ಶಿವಮೊಗ್ಗ ಡಿಸಿ ಕಚೇರಿ ಮೇಲೆ ಅಜಾನ್: ಗೋಮೂತ್ರ ಸಿಂಪಡಿಸಿ 'ಶುದ್ಧೀಕರಣ'ಕ್ಕೆ ಯತ್ನಿಸಿದ ಬಜರಂಗದಳದ ಸದಸ್ಯರು

ಈಶ್ವರಪ್ಪ ಹೇಳಿಕೆಯನ್ನು ವಿರೋಧಿಸಿ ನೂರಾರು ಮುಸ್ಲಿಂ ಸಮುದಾಯದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಮುಸ್ಲಿಂ ಯುವಕರು ಆಜಾನ್ ಪಠಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿವಮೊಗ್ಗ, ಮಾರ್ಚ್. 21: ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಮೇಲೆ 'ಗೋಮೂತ್ರ' ಸಿಂಪಡಿಸುವ ಮೂಲಕ ಬಲಪಂಥೀಯ ಸಂಘಟನೆ ಬಜರಂಗ ದಳದ ಸದಸ್ಯರು ಸೋಮವಾರ ಶುದ್ಧೀಕರಣಕ್ಕೆ ಯತ್ನಿಸಿದ್ದಾರೆ. ಆದರೆ, ಪೊಲೀಸರು ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.

ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ಕುರಿತು ನೀಡಿದ ಹೇಳಿಕೆಯನ್ನು ವಿರೋಧಿಸಿ ಶುಕ್ರವಾರ ಮುಸ್ಲಿಂ ಯುವಕರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಮೇಲೆ ಹತ್ತಿ ಅಜಾನ್ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಜರಂಗ ದಳಸಂಘಟನೆ ಕಾರ್ಯಕರ್ತರು ಈ ಕ್ರಮ ಕೈಗೊಂಡಿದ್ದಾರೆ. ಈಶ್ವರಪ್ಪ ಹೇಳಿಕೆ ವಿರೋಧಿಸಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆಗಳು ನಡೆದಿವೆ.

Bajrang Dal Workers Sprinkling Gomutra On DC Office, After A Muslim Youth Gave Azaan Call

ಈಶ್ವರಪ್ಪ ಹೇಳಿಕೆಯನ್ನು ವಿರೋಧಿಸಿ ನೂರಾರು ಮುಸ್ಲಿಂ ಸಮುದಾಯದವರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಮುಸ್ಲಿಂ ಯುವಕರು ಅಜಾನ್ ಪಠಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣ ಅಲ್ಲಿದ್ದ ಪೊಲೀಸರು ಆತನನ್ನು ಕೆಳಗಿಳಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಾಜದ ಮುಖಂಡರು ಬೆಂಗಳೂರಿನ ವಿಧಾನಸೌಧದಲ್ಲೂ ಆಜಾನ್ ಕರೆ ನೀಡುತ್ತೇವೆ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು.

ಇತ್ತ, ಹಿಂದೂ ಸಂಘಟನೆಗಳು ಪ್ರಚೋದನಕಾರಿ ಭಾಷಣವನ್ನು ತೀವ್ರವಾಗಿ ಖಂಡಿಸಿ, ಡಿಸಿ ಕಚೇರಿ ಎದುರು ಜಮಾಯಿಸಿ ಸ್ಥಳವನ್ನು ಶುದ್ಧೀಕರಿಸುವ ಪ್ರಯತ್ನದಲ್ಲಿ ಗೋಮೂತ್ರ ಸಿಂಪಡಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಗೋಮೂತ್ರದ ಬಾಟಲಿಯನ್ನು ಕಸಿದುಕೊಂಡು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಇದರಿಂದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ.

''ಬಜರಂಗ ದಳದ ಕಾರ್ಯಕರ್ತರು ಮುಸ್ಲಿಂ ಯುವಕರು ನಿಂತಿದ್ದ ಸ್ಥಳವನ್ನು ಶುದ್ಧೀಕರಿಸಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬಾಟಲಿ ಕಸಿದುಕೊಂಡು ಅವರ ಯತ್ನ ವಿಫಲಗೊಳಿಸಿದರು. ಇಂದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ . ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗಜೇಂದ್ರಪ್ಪ ತಿಳಿಸಿದ್ದಾರೆ.

Bajrang Dal Workers Sprinkling Gomutra On DC Office, After A Muslim Youth Gave Azaan Call

ಇದೇ ವೇಳೆ ಮಾಜಿ ಸಚಿವ ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಡಿಸಿ ಕಚೇರಿಯಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ. 'ಆಜಾನ್ ಕರೆ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದ ಪರೀಕ್ಷೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಡ್ಡಿಯಾಗುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಆಗುತ್ತದೆ' ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೆಎಸ್ ಈಶ್ವರಪ್ಪ ಅವರು ಮಂಗಳೂರಿನಲ್ಲಿ ಅಜಾನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಮಾರ್ಚ್ 17ರಂದು ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಜಾನ್ ಪಠಿಸಿದ್ದರು. ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಜಾನ್ ಕರೆ ನೀಡಿದ ವ್ಯಕ್ತಿ ಎಸ್‌ಡಿಪಿಐ ಸದಸ್ಯನಾಗಿದ್ದು, ಇದು ದೇಶದ್ರೋಹದ ಕೃತ್ಯ ಎಂದು ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಪೊಲೀಸರು ಆಎಓಪಿ ವಿರುದ್ಧ ಸಿಆರ್‌ಪಿಸಿ 107 ಸೆಕ್ಷನ್‌ನ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಅವರನ್ನು ಹೋಗಲು ಬಿಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿಯೂ ಮಾಡುವುದಾಗಿ ಆ ವ್ಯಕ್ತಿ ಅಜಾನ್ ಪಠಿಸುವುದಾಗಿ ಹೇಳಿಕೊಂಡಿದ್ದಾನೆ. ಅವರ ಹೇಳಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಸಂದರ್ಭದಲ್ಲೂ ನಾನು ಅಲ್ಲಾನನ್ನು ಅವಮಾನಿಸಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಕೆಎಸ್ ಈಶ್ವರಪ್ಪ ಹೇಳಿಕೆಗೆ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌ಡಿ ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರಡ. 'ಇವೆಲ್ಲವುಗಳು ಅತೀ ಸೂಕ್ಷ್ಮ ವಿಷಯಗಳು. ಇಂತಹ ಘಟನೆಗಳು ನಡೆಯಲು ಬಿಜೆಪಿಯೇ ಕಾರಣ. ಈಶ್ವರಪ್ಪ ಸೇರಿದಂತೆ ಬಿಜೆಪಿ ಮುಖಂಡರು ಇತಿಮಿತಿಯಲ್ಲಿರಬೇಕು. ಭಾರತ ದೇಶ ಶಾಂತಿಯುತವಾಗಿರಬೇಕು. ದೇಶದೊಳಗಿನ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+