ಸಾಹಿತಿ ನಾ ಡಿಸೋಜಾಗೆ ಕಾಗೋಡು ಅವಮಾನ, ಕ್ಷಮೆ ಕೇಳಿದ ಬೇಳೂರು

ಹೊಸನಗರ, ಜೂನ್ 1: ಪರಿಸರದ ಕುರಿತು ಚರ್ಚೆ ಮಾಡುವುದಕ್ಕೆ ಸಾಹಿತಿ ನಾ ಡಿಸೋಜಾ ಅವರು ಈಚೆಗೆ ಸಚಿವ ಕಾಗೋಡು ತಿಮ್ಮಪ್ಪ ಮನೆಗೆ ಹೋಗಿದ್ದರಂತೆ. ಆದರೆ ಅವರ ಜತೆಗೆ ಸಚಿವರು ಮಾತು ಕೂಡ ಆಡದೆ ಅವಮಾನ ಮಾಡಿದ್ದಾರೆ. ಈ ವಿಚಾರವನ್ನು ಬಹಿರಂಗ ಪಡಿಸಿದ್ದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ.

ಅಷ್ಟೇ ಅಲ್ಲ, 'ನನ್ನ ಮಾವ (ಕಾಗೋಡು ತಿಮ್ಮಪ್ಪ) ಸಾಹಿತಿ ಡಿಸೋಜಾ ಅವರಿಗೆ ತೋರಿದ ಅಗೌರವಕ್ಕೆ ನಾನು ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ' ಎಂದು ಕೂಡ ಹೇಳಿದ್ದಾರೆ. ಹೊಸನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಕಾಡು ಕಡಿಯಿರಿ ಎಂದು ಹೇಳುವ ಮೂಲಕ ಕಾಗೋಡು ತಿಮ್ಮಪ್ಪ ಪ್ರಕ್ಜೃತಿ ವಿನಾಶಕ್ಕೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಮೇ 2ರಿಂದ ಆಗುಂಬೆ ಮೂಲಕ ಶಿವಮೊಗ್ಗ-ಉಡುಪಿ ಬಸ್ ಸಂಚಾರ]

Belur Goplakrishna asks sorry to writer Na Disoja for insult by minister Kagodu Thimmapppa

ಅರಣ್ಯ ಮತ್ತು ವ್ಯವಸಾಯ ಒಂದಕ್ಕೆ ಒಂದು ಪೂರಕವಾದದ್ದು. ಅರಣ್ಯ ಇಲ್ಲದೆ ರೈತಾಪಿ ವರ್ಗವೇ ಇಲ್ಲ ಎಂಬ ಸಂಗತಿ ಅರಿಯದ ಸಚಿವರು ಸಮಾಜಕ್ಕೆ ಇಂಥ ಕೆಟ್ಟ ಸಂದೇಶವೊಂದನ್ನು ಕೊಟ್ಟಿದ್ದಾರೆ. ಇನ್ನು ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಭೋಜನ ಮಾಡುತ್ತಿರುವುದು ಕಾಂಗ್ರೆಸ್ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+