು ಹಿಂತಿರುಗುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಖಾಸಗಿ ಬಸ್ಸಿಗೆ ಕಾರು ಡಿಕ್ಕಿ ಹೊಡೆದಿದೆ. ಸಾಗರ ತಾಲೂಕು ತಾಳಗುಪ್ಪದ ಆಲಳ್ಳಿ ಬಳಿ ಘಟನೆ ಸಂಭವಿಸಿದೆ.

ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗಕ್ಕೂ ಹಾನಿ ಉಂಟಾಗಿದೆ. ಗಾಯಾಳುಗಳನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications