ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.7 ರಿಂದ ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿ ರೈಲು ಮರು ಸಂಚಾರ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಮೊಬೈಲ್ ಸಮ್ಮರಿ: ಕೋವಿಡ್-19 ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಶಿವಮೊಗ್ಗ-ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ರೈಲು ಸಂಚಾರ ಮತ್ತೆ ಅರಂಭಗೊಳ್ಳಲಿದ್ದು, ಶುಕ್ರವಾರ ಅಧಿಕೃತ ಘೋಷಣೆಯಾಗಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ರಾತ್ರಿ ರೈಲು, ಇಂಟರ್ಸಿಟಿ ರೈಲನ್ನು ಪ್ರಾಯೋಗಿಕವಾಗಿ 10 ದಿನಗಳ ಕಾಲ ಮಾತ್ರ ಸಂಚಾರ ಮಾಡಲಿದ್ದು, ಪ್ರತಿಕ್ರಿಯೆ ನೋಡಿಕೊಂಡು ಮುಂದುವರೆಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಪ್ರತಿ ದಿನ ರಾತ್ರಿ ಸಂಚರಿಸುತ್ತಿದ್ದ ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ಶಿವಮೊಗ್ಗ ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಡಿ.7 ಹಾಗೂ 8 ರಿಂದ ಮರು ಆರಂಭಗೊಳ್ಳಲಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ.

 ಮೈಸೂರು-ಮಲಬಾರ್ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ ಮೈಸೂರು-ಮಲಬಾರ್ ರೈಲು ಮಾರ್ಗಕ್ಕೆ ಕೇಂದ್ರ ಹಸಿರು ನಿಶಾನೆ

ಶಿವಮೊಗ್ಗ-ಬೆಂಗಳೂರು ರಾತ್ರಿ ರೈಲು, ಇಂಟರ್ಸಿಟಿ ಮರುಸಂಚಾರ, ಆದರೆ...

ಶಿವಮೊಗ್ಗ, ಡಿಸೆಂಬರ್ 4: ಕೋವಿಡ್-19 ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಶಿವಮೊಗ್ಗ-ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ರೈಲು ಸಂಚಾರ ಮತ್ತೆ ಅರಂಭಗೊಳ್ಳಲಿದ್ದು, ಶುಕ್ರವಾರ ಅಧಿಕೃತ ಘೋಷಣೆಯಾಗಿದೆ.

Shivamogga-Bengaluru Intercity Train Start From December 7

ಶಿವಮೊಗ್ಗ-ಬೆಂಗಳೂರು ನಡುವಿನ ರಾತ್ರಿ ರೈಲು, ಇಂಟರ್ಸಿಟಿ ರೈಲನ್ನು ಪ್ರಾಯೋಗಿಕವಾಗಿ 10 ದಿನಗಳ ಕಾಲ ಮಾತ್ರ ಸಂಚಾರ ಮಾಡಲಿದ್ದು, ಪ್ರತಿಕ್ರಿಯೆ ನೋಡಿಕೊಂಡು ಮುಂದುವರೆಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಪ್ರತಿ ದಿನ ರಾತ್ರಿ ಸಂಚರಿಸುತ್ತಿದ್ದ ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ಶಿವಮೊಗ್ಗ ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಡಿ.7 ಹಾಗೂ 8 ರಿಂದ ಮರು ಆರಂಭಗೊಳ್ಳಲಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಗುರುವಾರದ ಸಭೆಯಲ್ಲಿ ನಿರ್ಧರಿಸಿದ್ದಾರೆ.

ರಿಸರ್ವೇಷನ್ ಮಾಡಿಕೊಂಡಿರುವ ಪ್ರಯಾಣಿಕರಿಗೆ ಮಾತ್ರ ಈ ರೈಲುಗಳಲ್ಲಿ ಸಂಚಾರಕ್ಕೆ ಅವಕಾಶವಿದ್ದು, ಓಪನ್ ಟಿಕೆಟ್ ಪಡೆದು ಪ್ರಯಾಣಿಸಲು ಜನರಲ್ ಬೋಗಿಗಳು ಇರುವುದಿಲ್ಲ ಎಂದೂ ತಿಳಿಸಿದ್ದಾರೆ.

ಯಾವ ರೈಲು ಸಂಚಾರ ಎಂದಿನಿಂದ ಆರಂಭವಾಗುತ್ತದೆ ಹಾಗೂ ಯಾವ ನಿಲ್ದಾಣಗಳಲ್ಲಿ ನಿಲುಗಡೆಯಿಲ್ಲ ಎಂಬುದರ ಮಾಹಿತಿ ಇಲ್ಲಿದೆ.

06227 ಸಂಖ್ಯೆಯ ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು- ಡಿ.9 ರಿಂದ 18ರ ವರೆಗೆ ಸಂಚರಿಸಲಿದೆ.

ನಿಲುಗಡೆ ಹಿಂಪಡೆದ ನಿಲ್ದಾಣಗಳು: ಶ್ರೀರಂಗಪಟ್ಟಣ, ಬ್ಯಾಡರಹಳ್ಳಿ, ಹನಕೆರೆ, ಶೆಟ್ಟಿಹಳ್ಳಿ, ಹೆಜ್ಜಾಲ

06228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲು- ಡಿ.10 ರಿಂದ 19ರ ವೆರಗೆ ಸಂಚರಿಸಲಿದೆ.

ನಿಲುಗಡೆ ಹಿಂಪಡೆದ ನಿಲ್ದಾಣಗಳು: ಮಲ್ಲೇಶ್ವರಂ, ಹನಕೆರೆ, ಬೈದರಹಳ್ಳಿ ಮತ್ತು ಶ್ರೀರಂಗಪಟ್ಟಣ

06529 ಸಂಖ್ಯೆಯ ಬೆಂಗಳೂರು-ತಾಳಗುಪ್ಪ ಇಂಟರ್ಸಿಟಿ ಸೂಪರ್ ಫಾಸ್ಟ್‌ ರೈಲು: ಡಿ.7 ರಿಂದ 16ರ ವರೆಗೆ ಸಂಚರಿಸಲಿದೆ.

06529 ಸಂಖ್ಯೆ ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ಸೂಪರ್ ಫಾಸ್ಟ್‌ ರೈಲು: ಡಿ.8 ರಿಂದ 17ರ ವರೆಗೆ ಸಂಚರಿಸಲಿದೆ.

English summary
Indian Railway department officials have decided at a meeting that the Bengaluru-Shivamogga intercity express train will resume from December 7 and 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X