ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೀನಾದಿಂದ ಆಮದಾಗುವ ವಸ್ತುಗಳನ್ನು ಬಹಿಷ್ಕರಿಸಿ: ಶಾಸಕ ಆರಗ ಜ್ಞಾನೇಂದ್ರ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 22: ಭಾರತೀಯರಾದ ನಾವು ಸೈನ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು ಮತ್ತು ಚೀನಾದಿಂದ ಆಮದಾಗುವ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Recommended Video

Galwan Faceoff : ಭಾರತ ಸೇನೆಗೆ ಬಂತು ಸೂಪರ್ ಪವರ್ | Full power For IAF & Army | Oneindia Kannadda

ಸೋಮವಾರ ದೇಶದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಹಾಗೂ ನುಸುಳುಕೋರ ಚೀನಾದ ಕಳ್ಳನೀತಿಯನ್ನು ವಿರೋಧಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ತೀರ್ಥಹಳ್ಳಿ; ಮನೆ ಖಾಲಿ ಮಾಡಲು ಡಾಕ್ಟರ್‌ಗೆ ಒತ್ತಡ; ದೂರುತೀರ್ಥಹಳ್ಳಿ; ಮನೆ ಖಾಲಿ ಮಾಡಲು ಡಾಕ್ಟರ್‌ಗೆ ಒತ್ತಡ; ದೂರು

ಚೀನಾ ದೇಶವು ವಿಶ್ವಕ್ಕೆ ಕೊರೊನಾ ವೈರಸ್ ರೋಗ ಹರಡಿಸಿದ್ದಲ್ಲದೇ, ಲಕ್ಷಗಟ್ಟಲೆ ಜನರ ಜೀವ ಬಲಿ ತೆಗೆದುಕೊಂಡಿದೆ. ಭಾರತ-ಚೀನಾದ ಗಡಿಭಾಗದ ನಮ್ಮ ಭೂ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯನಡೆಸಲು ಪ್ರಾರಂಭಿಸಿದ್ದರಿಂದ, ಚೀನಾದವರು ಸಹಿಸಲಾಗದೇ ಭಾರತೀಯ ಸೈನ್ಯದ ಮೇಲೆ ಎರಗಿ 20 ಸೈನಿಕರನ್ನು ಅಮಾನುಷವಾಗಿ ಬಲಿತೆಗೆದುಕೊಂಡಿದೆ ಮತ್ತು ಎರಡು ದೇಶಗಳ ನಡುವಿನ ಶಾಂತಿ ಒಪ್ಪಂದದ ಉಲ್ಲಂಘಿಸಿದೆ ಎಂದು ಟೀಕಿಸಿದರು.

Boycott Imported Chinese Products: MLA Araga Jnanendra

ಭಾರತದ ತಂಟೆಗೆ ಯಾರಾದ್ರೂ ಬಂದ್ರೆ, ಭಾರತ ಸುಮ್ಮನಿರಲ್ಲ- ಈಶ್ವರಪ್ಪ ಭಾರತದ ತಂಟೆಗೆ ಯಾರಾದ್ರೂ ಬಂದ್ರೆ, ಭಾರತ ಸುಮ್ಮನಿರಲ್ಲ- ಈಶ್ವರಪ್ಪ

ಆದ್ದರಿಂದ ಚೀನಾ ದೇಶಕ್ಕೆ ತಕ್ಕಪಾಠ ಕಲಿಸಿ ಅಲ್ಲಿಂದ ಆಮದಾಗುವ ವಸ್ತುಗಳನ್ನು ಬಹಿಷ್ಕರಿಸಿ ತಕ್ಕ ಪಾಠ ಕಲಿಸಬೇಕೆಂದರು. ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ತಾ.ಪಂ ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಕುಕ್ಕೆ ಪ್ರಶಾಂತ್, ಮಂಜುನಾಥ್, ಚಂದವಳ್ಳಿ ಸೋಮಶೇಖರ್, ಕವಿರಾಜ್, ಬಿಜೆಪಿ ಮುಂಖಡರಾದ ನಾಗರಾಜ್ ಶೆಟ್ಟಿ, ಕೋಣಂದೂರ್ ಮೋಹನ್, ಅಶೋಕ್ ಮೂರ್ತಿ, ರಮ್ಯ ಅನಿಲ್, ಡಾಕಮ್ಮ ಮುಂತಾದವರಿದ್ದರು.

English summary
"As Indians, we should stand in support of the army and boycott all imports from China," said Thirthahalli MLA Araga Jnanendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X