ಶಿವಮೊಗ್ಗ: ಭೀಕರ ಕಾರು ಅಪಘಾತ ಒಂದೇ ಕುಟುಂಬದ ಐವರ ಸಾವು
ಶಿವಮೊಗ್ಗ, ಏಪ್ರಿಲ್ 30: ಜಿಲ್ಲೆಯ ಆಯನೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಐದು ಜನ ಸಾವನ್ನಪ್ಪಿದ್ದಾರೆ.
ಆಯನೂರು ಹೊರವಲಯದ ಚಿಕ್ಕದಾನವಂದಿ ಬಳಿ, ಕ್ಯಾಂಟರ್ ಹಾಗೂ ಸ್ವಿಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಮೃತರೆಲ್ಲಾ ಶಿವಮೊಗ್ಗ ಮೂಲದ ಮೆಸ್ಕಾಂ ನಿವೃತ್ತ ಎಇಇ ಚಂದ್ರಪ್ಪ ಎಂಬುವವರ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗಿದೆ.

ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪ್ಪ ನಿವೃತ್ತರಾದ ಹಿನ್ನೆಲೆಯಲ್ಲಿ ಕುಂಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬೀರೂರಿಗೆ ತೆರಳುವಾಗ ಸಂಭವಿಸಿರುವ ದುರ್ಘಟನೆ ನಡೆದಿದೆ.
ಮೃತರನ್ನು ಕಾರು ಡ್ರೈವರ್ ಮಂಜು, ಚಂದ್ರಪ್ಪ ಪತ್ನಿ ಮಂಗಳಮ್ಮ, ಪುತ್ರ ಮಂಜು, ಮಗಳು ಉಷಾ, ಅಳಿಯ ನೀಲಕಂಠಪ್ಪ, ಮೊಮ್ಮಗ ನಂದೀಶ ಎಂದು ಗುರುತಿಸಲಾಗಿದೆ.
ಮೊಮ್ಮಗಳು ಲವಿ ಗಂಭೀರವಾಗಿ ಗಾಯಗೊಂಡಿದ್ದು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications