Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಜೂನ್‌ 12ರ ದರಪಟ್ಟಿ

Arecanut Price: ಅಡಿಕೆ ಧಾರಣೆಯಲ್ಲಿ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ ಮಲೆನಾಡಿನ ಹೆಬ್ಬಾಗಿಲು ಅಂತಲೇ ಪ್ರಸಿದ್ಧಿ ಆಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು (ಜೂನ್‌ 12) ಯಾವ ರೀತಿಯ ಅಡಿಕೆ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ, ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕೆಂದು ನಿರ್ಧರಿಸುತ್ತಾರೆ. ಯಾಕಂದ್ರೆ ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ. ಹಾಗಾದ್ರೆ ಇಂದು ಯಾವ ಅಡಿಕೆ ಧಾರಣೆ ಎಷ್ಟಿದೆ ಎಂದು ಇಲ್ಲಿ ಗಮನಿಸಿ.

Arecanut Price Today june 12 2026 Shivamogga Market Rates Show Fluctuations Across Varieties

ಶಿವಮೊಗ್ಗ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ವಿವರ

ಅಡಿಕೆ ತಳಿ ಕನಿಷ್ಠ ಬೆಲೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ಬೆಲೆ (ಕ್ವಿಂಟಾಲ್‌ಗಳಲ್ಲಿ)
ರಾಶಿ ಅಡಿಕೆ ರೂ. 48,000 ರೂ. 53,699
ಬೆಟ್ಟೆ ಅಡಿಕೆ ರೂ. 49,000 ರೂ. 54,909
ಗೊರಬಲು ಅಡಿಕೆ ರೂ. 18,000 ರೂ. 31,000
ಹೊಸ ರಾಶಿ ಅಡಿಕೆ ಮಾದರಿ ರೂ. 40,110 ರೂ. 49,200

ಶಿಕಾರಿಪುರ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ

ಅಡಿಕೆ ವಿಧಗಳು ಕನಿಷ್ಠ ಬೆಲೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ಬೆಲೆ (ಕ್ವಿಂಟಾಲ್ ಒಂದಕ್ಕೆ)
ಹೊಸ ರಾಶಿ ಅಡಿಕೆ ಮಾದರಿ ರೂ. 38,000 ರೂ. 52,469
ಹೊಸ ಚಾಲಿ ಅಡಿಕೆ ಮಾದರಿ ರೂ. 22,000 ರೂ. 25,000

ಸಾಗರ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ

ಅಡಿಕೆ ವಿಧಗಳು ಕನಿಷ್ಠ ಬೆಲೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ಬೆಲೆ (ಕ್ವಿಂಟಾಲ್‌ಗಳಲ್ಲಿ)
ರಾಶಿ ಅಡಿಕೆ ರೂ. 42,099 ರೂ. 53,399
ಸಿಪ್ಪೆಗೋಟು ಅಡಿಕೆ ರೂ. 11,199 ರೂ. 22,299
ಬಿಳಿಗೋಟು ಅಡಿಕೆ ರೂ. 22,099 ರೂ. 28,699

ಹಿಂದಿನ ದಿನದ ಅಡಿಕೆ ಬೆಲೆಗಳ ವಿವರ

ಮಾರುಕಟ್ಟೆ ಮತ್ತು ಅಡಿಕೆ ವಿಧಗಳು ಕನಿಷ್ಠ ದರ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ (ಕ್ವಿಂಟಾಲ್‌ಗಳಲ್ಲಿ)
ಶಿವಮೊಗ್ಗ ಸರಕು ಅಡಿಕೆ ರೂ. 57,399 ರೂ. 95,039
ಶಿವಮೊಗ್ಗ ಬೆಟ್ಟೆ ಅಡಿಕೆ ರೂ. 51,599 ರೂ. 62,899
ಶಿವಮೊಗ್ಗ ರಾಶಿ ಅಡಿಕೆ ರೂ. 48,009 ರೂ. 54,099
ಶಿವಮೊಗ್ಗ ಗೊರಬಲು ಅಡಿಕೆ ರೂ. 25,015 ರೂ. 45,589
ತೀರ್ಥಹಳ್ಳಿ ರಾಶಿ ಅಡಿಕೆ ರೂ. 45,909 ರೂ. 45,909

ಇಂದಿನ ಅಡಿಕೆ ದರಗಳಿಗೂ ಮತ್ತು ಹಿಂದಿನ ದರಗಳಿಗೂ ಇರುವ ಪ್ರಮುಖ ವ್ಯತ್ಯಾಸಗಳನ್ನು ಪರಿಶೀಲಿಸಿದಾಗ, ಬೆಟ್ಟೆ ಮತ್ತು ರಾಶಿ ಅಡಿಕೆಗಳ ಮೌಲ್ಯವು ಬಹುತೇಕ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ಕಂಡುಬರುತ್ತದೆ. ಆದರೆ ಗೊರಬಲು ಹಾಗೂ ಹೊಸ ಮಾದರಿಯ ಅಡಿಕೆಗಳ ಕನಿಷ್ಠ ದರಗಳಲ್ಲಿ ತೀವ್ರತರವಾದ ಬದಲಾವಣೆಗಳಾಗಿವೆ. ಬೇಸಿಗೆ ಕಾಲದ ಮುಕ್ತಾಯದ ನಂತರ ಮಳೆಯ ಆರಂಭವು ಕೂಡ ಮಾರುಕಟ್ಟೆಗೆ ಅಡಿಕೆ ಸರಬರಾಜು ಮಾಡಲು ಮತ್ತು ದರ ನಿರ್ಧಾರಕ್ಕೆ ಬಹುಮುಖ್ಯ ಕಾರಣವಾಗಿದೆ.

ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅಡಿಕೆ ಕೃಷಿಯ ಮಹತ್ವ ಏನು?
ಅಡಿಕೆ ರಾಜ್ಯದ ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ಮಲೆನಾಡು ಹಾಗೂ ಕರಾವಳಿ ಭಾಗಗಳ ಜನರ ಪ್ರಮುಖ ವಾಣಿಜ್ಯ ಬೆಳೆಯಾಗಿಯೂ ಇದೆ.
ಜೂನ್ 12 ರಂದು ಶಿವಮೊಗ್ಗದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳ ಮಾಹಿತಿ ಎಲ್ಲಿಂದ ಲಭ್ಯ?
ಕೃಷಿ ಮೂಲಗಳ ಪ್ರಕಾರ, ಜೂನ್ 12 ರಂದು ದಾಖಲಾಗಿರುವ ಶಿವಮೊಗ್ಗ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳ ಅಡಿಕೆ ದರಗಳ ಸಂಪೂರ್ಣ ವಿವರಗಳು ಸದ್ಯ ಲಭ್ಯವಿವೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ಒಂದೇ ರೀತಿಯಲ್ಲಿ ಇರದಿರುವ ಕಾರಣವೇನು?
ವಿವಿಧ ಮಾರುಕಟ್ಟೆಗಳಲ್ಲಿ ಬೆಲೆಗಳು ಒಂದೇ ರೀತಿಯಾಗಿ ಇರುವುದಿಲ್ಲ; ಮಾರುಕಟ್ಟೆಯ ದಿನನಿತ್ಯದ ಚಲನವಲನ ಮತ್ತು ಬೇಡಿಕೆ ಆಧರಿಸಿ ಬೆಲೆ ಬದಲಾಗುತ್ತದೆ.
ಶಿವಮೊಗ್ಗ ಮಾರುಕಟ್ಟೆಯಲ್ಲಿ ಜೂನ್ 12 ರಂದು ರಾಶಿ ಮತ್ತು ಬೆಟ್ಟೆ ಅಡಿಕೆಗಳ ಕನಿಷ್ಠ ಹಾಗೂ ಗರಿಷ್ಠ ಬೆಲೆ ಎಷ್ಟು?
ಶಿವಮೊಗ್ಗದಲ್ಲಿ ರಾಶಿ ಅಡಿಕೆಗೆ ಕನಿಷ್ಠ ರೂ. 48,000 ಮತ್ತು ಗರಿಷ್ಠ ರೂ. 53,699 (ಕ್ವಿಂಟಾಲ್‌ಗೆ) ಇವೆ. ಬೆಟ್ಟೆ ಅಡಿಕೆಗೆ ಕನಿಷ್ಠ ರೂ. 49,000 ಮತ್ತು ಗರಿಷ್ಠ ರೂ. 54,909 (ಕ್ವಿಂಟಾಲ್‌ಗೆ) ಇವೆ.
ಸಹಕಾರಿ ಸಂಸ್ಥೆಗಳು ಅಥವಾ ಎಪಿಎಂಸಿ ವಹಿವಾಟುಗಳ ಮೂಲಕ ರೈತರಿಗೆ ಏನು ಪ್ರಯೋಜನ ಸಿಗುತ್ತದೆ?
ಮ್ಯಾಮ್ಕೋಸ್ ಅಥವಾ ಜಿಲ್ಲಾ ಮಟ್ಟದ ಎಪಿಎಂಸಿ ವಹಿವಾಟುಗಳ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ಹೊರಗಿನ ದಲ್ಲಾಳಿಗಳ ಶೋಷಣೆಯಿಂದ ರೈತರನ್ನು ರಕ್ಷಿಸುತ್ತದೆ. ಜೊತೆಗೆ ಮಾರುಕಟ್ಟೆ ಕುರಿತು ಸಂಪೂರ್ಣ ಜ್ಞಾನ ಒದಗಿಸುವುದರಿಂದ ರೈತರು ಸಮರ್ಪಕ ಬೆಲೆಗೆ ಮಾರಾಟ ಮಾಡಲು ಸಹಾಯವಾಗುತ್ತದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+