ಹೆಸರು ಹೇಳದೆ ಮಧು ಬಂಗಾರಪ್ಪಗೆ ಟಾಂಗ್ ಕೊಟ್ಟ ಬಿ.ವೈ.ರಾಘವೇಂದ್ರ
ಶಿವಮೊಗ್ಗ, ಮಾರ್ಚ್ 11: ಶಿವಮೊಗ್ಗದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸುತ್ತಿರುವ ಮೈತ್ರಿ ಕೂಟದ ಅಭ್ಯರ್ಥಿ ಇಂಪೋರ್ಟೆಡ್ ಅಭ್ಯರ್ಥಿ. ಚುನಾವಣೆ ಬಂದಾಗ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ
ಎಂದು ತಮ್ಮ ಪ್ರತಿಸ್ಪರ್ಧಿ ಮಧು ಬಂಗಾರಪ್ಪ ವಿರುದ್ಧ ಸಂಸದ ಬಿ.ವೈ.ರಾಘವೇಂದ್ರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆ ಘೋಷಣೆ ಬಳಿಕ ಭಾನುವಾರ ಸಂಜೆ (ಮಾ.10) ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರದಲ್ಲೇ ಇರುವ ಅಭ್ಯರ್ಥಿಗೆ ಜನ ಆಶೀರ್ವಾದ ಮಾಡುವುದರಲ್ಲಿ ಅನುಮಾನವೇ ಇಲ್ಲ. ಅದನ್ನು ಬಿಟ್ಟು ಚುನಾವಣೆ ಸಮಯದಲ್ಲಿ ಕ್ಷೇತ್ರಕ್ಕೆ ಬರುವವರಿಗೆ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸೂರ್ಯ-ಚಂದ್ರ ಇರುವುದು ಎಷ್ಟು ನಿಜವೋ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದೂ ಅಷ್ಟೇ ಸತ್ಯ. ವಿರೋಧ ಪಕ್ಷಗಳು ಈಗ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ವಿಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಮಾಡುವುದರೊಳಗಾಗಿ ಚುನಾವಣೆಯೇ ಮುಗಿದಿರುತ್ತದೆ. ಈ ಬಾರಿ ಬಿಜೆಪಿ ಪಕ್ಷ ದೇಶದಲ್ಲಿ 380 ರಿಂದ 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಾಘವೇಂದ್ರ ಭವಿಷ್ಯ ನುಡಿದರು.












Click it and Unblock the Notifications