ಜೋಗ ಅಭಿವೃದ್ಧಿಗೆ 700 ಕೋಟಿ ಹೂಡಿಕೆ ಮಾಡಲಿದ್ದಾರೆ ಬಿ.ಆರ್.ಶೆಟ್ಟಿ

ಶಿವಮೊಗ್ಗ, ಸೆಪ್ಟೆಂಬರ್, 08 : ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಯೋಜನೆಗಳು ಸಿದ್ಧವಾಗಲಿವೆ. ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್‌.ಶೆಟ್ಟಿ ಅವರು ಜೋಗ ಜಲಪಾತ ಮತ್ತು ಸುತ್ತ-ಮುತ್ತಲಿನ ಪ್ರದೇಶದ ಅಭಿವೃದ್ಧಿಗಾಗಿ 700 ಕೋಟಿ ರೂ. ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ 38ನೇ ಪೆಸಿಫಿಕ್‌ ಏಷ್ಯಾ ಟ್ರಾವೆಲ್ಸ್ ಮಾರ್ಟ್‌-2015 (ಪಾಟಾ)ದ ಎರಡನೇ ದಿನವಾದ ಸೋಮವಾರ ಕರ್ನಾಟಕದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಉದ್ಯಮಿಗಳು ಸುಮಾರು 30 ಒಡಂಬಡಿಕೆಗಳಿಗೆ ಸಹಿ ಮಾಡಿದ್ದಾರೆ. [ಕನ್ನಡಿಗ ಬಿಆರ್ ಶೆಟ್ಟಿ ತೆಕ್ಕೆಗೆ ಟ್ರಾವೆಲ್ ಎಕ್ಸ್]

jog falls

ಶಿವಮೊಗ್ಗದ ಜೋಗ, ಮೈಸೂರಿನ ಚಾಮುಂಡಿ ಬೆಟ್ಟ, ಕಬಿನಿ, ಕೊಡಗು, ಹಲಸೂರು ಕೆರೆಯಲ್ಲಿ ತೇಲುವ ಹೋಟೆಲ್‌ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಪ್ರವಾಸೋದ್ಯಮ ಸಚಿವ ಆರ್‌.ವಿ.ದೇಶಪಾಂಡೆ ಸಮ್ಮುಖದಲ್ಲಿ ಅಧಿಕಾರಿಗಳು ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. [ಫೋರ್ಬ್ ಪಟ್ಟಿ ಸೇರಿದ ಕನ್ನಡಿಗ ಬಿಆರ್ ಶೆಟ್ಟಿ]

ಜೋಗಕ್ಕೆ 700 ಕೋಟಿ ಹೂಡಿಕೆ : ಕರ್ನಾಟಕ ಮೂಲದ ದುಬೈ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಜೋಗದ ಅಭಿವೃದ್ಧಿಗೆ 700 ಕೋಟಿ ಹೂಡಿಕೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಲಘು ವಿಮಾನ ನಿಲ್ದಾಣ, ಹೆಲಿಪ್ಯಾಡ್‌, ಸೆವೆನ್‌ ಸ್ಟಾರ್‌ ಕಾಟೇಜ್‌, ವಿಶ್ವದ ಅತಿದೊಡ್ಡ ಕಾರಂಜಿಯನ್ನು ಜೋಗದಲ್ಲಿ ನಿರ್ಮಿಸಲಾಗುತ್ತದೆ. [ಗಲ್ಫ್ ಶ್ರೀಮಂತರ ಪಟ್ಟಿಯಲ್ಲಿ ಕನ್ನಡಿಗ ಬಿ.ಆರ್ ಶೆಟ್ಟಿ]

ಜೋಗದಲ್ಲಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡುವ ಯೋಜನೆಯೂ ಇದರಲ್ಲಿ ಸೇರಿದೆ. ಜೋಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸೌರವಿದ್ಯುತ್‌ ಉತ್ಪಾದನಾ ಘಟಕ, ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳು ಇದರಲ್ಲಿ ಸೇರಿವೆ.

br shetty

ಕರ್ನಾಟಕ ಸರ್ಕಾರ ಈ ಎಲ್ಲಾ ಯೋಜನೆಗಳಿಗೆ ಅನುಮತಿ ನೀಡಿದ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ಕಾಮಗಾರಿ ಆರಂಭವಾದ ಐದು ವರ್ಷಗಳ ಬಳಿಕ ಜೋಗ ಜಲಪಾತ ಮತ್ತು ಸುತ್ತ-ಮುತ್ತಲಿನ 10 ಕಿ.ಮೀ. ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಬಂಡವಾಳ ಹೂಡಿಕೆಯಿಂದಾಗಿ ಕನಿಷ್ಠ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+