ಶಿವಮೊಗ್ಗ: ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ
ಶಿವಮೊಗ್ಗ, ಜನವರಿ 16: ಜಿಲ್ಲೆಯ ರಿಪ್ಪನ್ ಪೇಟೆಯ ಗವಟೂರಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಗವಟೂರು ಪಂಚಾಯಿತಿ ಸದಸ್ಯರಾಗಿರುವ ಆಸಿಫ್ (32) ಎಂಬುವರ ಮೇಲೆ ಸೋಮವಾರ ರಾತ್ರಿ ಅಗಂತುಕರು ಬೈಕ್‌ನಲ್ಲಿ ಬಂದು ತೀರ್ವವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆಸಿಫ್ ಸಹಾಯಕ್ಕೆ ಧಾವಿಸಿದ ಸ್ಥಳಿಯರು ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆಸಿಫ್ ಅವರಿಗೆ ತೀರ್ವವಾಗಿ ಗಾಯಗಳಾಗಿದ್ದು, ತಲೆಗೆ ಸಹ ಪೆಟ್ಟಾಗಿದೆ, ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲ್ಲೆಗೆ ಹಳೆಯ ದ್ವೇಷವೇ ಕಾರಣ ಎನ್ನಲಾಗುತ್ತಿದ್ದು, ಘಟನೆ ಕುರಿತು ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications