ಖಿನ್ನತೆ,ಆತಂಕ, ಒತ್ತಡದಿಂದ ದೂರವಿರಬೇಕಾ? ಯೋಗ ಶಿಬಿರಕ್ಕೆ ಬನ್ನಿ

ಶಿವಮೊಗ್ಗ, ಫೆಬ್ರವರಿ,03: ಖಿನ್ನತೆ, ಆತಂಕ, ಒತ್ತಡದಿಂದ ದೂರವಿರಬೇಕಾ? ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಬೇಕಾ? ಹೀಗೆ ಇನ್ನಿತರ ಮಾನಸಿಕ, ದೈಹಿಕ ಸಮಸ್ಯೆಗಳಿಂದ ದೂರವಿರಬೇಕಾದಲ್ಲಿ ಶಿವಮೊಗ್ಗದಲ್ಲಿ 9 ದಿನಗಳ ಕಾಲ ನಡೆಯುವ ಯೋಗ ಹಾಗೂ ಆನಂದ ಅನುಭೂತಿ ಶಿಬಿರದಲ್ಲಿ ಪಾಲ್ಗೊಳ್ಳಿ.

ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಫೆಬ್ರವರಿ 8 ರಿಂದ 17ರವರೆಗೆ ಬೆಳಿಗ್ಗೆ 6 ರಿಂದ 7 ಹಾಗೂ ಬೆಳಿಗ್ಗೆ 11 ರಿಂದ 12ರವರೆಗೆ 'ಯೋಗಶಿಬಿರ' ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಫೆಬ್ರವರಿ 8ರಿಂದ 13ರವರೆಗೆ ಪ್ರತಿದಿನ ಸಂಜೆ 6 ರಿಂದ 8ರವರೆಗೆ 'ಆನಂದ ಅನುಭೂತಿ ಶಿಬಿರ'ವಿದೆ. ಈ ಎರಡು ಶಿಬಿರ ಆನಂದ ಅನುಭೂತಿ ಕೇಂದ್ರ, ವೆಂಕಟೇಶ್ವರ ನಗರ, ಶಿವಮೊಗ್ಗದಲ್ಲಿ ನಡೆಯಲಿದೆ.[ಮಂತ್ರ ಯೋಗದ ಹಿನ್ನೆಲೆ ಹಾಗೂ ಆರೋಗ್ಯದ ಮಹತ್ಮೆ]

Art of living

18ವರ್ಷ ಮೇಲ್ಪಟ್ಟವರಿಗಾಗಿ ಸರಳ ವ್ಯಾಯಾಮಗಳು, ಆಸನಗಳು, ಯೋಗಾಭ್ಯಾಸ, ಧ್ಯಾನ, ಪ್ರಾಣಾಯಮ ಕಲಿಕೆ, ಕ್ರಿಯೆ ಸತ್ಸಂಗ ಉಸಿರಾಟದ ಪ್ರಕ್ರಿಯೆ ಹಾಗೂ ಯೋಗ್ಯವಾದ ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.[ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ]

ಯೋಗ ಶಿಬಿರದ ಲಾಭಗಳು:

* ಖಿನ್ನತೆ, ಆತಂಕ ಮೊದಲಾದ ಭಾವನಾತ್ಮಕ ಸಮಸ್ಯೆಗಳನ್ನು ನಿಯಂತ್ರಿಸಬಹುದು.
* ಸ್ಮರಣಶಕ್ತಿಯನ್ನು ಹೆಚ್ಚಿಸುವುದು ಸೇರಿದಂತೆ ಶರೀರದ ಸ್ವಾಸ್ಥ್ಯ ಕಾಪಾಡಲು ಸಹಕಾರಿ.
* ಮಿದುಳಿನ ಕಾರ್ಯಕ್ಕೆ ಉತ್ತೇಜನ, ಒತ್ತಡ ಮಟ್ಟ ಕಡಿಮೆಯಾಗುವುದು.
* ಶರೀರದ ಸಮತೋಲನ, ತೂಕ ನಿರ್ವಹಣೆ, ದೇಹದ ಶಕ್ತಿ ವರ್ಧನೆ.
* ಬೆನ್ನುನೋವು, ತೀವ್ರಕರ ಕತ್ತು ನೋವಿಗೆ ಪರಿಹಾರ.[ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ]

Art of living

ಆನಂದ ಅನುಭೂತಿ ಶಿಬಿರ :

* ಒತ್ತಡ ರಹಿತ, ಶಾಂತವಾದ ಮನಸ್ಸು
* ಆರೋಗ್ಯಕರವಾದ ದೇಹ ಮತ್ತು ಉತ್ತಮವಾದ ನಿದ್ದೆ.
* ಅಪಾರವಾದ ಸಂತೋಷ, ಉತ್ಸಾಹ ಮತ್ತು ಕ್ರಿಯಾಶೀಲತೆ
* ಸ್ವ-ಶೋಧನೆ ಮತ್ತು ನವೀನ ವಿಕಸಿತ ಜೀವನ.
* ಮಾನಸಿಕ ಖಿನ್ನತೆ, ಚಿಂತೆ ಮತ್ತು ಆತಂಕಗಳಿಂದ ಮುಕ್ತತೆ
* ಮನೆಯಲ್ಲಿ ಮತ್ತು ಕಾರ್ಯಕ್ಷೇತ್ರದ ಸಂಬಂಧಗಳಲ್ಲಿ ಸಾಮರಸ್ಯ.[ನರನಾಡಿಗಳಲ್ಲಿ ಹೊಸ ಚೈತನ್ಯ ಹೊಮ್ಮಿಸುವ ಪದ್ಮಾಸನದ ಒಳಗುಟ್ಟೇನು?]
* ಹೆಚ್ಚು ಸೃಜನಶೀಲತೆ, ಸ್ಪಷ್ಟವಾದ ಗ್ರಹಣ ಮತ್ತು ಅಭಿವ್ಯಕ್ತತೆ.
* ದೈಹಿಕ ಶಕ್ತಿ ಮತ್ತು ಸಹನ ಶಕ್ತಿಯನ್ನು ಹೆಚ್ಚಿಸುತ್ತದೆ.
* ವೈಯುಕ್ತಿಕ ಕುಶಲತೆಗಳನ್ನು ವರ್ಧಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+