ಶಿವಮೊಗ್ಗದಿಂದ ಝೀರೋ ಟ್ರಾಫಿಕ್ ನಲ್ಲಿ 2 ತಿಂಗಳ ಮಗು ರವಾನೆ
ಶಿವಮೊಗ್ಗ, ಎಪ್ರಿಲ್ 01: ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಎರಡು ತಿಂಗಳ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್ ಮೂಲಕ ಶಿವಮೊಗ್ಗದಿಂದ ಬೆಂಗಳೂರಿಗೆ ರವಾನಿಸಲಾಗಿದೆ.
ಶಿವಮೊಗ್ಗದ ಇಸ್ಮಾಯಿಲ್ ದಂಪತಿಗೆ ಎರಡೂವರೆ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ಹುಟ್ಟುವಾಗಲೇ ಮಗುವಿಗೆ ಹೃದಯದಲ್ಲಿ ರಂಧ್ರ ಇದ್ದಿದ್ದರಿಂದಾಗಿ ಹುಟ್ಟಿದ ಕೆಲವೇ ದಿನದಲ್ಲಿ ಬೆಂಗಳೂರಿನ ಎನ್.ಎಚ್ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಬಳಿಕ ಮಗು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಸಹ ಮಾಡಲಾಗಿತ್ತು. ಡಿಸ್ಚಾರ್ಜ್ ಆಗಿ ಹದಿನೈದು ದಿನ ಕಳೆದ ಬಳಿಕ ನಿನ್ನೆ ಸಂಜೆ ಮಗುವಿನ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವನ್ನು ನಿನ್ನೆ ರಾತ್ರಿಯೇ ಶಿವಮೊಗ್ಗದ ಏಜೆಂಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣದಿಂದಾಗಿ ಝೀರೋ ಟ್ರಾಫಿಕ್ ನಲ್ಲಿ ಮಗುವನ್ನು ನಿನ್ನೆ ಸಂಜೆ ಏಳು ಗಂಟೆಗೆ ಬೆಂಗಳೂರಿನ ಎನ್.ಎಚ್ ಆಸ್ಪತ್ರೆಗೆ ಕಳುಹಿಸಲಾಯಿತು.