Bhadra Dam: ಭದ್ರಾ ಜಲಾಶಯದ ಹೊಸ ಇತಿಹಾಸ-ಏನದು? ಮಾಹಿತಿ
Bhadra Dam: ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಜಲಾಶಯಗಳಲ್ಲಿ ಆಗಿನಿಂದಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ. ಇನ್ನು ಕೆಲವೆಡೆ ನೀರೇ ಇಲ್ಲದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹಾಗೆಯೇ ಅತ್ಯಂತ ಕಡಿಮೆ ಪ್ರಮಾಣದ ನೀರಿನ ಸಂಗ್ರಹದಲ್ಲಿ ಈ ಬಾರಿ ಮಲೆನಾಡಿನ ಜೀವಸೆಲೆಯಾದ ಭದ್ರಾ ಜಲಾಶಯ ಹೊಸ ದಾಖಲೆ ಬರೆದಿದೆ. ಹಾಗಾದರೆ ಮಾಹಿತಿ ಇಲ್ಲಿದೆ ಗಮನಿಸಿ.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗಾಗ ಮಳೆಯಾಗುತ್ತಿದೆ ಬಿಟ್ಟರೆ, ಬಹುತೇಕ ಜಿಲ್ಲೆಗಳಲ್ಲಿ ರಣಭೀಕರ ಬಿಸಿಲಿನ ವಾತಾವರಣ ಮುಂದುವರೆದಿದೆ. ಪರಿಣಾಮ ನೀರಿನ ಮೂಲಗಳೆಲ್ಲ ಬತ್ತಿಹೋಗುತ್ತಿದ್ದು, ನೀರಿನ ಹಾಹಾಕಾರ ಶುರುವಾಗಿದೆ. ಮತ್ತೊಂದೆಡೆ ಜನರು ಬಿಸಿಲಿನ ಬೇಗೆ ಬೆಂಡಾಗಿ ಹೋಗಿದ್ದರೆ, ಬೇಸತ್ತ ಅನ್ನದಾತ ಮೋಡದ ಕಡೆ ಮುಖ ಮಾಡಿ ಕುಳಿತ್ತಿದ್ದಾನೆ.

ರಾಜ್ಯದಲ್ಲಿ ಕಳೆದ ವರ್ಷ ಮುಗಾರು ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ತೀವ್ರ ಬರ ಕಾಡುತ್ತಿದೆ. ಅದರಲ್ಲೂ ದಾವಣಗೆರೆ ಜಿಲ್ಲೆ ರೈತರ ಜೀವನಾಡಿಯಾದ ಭದ್ರಾ ಜಲಾಶಯದ ಸುತ್ತಮುತ್ತಲಿನ ಮಲೆನಾಡಿನಲ್ಲಿಯೇ ಕಳೆದ ಬಾರೀ ನಿರೀಕ್ಷಿತ ಮಳೆಯಾಗಿಲ್ಲ. ಈ ಹಿನ್ನೆಲೆ ಮುಂಗಾರಿನಲ್ಲಿ ಜಲಾಶಯಕ್ಕೆ ನೀರು ಬಂದಿದ್ದೇ ಕಡಿಮೆ.
ಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಹರಿಸುವುದಕ್ಕೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ, ಮುಂಗಾರು ಬೆಳೆಗೆಯೇ ಹೋರಾಟ ಮಾಡಿ ನೀರು ತಂದಿದ್ದರು. ಆದರೆ ಇದೀಗ ಈ ಬಾರಿ ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದಲ್ಲಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ನೀರು ಸಂಗ್ರಹ ಆಗಿದೆ ಎಂದು ತಿಳಿದುಬಂದಿದೆ
ಕಳೆದ ವರ್ಷ 2023 ಇದೇ ದಿನ 145.7 ಅಡಿ ನೀರು ಸಂಗ್ರಹವಾಗಿತ್ತು. ತೀವ್ರ ಬರಗಾಲವಿದ್ದ 2004ಕ್ಕಿಂತ ಮುನ್ನ 2003ರಲ್ಲಿ 118 ಅಡಿ ನೀರಿನ ಸಂಗ್ರಹವಿದ್ದು, ಈವರೆಗಿನ ಕನಿಷ್ಠ ನೀರು ಸಂಹ್ರಹ ಆಗಿತ್ತು. ಇದೀಗ 2024 ಮೇ 5ರಂದು 116.5 ಅಡಿ ನೀರು ಇದ್ದು, ಇದು ಅತ್ಯಂತ ಕಡಿಮೆ ನೀರು ಸಂಗ್ರಹವಾಗಿದೆ. ಅಲ್ಲದೆ ಈ ಬಾರಿ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ನೀರಿನ ಸಂಗ್ರಹ ಇದ್ದು, ಇದು ಹೊಸ ದಾಖಲೆಯಾಗಿದ ಎಂದರೆ ತಪ್ಪಾಗಲಾರದು.
ಈ ಜಲಾಶಯದಲ್ಲಿ ಸದ್ಯ ಇದೀಗ 8.5 ಟಿಎಂಸಿ ಅಡಿ ಡೆಡ್‌ಸ್ಟೋರೇಜ್ ಸೇರಿ, ಒಟ್ಟು 13.8 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. ಜಲಾಶಯದ ಬಲದಂಡೆ ನಾಲೆಯ ಗೇಟ್ ಸಂಪೂರ್ಣ ತೆರೆಯಲಾಗಿದೆ. ಕಳೆದ ಮೂರು ದಿನಗಳಿಂದ 2,000 ಕ್ಯೂಸೆಕ್‌ನಷ್ಟು ಮಾತ್ರ ಹರಿಯುತ್ತಿದೆ. ಇದೇ ಇನ್ನು ಎರಡ್ಮೂರು ದಿನ ನೀರು ಹರಿಸಿ ನಿಲ್ಲಿಸಲಾಗುವುದು ಎಂದು ಭದ್ರಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದದಾರೆ ಅಂತಾ ಮಾಹಿತಿ ಲಭ್ಯವಾಗಿದೆ.
ಇದೀಗ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಕೆಲವೆಡೆ ಮಳೆ ಆಗಾಗ ಮಾತ್ರ ಎಂಟ್ರಿ ಕೊಟ್ಟು ಭೂಮಿಯನ್ನು ತಣ್ಣಗೆ ಮಾಡುತ್ತದೆ. ಆದರೆ ಮಾರನೇ ದಿನ ಅದೇ ಆಡಿದ್ದೇ ಆಟ ಎಂಬಂತೆ ಭೀಕರ ಬಿಸಿಲಿನ ವಾತಾವರಣ ಮುಂದುವರೆಯುತ್ತಿದೆ. ಹೀಗೆ ಆದರೆ, ಜನರು, ರೈತರ ಗತಿಯೇನು ಎನ್ನುವಂತಹ ಪ್ರಶ್ನೆಗಳು ಉದ್ಭವವಾಗಿವೆ.












Click it and Unblock the Notifications