ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಚಾಲಕನ ಪತ್ನಿ ಲತಾ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್

|
Google Oneindia Kannada News

ಚಹಾ ಮಾರುವವರೇ ದೇಶದ ಪ್ರಧಾನಿಯಾಗಿದ್ದಾರೆ ಎಂದರೆ ಆಟೋ ಓಡಿಸುವ ವ್ಯಕ್ತಿಯ ಪತ್ನಿ ಪಾಲಿಕೆಯ ಮೇಯರ್ ಏಕಾಗಬಾರದು? ಈ ಪ್ರಶ್ನೆಗೆ ಉತ್ತರ ಎಂಬಂತೆ ಬುಧವಾರದಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಆಗಿ ಲತಾಗಣೇಶ್ ಆಯ್ಕೆ ಆಗಿದ್ದಾರೆ. ಆಕೆ ಅಟೋ ಚಾಲಕನ ಪತ್ನಿ. ಸದ್ಯಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ.

ಶಿವಮೊಗ್ಗ ಮಹಾನಗರ ಪಾಲಿಕೆ ಮಹಾಪೌರರಾಗಿ ಬಿಜೆಪಿಯ ಲತಾ ಗಣೇಶ್ 26 ಮತಗಳನ್ನು ಪಡೆದು ವಿಜಯಶಾಲಿ ಆಗಿದ್ದಾರೆ. ಲತಾ ಗಣೇಶ್ ಅವರಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ನಿಂದ ಮಂಜುಳಾ ಶಿವಣ್ಣ ಮೇಯರ್ ಹುದ್ದೆಗೆ ಸ್ಪರ್ಧೆ ಮಾಡಿದ್ದರು. ಪಾಲಿಕೆಯ 35 ಸದಸ್ಯರು, ಇಬ್ಬರು ವಿಧಾನಪರಿಷತ್ ಸದಸ್ಯರು, ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಶಾಸಕರು ಸೇರಿ 39 ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಮೈಸೂರಿನ ನೂತನ ಮೇಯರ್ ಪುಷ್ಪಾ ಜಗನ್ನಾಥ್ ಸಂದರ್ಶನಮೈಸೂರಿನ ನೂತನ ಮೇಯರ್ ಪುಷ್ಪಾ ಜಗನ್ನಾಥ್ ಸಂದರ್ಶನ

ಉಪಮೇಯರ್ ಆಗಿ ಬಿಜೆಪಿಯ ಚನ್ನಬಸಪ್ಪ ಆಯ್ಕೆಯಾಗಿದ್ದಾರೆ. ಬಹುಮತದೊಂದಿಗೆ ಆಯ್ಕೆಯಾದ ಆಟೋ ಡ್ರೈವರ್ ಪತ್ನಿ ಲತಾ ಗಣೇಶ್ ಇನ್ನು ಮುಂದೆ ಮಹಾನಗರದ ಮೊದಲ ಪ್ರಜೆ. ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಪುಟ್ಟದೊಂದು ಬಾಡಿಗೆ ಮನೆಯಲ್ಲೇ ವಾಸವಾಗಿರುವ ಇವರಿಗೆ ಧರ್ಮಸ್ಥಳ ಸಂಘವೇ ಆಡಳಿತದ ಕಲಿಕಾ ಕೇಂದ್ರ.

ಮೂವರು ಹೆಣ್ಣುಮಕ್ಕಳು, ಒಬ್ಬ ಮಗ

ಮೂವರು ಹೆಣ್ಣುಮಕ್ಕಳು, ಒಬ್ಬ ಮಗ

ಗಾಡಿಕೊಪ್ಪ ವಾರ್ಡ್ ನ ಬಿಜೆಪಿ ಕಾರ್ಪೊರೇಟರ್ ಆಗಿ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಲತಾ ಅವರಿಗೆ ಮೇಯರ್ ಪಟ್ಟವೂ ಒಲಿದು ಬಂದಿದೆ. ಲತಾ ಗಣೇಶ್ ಓದಿರುವುದು 9ನೇ ತರಗತಿ ಮಾತ್ರ. ವುಡ್ ಲ್ಯಾಂಡ್ ಹೋಟೆಲ್ ಬಳಿಯ ಆಟೋ ಸ್ಟ್ಯಾಂಡ್ ನಲ್ಲಿ ಪತಿ ಗಣೇಶ್ ಆಟೋ ಓಡಿಸಿಕೊಂಡು ಜೀವನ ಕಳೆಯುತ್ತಾರೆ. ಮಗ ಉಮಾಶಂಕರ್ ಸಹ ಹುಬ್ಬಳ್ಳಿಯಲ್ಲಿ ಆಟೋ ಡ್ರೈವರ್. ಇನ್ನು ಉಳಿದ ಮೂವರು ಹೆಣ್ಣುಮಕ್ಕಳಾದ ಶ್ರುತಿ, ಸಂಗೀತಾ ಹಾಗೂ ಕಾವ್ಯಾ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಗಾಡಿಕೊಪ್ಪದ ಬಾಡಿಗೆ ಮನೆಯಲ್ಲಿ ವಾಸ

ಗಾಡಿಕೊಪ್ಪದ ಬಾಡಿಗೆ ಮನೆಯಲ್ಲಿ ವಾಸ

ಗಾಡಿಕೊಪ್ಪದ ಮೊದಲ ಕ್ರಾಸ್ ನಲ್ಲಿರುವ ಸಣ್ಣದೊಂದು ಬಾಡಿಗೆ ಮನೆಯಲ್ಲಿ ಬಹು ವರ್ಷದಿಂದ ಲತಾಗಣೇಶ್ ಅವರ ಕುಟುಂಬ ವಾಸಿಸುತ್ತಿದೆ. ಲತಾ ಗಣೇಶ್ ಅವರ ಅಣ್ಣ ಆರ್.ಲಕ್ಷ್ಮಣ್ ಬಿಜೆಪಿ ಕಾರ್ಯಕರ್ತರು. ಹೊಸಮನೆ ಬಡಾವಣೆಯಿಂದ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದರು. ಅಣ್ಣನ ನೆರಳಿನಲ್ಲೇ ಲತಾ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡರು. ವಾರ್ಡ್ ನ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು.

ಬೂತ್ ಪ್ರಮುಖ್ ಆಗಿ ಜವಾಬ್ದಾರಿ

ಬೂತ್ ಪ್ರಮುಖ್ ಆಗಿ ಜವಾಬ್ದಾರಿ

ಧರ್ಮಸ್ಥಳ ಸಂಘದಲ್ಲಿ ಸೇವೆ ಸಲ್ಲಿಸಿದ್ದರು ಲತಾ ಗಣೇಶ್. ಇಲ್ಲಿಯೇ ಆಡಳಿತ ಅನುಭವ, ಬ್ಯಾಂಕಿಂಗ್ ವ್ಯವಹಾರದ ಕುರಿತು ಕಲಿತುಕೊಂಡಿದ್ದಾರೆ. ಇನ್ನು ಬಿಜೆಪಿಯಲ್ಲಿ ವಾರ್ಡ್ ನ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೂತ್ ಪ್ರಮುಖ್ ಆಗಿ ಜವಾಬ್ದಾರಿ ನಿಭಾಯಿಸಿದ್ದರು. ಕಳೆದ 21 ವರ್ಷ ಬಿಜೆಪಿಯಲ್ಲಿ ಲತಾ ಗಣೇಶ್ ಸಾಮಾನ್ಯ ಕಾರ್ಯಕರ್ತೆಯಾಗಿ ದುಡಿದಿದ್ದಾರೆ.

900ಕ್ಕೂ ಅಧಿಕ ಮತಗಳ ಅಂತರದಲ್ಲಿ ವಿಜಯ

900ಕ್ಕೂ ಅಧಿಕ ಮತಗಳ ಅಂತರದಲ್ಲಿ ವಿಜಯ

ಶಿವಮೊಗ್ಗ ನಗರದ ಗಾಡಿಕೊಪ್ಪ ವಾರ್ಡ್ ಸಂಖ್ಯೆ 6ರಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್ಸಿ ಮೀಸಲು ಅಭ್ಯರ್ಥಿ ಲತಾ ಗಣೇಶ್ ಚುನಾವಣೆಯಲ್ಲಿ 1873 ಮತಗಳನ್ನು ಪಡೆದು, 900ಕ್ಕೂ ಅಧಿಕ ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದರು. ಆಗ ಲತಾ ಗಣೇಶ್ ಸಂತಸಕ್ಕೆ ಪಾರವೇ ಇರಲಿಲ್ಲ. ನನ್ನ ವಾರ್ಡ್ ನ ಜವಾಬ್ದಾರಿ ಜೊತೆಗೆ ಉಳಿದ 32 ವಾರ್ಡ್ ಗಳ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ. ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಏನೇನು ಕೆಲಸ ಮಾಡಬೇಕೋ ಅದನ್ನು ನಿರ್ವಹಿಸುತ್ತೇನೆ ಎನ್ನುತ್ತಾರೆ ನೂತನ ಮೇಯರ್ ಲತಾ.

ಇಡೀ ಕುಟುಂಬಕ್ಕೆ ಸಂತೋಷ ಆಗಿದೆ

ಇಡೀ ಕುಟುಂಬಕ್ಕೆ ಸಂತೋಷ ಆಗಿದೆ

ನಾನು ಕಾರ್ಯಕರ್ತರ ಜೊತೆಯಲ್ಲಿ ಓಡಾಡಿಕೊಂಡಿದ್ದೆ. ಆದರೆ ನನ್ನ ಪತ್ನಿಗೆ ಈಗ ಮೇಯರ್ ಸ್ಥಾನ ಒಲಿದು ಬಂದಿದ್ದು ಸಂತೋಷವಾಗಿದೆ. ಆಕೆ ಬೆನ್ನಿಗೆ ನಿಂತು ಜವಾಬ್ದಾರಿ ನಿಭಾಯಿಸಲು ಸಹಕಾರ ನೀಡುತ್ತೇನೆ. ಇದರಿಂದ ಆಟೋ ಚಾಲಕರ ಸಮೂಹಕ್ಕೆ ಇದು ತುಂಬಾ ಖುಷಿ ತಂದಿದೆ. ನನಗೂ ಖುಷಿ ಮತ್ತು ನನ್ನ ಮಕ್ಕಳಿಗೂ ಲತಾ ಮೇಯರ್ ಆಗಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಅವಳು ಚೆನ್ನಾಗಿ ಕೆಲಸ ಮಾಡುತ್ತಾಳೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನೂತನ ಮೇಯರ್ ಲತಾ ಅವರ ಪತಿ ಗಣೇಶ್.

English summary
Auto drivers wife, Gadikoppa ward member from BJP Latha Ganesh elected as Shivamogga mayor on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X